ದೇಶದಲ್ಲಿ 24 ಗಂಟೆಯಲ್ಲಿ 3,970 ಮಂದಿಗೆ ಕೊರೋನಾ; 85 ಸಾವಿರ ದಾಟಿದ ಸೋಂಕಿತರ ಸಂಖ್ಯೆ, 2,752 ಜನ ಸಾವು

ದೇಶದಲ್ಲೀಗ ಕೊರೋನಾ ತೀವ್ರವಾಗಿ ಹರಡುತ್ತಿರುವ ಪರಿಣಾಮ ಮಹಾರಾಷ್ಟ್ರ ಬೆನ್ನಲ್ಲೀಗ ತಮಿಳುನಾಡು ಭಾರತದ ಕೊರೋನಾ ಹಾಟ್‌ಸ್ಪಾಟ್‌ ಕೇಂದ್ರವಾಗಿ ಬದಲಾಗಿದೆ. ಇನ್ನು, ಯಾವ ರಾಜ್ಯಗಳಿಗೆ ಕೊರೋನಾ ಕಂಟಕ ಕಾದಿದೆಯೋ ಎಂಬ ಆತಂಕ ಜನರಲ್ಲಿ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಮೇ.16): ದೇಶಾದ್ಯಂತ ಮಾರಕ ಕೊರೋನಾ ವೈರಸ್​​ ವ್ಯಾಪಕವಾಗಿ ಹರಡುತ್ತಿದೆ. ಈ ಮಾರಕ ಕೊರೋನಾ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3,970 ಮಂದಿಗೆ ಬಂದಿದೆ. ಇದರ ಪರಿಣಾಮ ದೇಶದಲ್ಲಿ ಸೋಂಕಿತರ ಸಂಖ್ಯೆ 85,940ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ನಲ್ಲಿ ತಿಳಿಸಲಾಗಿದೆ.

  ಇನ್ನು, ಕೇಂದ್ರದ ಪ್ರಕಾರ ಇದುವರೆಗೂ 85,940 ಸೋಂಕಿತರ ಪೈಕಿ ಕೇವಲ 30152 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮೂಲಕ ಪ್ರಸ್ತುತ ದೇಶದಲ್ಲಿ 53,035 ಸಕ್ರಿಯ ಪ್ರಕರಣಗಳಿವೆ. ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

  ಮಾರಕ ಕೊರೋನಾಗೆ ಕಳೆದ 24 ಗಂಟೆಗಳಲ್ಲಿ 103 ಮಂದಿ ಬಲಿಯಾಗಿದ್ದಾರೆ. ಹಾಗಾಗಿ ಇದುವರೆಗೂ ಸೋಂಕಿಗೆ ಬಲಿಯಾದವರ ಸಂಖ್ಯೆ 2,752 ಏರಿಕೆಯಾಗಿದೆ. ಹೀಗಿರುವಾಗಲೇ ಸದ್ಯದಲ್ಲೇ ಕೊರೋನಾ ಸಮುದಾಯ ಹಂತ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: ‘ವಲಸೆ ಕಾರ್ಮಿಕರ ಕಾಲ್ನಡಿಗೆ ತಪ್ಪಿಸಿ ರೈಲು, ಬಸ್ಸಿನ ಮೂಲಕ ಮನೆಗೆ ತಲುಪಿಸಿ’ - ರಾಜ್ಯಗಳಿಗೆ ಕೇಂದ್ರ ಸೂಚನೆ

  ದೇಶದಲ್ಲೀಗ ಕೊರೋನಾ ತೀವ್ರವಾಗಿ ಹರಡುತ್ತಿರುವ ಪರಿಣಾಮ ಮಹಾರಾಷ್ಟ್ರ ಬೆನ್ನಲ್ಲೀಗ ತಮಿಳುನಾಡು ಭಾರತದ ಕೊರೋನಾ ಹಾಟ್‌ಸ್ಪಾಟ್‌ ಕೇಂದ್ರವಾಗಿ ಬದಲಾಗಿದೆ. ಇನ್ನು, ಯಾವ ರಾಜ್ಯಗಳಿಗೆ ಕೊರೋನಾ ಕಂಟಕ ಕಾದಿದೆಯೋ ಎಂಬ ಆತಂಕ ಜನರಲ್ಲಿ ಇದೆ.
  First published: