Zydus Cadila: ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯ; ಝೈಡಸ್ ಕ್ಯಾಡಿಲಾ ವ್ಯಾಕ್ಸಿನ್​ಗೆ ಅನುಮತಿ

First Vaccine for Children : ಕೊರೊನಾ 3ನೇ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತದೆ ಎನ್ನಲಾಗುತ್ತಿತ್ತು. ಈ ಆತಂಕದ ಮಧ್ಯೆಯೇ ಮಕ್ಕಳ ಲಸಿಕೆ ಲಭ್ಯವಾಗಿರುವುದು ಭಾರತದ ಪೋಷಕರ ಪಾಲಿಗೆ ನಿಜಕ್ಕೂ ದೊಡ್ಡ ನಿರಾಳವನ್ನು ತರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತದಲ್ಲಿ ಮಕ್ಕಳಿಗೆ ಮೊದಲ ಲಸಿಕೆ ಲಭ್ಯವಾಗಿದೆ. ಝೈಡಸ್ ಕ್ಯಾಡಿಲಾ ಅವರ ಪ್ಲಾಸ್ಮಾ ಲಸಿಕೆಗೆ ಅನುಮೋದನೆ ಸಿಕ್ಕಿದ್ದು, 12 ರಿಂದ‌ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ. ಭಾರತದಲ್ಲಿ ಝೈಡಸ್ ಕ್ಯಾಡಿಲಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಭಾರತೀಯ ಔಷಧ ನಿಯಂತ್ರಕ (DCGI) ಝೈಡಸ್ ಕ್ಯಾಡಿಲಾ ಅವರ ಮೂರು ಡೋಸ್​​ಗಳ ಡಿಎನ್ಎ ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಅನುಮೋದಿಸಿದೆ. ಈ ಲಸಿಕೆಯನ್ನು ಮಕ್ಕಳಿಗೆ 3 ಡೋಸ್​​ಗಳು ನೀಡಬೇಕಾಗುತ್ತದೆ. ದೇಶದಲ್ಲಿ ಬಳಕೆಗೆ ಅಧಿಕೃತವಾಗಿ ಲಭ್ಯವಾದ 6ನೇ ಕೊರೊನಾ ಲಸಿಕೆ ಇದಾಗಿದೆ.

  ಭಾರತ ಮಕ್ಕಳಿಗೆ ಮೊದಲ ಲಸಿಕೆಯನ್ನು ಅನುಮೋದಿಸಿದೆ. ದೇಶದಲ್ಲಿ ಮುಂಬರುವ ಕೊರೊನಾ ಅಲೆ ಎಚ್ಚರಿಕೆಯ ನಡುವೆ ಸಕಾಲಿಕ ಕ್ರಮ ಇದಾಗಿದೆ. ಕೆಲವು ತಜ್ಞರು ಕೊರೊನಾ 3ನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ. ಸಾಂಕ್ರಾಮಿಕ ರೋಗದ ಮುಂದಿನ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತದೆ ಎನ್ನಲಾಗುತ್ತಿತ್ತು. ಈ ಆತಂಕದ ಮಧ್ಯೆಯೇ ಮಕ್ಕಳ ಲಸಿಕೆ ಲಭ್ಯವಾಗಿರುವುದು ಭಾರತದ ಪೋಷಕರ ಪಾಲಿಗೆ ನಿಜಕ್ಕೂ ದೊಡ್ಡ ನಿರಾಳವನ್ನು ತರಿಸಿದೆ.

  ವಾರ್ಷಿಕವಾಗಿ 100 ದಶಲಕ್ಷದಿಂದ 120 ಮಿಲಿಯನ್ ZyCoV-D ಡೋಸ್‌ಗಳನ್ನು ತಯಾರಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಜುಲೈ 1 ರಂದು ZyCoV-D ಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದತ್ತು. 28,000 ಜನರ ಮೇಲೆ ನಡೆದ ಪ್ರಯೋಗದಲ್ಲಿ ಈ ಲಸಿಕೆ 66.6% ಪರಿಣಾಮಕಾರಿ ಎಂದು ಸಾಬೀತಾಗಿದೆ. 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 28,000 ಜನರ ಮೇಲೆ ಲಸಿಕೆಯನ್ನು ಪ್ರಯೋಗ ನಡೆಸಿದಾಗ ಶೇಕಡಾ 66.6 ರಷ್ಟು ಪ್ರಾಥಮಿಕ ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಇದುವರೆ ನಡೆದ ಅತಿದೊಡ್ಡ ಲಸಿಕಾ ಪ್ರಯೋಗ ಇದಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: