ಭಾರತದಲ್ಲಿ 1 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ; 27 ಮಂದಿ ಸಾವು

ವಿಶ್ವಾದ್ಯಂತ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಭಾನುವಾರ ಸಾವಿನ ಸಂಖ್ಯೆ 33 ಸಾವಿರ ಗಡಿ ಮುಟ್ಟಿದೆ.

news18
Updated:March 29, 2020, 11:00 PM IST
ಭಾರತದಲ್ಲಿ 1 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ; 27 ಮಂದಿ ಸಾವು
ಸಾಂದರ್ಭಿಕ ಚಿತ್ರ
  • News18
  • Last Updated: March 29, 2020, 11:00 PM IST
  • Share this:
ನವದೆಹಲಿ(ಮಾ. 29): ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತಂದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಇದೆ. ದೇಶಾದ್ಯಂತ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1,024ಕ್ಕೆ ಮುಟ್ಟಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 901 ಮಂದಿಯಲ್ಲಿ ಈಗ ಕೊರೋನಾ ಸೋಂಕು ಇರುವುದು (Active cases) ಪತ್ತೆಯಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ. 96 ಮಂದಿ ಸೋಂಕಿನಿಂದ ಮುಕ್ತಗೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ.

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 83 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಈ ಸಂಖ್ಯೆ 200 ಗಡಿ ದಾಟಿದೆ. ಉತ್ತರ ಪ್ರದೇಶದಲ್ಲಿ ಇದು 70ರ ಮೇಲಿದೆ. ದೆಹಲಿಯಲ್ಲಿ ದಿನೇ ದಿನೇ ಆತಂಕಕಾರಿ ರೀತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು ಒಂದೇ ದಿನ 20ಕ್ಕೂ ಹೆಚ್ಚು ಪ್ರಕರಣಗಳೂ ಬೆಳಕಿಗೆ ಬಂದಿವೆ.

ವೈರಸ್ ಹರಡುವ ಶಂಕೆಯಿಂದ ಲಕ್ನೋ ಜೈಲಿನಲ್ಲಿದ್ದ 38 ಕೈದಿಗಳನ್ನ ಪೆರೋಲ್ ಮೇಲೆ ಹೊರಗೆ ಬಿಡುಗಡೆ ಮಾಡಲಾಗಿದೆ. ಇವರಿಗೆ 8 ವಾರ ಅವಕಾಶ ಕೊಡಲಾಗಿದೆ. ಈ ಜೈಲಿನಲ್ಲಿರುವ 600 ಕೈದಿಗಳನ್ನೂ ಕೂಡ ಇದೇ ರೀತಿ ಹೊರಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೊರಗೆ ಬಿಡುವ ಮುನ್ನ ಪ್ರತಿಯೊಬ್ಬ ಕೈದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಈ ಊರಲ್ಲಿ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲುಕೊಟ್ಟ ಮುಸ್ಲಿಮರು

ಇನ್ನು, ವಿಶ್ವಾದ್ಯಂತ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಭಾನುವಾರ ಸಾವಿನ ಸಂಖ್ಯೆ 33 ಸಾವಿರ ಗಡಿ ಮುಟ್ಟಿದೆ. ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,33,000 ಗಡಿ ದಾಟಿದೆ. ಇದು ವಿಶ್ವದಲ್ಲೇ ಗರಿಷ್ಠ. ಇಟಲಿ ದೇಶದಲ್ಲಿ ಈ ಸಂಖ್ಯೆ ಲಕ್ಷದ ಗಡಿ ಸಮೀಪಿಸಿದೆ. ಸಾವಿನ ವಿಚಾರದಲ್ಲಿ ಇಟಲಿ ನಂಬರ್ ಸ್ಥಾನದಲ್ಲೇ ಇದೆ. ಇಲ್ಲಿ 10,700ಕ್ಕೂ ಹೆಚ್ಚು ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ಸ್ಪೇನ್​ನಲ್ಲೂ 6,500ಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ಧಾರೆ.

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಹಲವು ದಿನಗಳ ಕಾಲ ದೇಶವ್ಯಾಪಿ ಲಾಕ್ ಡೌನ್ ಕ್ರಮ ಜರುಗಿಸಿವೆ. ಆದರೂ ಕೂಡ ವೈರಸ್ ಸೋಂಕು ಹರಡುವುದು ಕಡಿಮೆಯಾಗಿಲ್ಲ. ತಜ್ಞರು ಪ್ರಕಾರ ಇನ್ನೆರಡು ವಾರಗಳು ಬಹಳ ಮುಖ್ಯವಿದೆ. ಲಾಕ್ ಡೌನ್ ಕ್ರಮ ಮಾತ್ರದಿಂದಲೇ ಸೋಂಕು ತಡೆಯಲು ಅಸಾಧ್ಯ. ವ್ಯಾಪಕ ಪರೀಕ್ಷೆ ಮತ್ತು ಚಿಕಿತ್ಸಾ ವ್ಯವಸ್ಥೆ ಇದ್ದರೆ ಯಶಸ್ಸು ಗಳಿಸಬಹುದು ಎನ್ನಲಾಗುತ್ತಿದೆ.

First published:March 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading