Independence Day 2020: ಕೊರೋನಾ ಕರಿ ನೆರಳಿನಲ್ಲೇ ಕೆಂಪುಕೋಟೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

Independence day 2020: ಪ್ರಧಾನಿ ಭಾಷಣದ ಬಳಿಕ ಎನ್​​ಸಿಸಿ ಬೆಟಾಲಿಯನ್​​ಗಳಿಂದ ರಾಷ್ಟ್ರಗೀತೆ ಗಾಯನ ಇರಲಿದೆ. ಇದಾದ ಮೇಲೆ ರಕ್ಷಣಾ ಸಚಿವ, ಸಿಡಿಎಸ್ ಮತ್ತು ಮೂರು ಸೇನೆಯ ಮುಖ್ಯಸ್ಥರು ಪ್ರಧಾನ ಮಂತ್ರಿ ಮೋದಿಯನ್ನು ಬೀಳ್ಕೊಡಲಿದ್ದಾರೆ.

ಭಾರತದ ರಾಷ್ಟ್ರಧ್ವಜ

ಭಾರತದ ರಾಷ್ಟ್ರಧ್ವಜ

  • Share this:
ನವದೆಹಲಿ(ಆ.14): ಕೊರೋನಾ ಕರಿ ನೆರಳಿನ ನಡುವೆ 74ನೇ ಸ್ವತಂತ್ರ್ಯ ದಿನಾಚರಣೆ ನಡೆಯಲಿದೆ. ಸ್ವತಂತ್ರ್ಯ ದಿನಾಚರಣೆ ಪ್ರಮುಖ ಆಕರ್ಷಣೆ ಆಗಿರುವ ಕೆಂಪು ಕೋಟೆ ಕಾರ್ಯಕ್ರಮವೂ ಕೊರೋನಾ ಹಿನ್ನಲೆಯಲ್ಲಿ ಈ‌ ಸರಳವಾಗಿ ನಡೆಯಲಿದೆ. ಈ‌ ಬಾರಿಯ ಕೆಂಪುಕೋಟೆ ಕಾರ್ಯಕ್ರಮಕ್ಕೆ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕೊರೋನಾ ಕಾರಣಕ್ಕೆ ಸಾರ್ವಜನಿಕರಿಗೆ ಈ ಬಾರಿ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಂಪು ಕೋಟೆ ಕಾರ್ಯಕ್ರಮದ ವೇಳೆ ನಡೆಯುವ ಧ್ವಜಾರೋಹಣ ಮತ್ತು ಪ್ರಧಾನ ಮಂತ್ರಿ ಭಾಷಣ ಪ್ರಮುಖ ಆಕರ್ಷಣೆ ಆಗಿರಲಿದೆ.

ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲು ರಾಜಘಾಟ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ 8ರಿಂದ 10 ನಿಮಿಷ ಇರುವ ಮೋದಿ, ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಬಳಿಕ ಕೆಂಪುಕೋಟೆ ಕಡೆಗೆ  ತೆರಳಲಿದ್ದಾರೆ. 7:18ಕ್ಕೆ ಕೆಂಪುಕೋಟೆಗೆ ಬರುವ ಮೋದಿ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತ ಕೋರಲಿದ್ದಾರೆ.

ಬೆಳಿಗ್ಗೆ 7:30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಂತ್ರ್ಯ ದಿನಾಚರಣೆಯ ಪ್ರಮುಖ‌ ಘಟ್ಟವಾದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣ ಆಗುತ್ತಿದ್ದಂತೆ 21 ಫಿರಂಗಿ ಗುಂಡುಗಳನ್ನು ಸಿಡಿಸಲಾಗುತ್ತದೆ. ಇದಾದ ಕೂಡಲೇ 7:32ಕ್ಕೆ ಪ್ರಧಾನಿ ಮೋದಿ ದೇಶವನ್ನು ಉದ್ದೇಶೀಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಿ ಭಾಷಣದ ಬಳಿಕ ಎನ್​​ಸಿಸಿ ಬೆಟಾಲಿಯನ್​​ಗಳಿಂದ ರಾಷ್ಟ್ರಗೀತೆ ಗಾಯನ ಇರಲಿದೆ. ಇದಾದ ಮೇಲೆ ರಕ್ಷಣಾ ಸಚಿವ, ಸಿಡಿಎಸ್ ಮತ್ತು ಮೂರು ಸೇನೆಯ ಮುಖ್ಯಸ್ಥರು ಪ್ರಧಾನ ಮಂತ್ರಿ ಮೋದಿಯನ್ನು ಬೀಳ್ಕೊಡಲಿದ್ದಾರೆ.

ಇದನ್ನೂ ಓದಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್
Published by:Ganesh Nachikethu
First published: