HOME » NEWS » Coronavirus-latest-news » INDIA BECAME THE WORLDS 9TH LARGEST RECIPIENT OF THE FDI IN 2019 GNR

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತಕ್ಕೆ 9ನೇ ಸ್ಥಾನ - ವಿಶ್ವಸಂಸ್ಥೆ ವರದಿ

ಇನ್ನು, ಪ್ರಪಂಚದ ಎಫ್‌ಡಿಐ ಹೆಚ್ಚು ಆಕರ್ಷಿಸಿದ ಟಾಪ್‌ 10 ದೇಶಗಳಲ್ಲಿ ಭಾರತ 9ನೇ ಸ್ಥಾನಗಳಿಸಿದೆ. 2020ರಲ್ಲಿ ಜಾಗತಿಕ ವಿದೇಶಿ ಬಂಡವಾಳದ ಹರಿವು ಶೇ.40ರಷ್ಟು ಏರಿಕೆ ಆಗಲಿದೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

news18-kannada
Updated:June 18, 2020, 10:16 AM IST
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತಕ್ಕೆ 9ನೇ ಸ್ಥಾನ - ವಿಶ್ವಸಂಸ್ಥೆ ವರದಿ
ನರೇಂದ್ರ ಮೋದಿ
  • Share this:
ನವದೆಹಲಿ(ಜೂ.18): ತೀವ್ರ ಕೋವಿಡ್​​-19 ಸಂಕಷ್ಟದ ನಡುವೆಯೂ ಭಾರತಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದೆ. 2019-20ನೇ ಹಣಕಾಸು ವರ್ಷದಲ್ಲಿ ಭಾರತವೂ 51 ಶತಕೋಟಿ ಡಾಲರ್‌(3.87 ಲಕ್ಷ ಕೋಟಿ ರೂ.) ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸಿದೆ ಎನ್ನಲಾಗುತ್ತಿದೆ. ಈ ಮೂಲಕ ಭಾರತ ಪ್ರಪಂಚದಲ್ಲೇ ಅತೀ ಹೆಚ್ಚು ವಿದೇಶಿ ನೇರ ಬಂಡವಾಳ(ಎಫ್​ಡಿಐ) ಆಕರ್ಷಿಸಿದ 9ನೇ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

ಕಳೆದ 2018ರಲ್ಲಿ ಭಾರತ 42 ಶತಕೋಟಿ ಡಾಲರ್​ನಷ್ಟು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿತ್ತು. ಈ ಮೂಲಕ ವಿಶ್ವದಲ್ಲಿ ಅತೀಹೆಚ್ಚು ಎಫ್​​ಡಿಐ ಆಕರ್ಷಿಸಿದ ರಾಷ್ಟ್ರಗಳಲ್ಲಿ ಭಾರತವು 12ನೇ ಸ್ಥಾನದಲ್ಲಿತ್ತು.

ಇತ್ತೀಚೆಗೆ ವಾಣಿಜ್ಯಾಭಿವೃದ್ಧಿ ಸಂಬಂಧ ವಿಶ್ವಸಂಸ್ಥೆಯ ಸಮ್ಮೇಳನ ನಡೆಯಿತು. ಇಲ್ಲಿನ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯೂ ವಾಣಿಜ್ಯಾಭಿವೃದ್ಧಿ ಕುರಿತಾದ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತೀವ್ರ ಕೊರೋನಾ ಬಿಕ್ಕಟ್ಟಿನ ಮಧ್ಯೆಯೂ ಭಾರತದ ಮಾರುಕಟ್ಟೆ ವಿದೇಶಿ ಬಂಡವಾಳವನ್ನು ಆಕರ್ಷಿಸಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಕೋವಿಡ್​​-19: ಒಂದೇ ದಿನ 2,174 ಮಂದಿಗೆ ವೈರಸ್​​; 50 ಸಾವಿರ ದಾಟಿದ ಸೋಂಕಿತರ ಸಂಖ್ಯೆ
Youtube Video

ಇನ್ನು, ಪ್ರಪಂಚದ ಎಫ್‌ಡಿಐ ಹೆಚ್ಚು ಆಕರ್ಷಿಸಿದ ಟಾಪ್‌ 10 ದೇಶಗಳಲ್ಲಿ ಭಾರತ 9ನೇ ಸ್ಥಾನಗಳಿಸಿದೆ. 2020ರಲ್ಲಿ ಜಾಗತಿಕ ವಿದೇಶಿ ಬಂಡವಾಳದ ಹರಿವು ಶೇ.40ರಷ್ಟು ಏರಿಕೆ ಆಗಲಿದೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.
First published: June 18, 2020, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories