HOME » NEWS » Coronavirus-latest-news » INDEPENDENCE DAY 2020 PRESIDENT RAM NATH KOVIND TO ADDRESS NATION AT 7PM TODAY GNR

74ನೇ ಸ್ವಾತಂತ್ರ್ಯ ದಿನಾಚರಣೆ: ಸಂಜೆ 7 ಗಂಟೆಗೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಭಾಷಣ

Independence Day 2020: ಸಂಜೆ 7 ಗಂಟೆಗೆ ಮೊದಲು ಇಂಗ್ಲೀಷ್​​​ನಲ್ಲಿ ನಂತರ ಹಿಂದಿಯಲ್ಲಿ ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಸಾವಿರಾರು ಹೋರಾಟಗಾರರನ್ನು ನೆನೆಯಲಿದ್ದಾರೆ ಎನ್ನಲಾಗುತ್ತಿದೆ.​​​​

news18-kannada
Updated:August 14, 2020, 8:58 AM IST
74ನೇ ಸ್ವಾತಂತ್ರ್ಯ ದಿನಾಚರಣೆ: ಸಂಜೆ 7 ಗಂಟೆಗೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಭಾಷಣ
ರಾಷ್ಟ್ರಪತಿ ರಾಮನಾಥ್​ ಕೋವಿಂದ್​
  • Share this:
ನವದೆಹಲಿ(ಆ.14): 74ನೇ ಸ್ವಾತಂತ್ರ್ಯ ದಿನಾಚರಣೆಗೆ ಒಂದೇ ದಿನ ಬಾಕಿ ಇದೆ. ಮಾರಕ ಕೊರೋನಾ ಸೋಂಕು ತೀವ್ರತೆ ಇನ್ನೂ ಕಡಿಮೆಯಾಗ ಕಾರಣ ಈ ವರ್ಷ ಯಾವುದೇ ಸಾರ್ವಜನಿಕ ಸಭೆ-ಸಮಾರಂಭಗಳು ಇಲ್ಲದೆ ಸರಳವಾಗಿ ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಿರುವಾಗಲೇ ನಾಳೆ ದೇಶಾದ್ಯಂತ ನಾಳೆ 72ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರವನ್ನುದ್ದೇಶಿಸಿ ಮೊದಲ ಭಾಷಣ ಮಾಡಲಿದ್ದಾರೆ.

ಇವತ್ತು ದೇಶವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾತಾಡಲಿದ್ದಾರೆ. ಸಂಜೆ 7 ಗಂಟೆಗೆ ಮೊದಲು ಇಂಗ್ಲೀಷ್​​​ನಲ್ಲಿ ನಂತರ ಹಿಂದಿಯಲ್ಲಿ ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಸಾವಿರಾರು ಹೋರಾಟಗಾರರನ್ನು ನೆನೆಯಲಿದ್ದಾರೆ ಎನ್ನಲಾಗುತ್ತಿದೆ.​​​​

ಪ್ರತಿವರ್ಷ ಸ್ವಾತಂತ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿ ಪರೇಡ್ ಮಾಡಲಾಗುತ್ತಿತ್ತು. ಭಾರತದ ಪ್ರಧಾನಿ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು. ಆದರೆ, ಈ ವರ್ಷ ಎಲ್ಲವೂ ಸರಳವಾಗಿ ನೆರವೇರಲಿದೆ.

ಇದನ್ನೂ ಓದಿ: Indian Independence Day: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ ಮತ್ತು ಮಹತ್ವ

ಈ ವರ್ಷ ಸಾಮಾಜಿಕ ಅಂತರ ಕಾಯ್ದುಕೊಂಡು ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿಚಾರಣೆ ಮಾಡಲಾಗುವುದು. ಇದಕ್ಕಾಗಿ ಸಕಲ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಂದಿನಂತೆ ಧ್ವಜಾರೋಹಣ ಇರುತ್ತದೆ. ಆದರೆ ಸೀಮಿತ ಸಂಖ್ಯೆಯಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ಕೊರೋನಾ ಕಾರಣ ಶಾಲಾ ಮಕ್ಕಳು ಮಾತ್ರ ಭಾಗವಹಿಸುವುದಿಲ್ಲ. ಬದಲಾಗಿ 500 ಎನ್​ಸಿಸಿ ಕೆಡೆಟ್​ಗಳು ಭಾಗಿಯಾಗುತ್ತಾರೆ.

ಈ ಬಾರಿ ಸಾಮಾಜಿಕ ಅಂತರ ಕಡ್ಡಾಯ. ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ನಾಳೆಯ ಸ್ವಾತಂತ್ರ್ಯೋತ್ಸವದಲ್ಲಿ ವಾಯುಸೇನೆ, ಭೂಸೇನೆ ಮತ್ತು ನೌಕಾ ಸೇನೆಯ ಬ್ಯಾಂಡ್ ಪ್ರದರ್ಶನವಿರುತ್ತದೆ. ಸುಮಾರು 1,500 ಕೊರೋನಾ ವಾರಿಯರ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Published by: Ganesh Nachikethu
First published: August 14, 2020, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories