ಬೆಂಗಳೂರಿನಲ್ಲಿ ಏರುತ್ತಲೇ ಇದೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ; ಇಂದು ಹೊಸದಾಗಿ ಎರಡು ವಾರ್ಡ್‌ ಸೇರ್ಪಡೆ

ಬೊಮ್ಮನಹಳ್ಳಿಯ ಪುಟ್ಟೇನಹಳ್ಳಿ ವಾರ್ಡ್ ಮತ್ತು ಮಹಾಲಕ್ಷ್ಮಿ ಲೇಔಟ್‌ನ ಮಾರಪ್ಪನ ಪಾಳ್ಯವನ್ನು ಇಂದು ಬಿಬಿಎಂಪಿ ಅಧಿಕಾರಿಗಳು ಕಂಟೈನ್‌ಮೆಂಟ್ ಝೋನ್ ಗೆ ಸೇರ್ಪಡೆ ಮಾಡಿದ್ದಾರೆ. ಇವು ಜೂನ್ 19ರ ವರೆಗೂ ಚಾಲ್ತಿಯಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.

news18india
Updated:May 23, 2020, 7:39 PM IST
ಬೆಂಗಳೂರಿನಲ್ಲಿ ಏರುತ್ತಲೇ ಇದೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ; ಇಂದು ಹೊಸದಾಗಿ ಎರಡು ವಾರ್ಡ್‌ ಸೇರ್ಪಡೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 23); ರಾಜ್ಯ ರಾಜಧಾನಿಯಿಂದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳನ್ನು ಹೆಚ್ಚಳ ಮಾಡಲಾಗುತ್ತಿದೆ. ನಗರದಲ್ಲಿ ಈ ವರೆಗೆ 22 ಇದ್ದ ಕಂಟೈನ್ಮೆಂಟ್ ಜೋನ್ ವಾರ್ಡ್‌‌ಗೆ ಇದೀಗ ಹೊಸದಾಗಿ 2 ವಾರ್ಡ್ ಸೇರ್ಪಡೆ ಮಾಡಲಾಗಿದೆ.

ಬೊಮ್ಮನಹಳ್ಳಿಯ ಪುಟ್ಟೇನಹಳ್ಳಿ ವಾರ್ಡ್ ಮತ್ತು ಮಹಾಲಕ್ಷ್ಮಿ ಲೇಔಟ್‌ನ ಮಾರಪ್ಪನ ಪಾಳ್ಯವನ್ನು ಇಂದು ಬಿಬಿಎಂಪಿ ಅಧಿಕಾರಿಗಳು ಕಂಟೈನ್‌ಮೆಂಟ್ ಝೋನ್ ಗೆ ಸೇರ್ಪಡೆ ಮಾಡಿದ್ದಾರೆ. ಇವು ಜೂನ್ 19ರ ವರೆಗೂ ಚಾಲ್ತಿಯಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.

ಇಂದು ಈ ಎರಡೂ ವಾರ್ಡ್‌ನಲ್ಲಿ ಹೊಸದಾಗಿ ಕೊರೋನಾ ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದವು. ಈ ಹಿನ್ನೆಲೆ ಬಿಬಿಎಂಪಿ ಈ ಎರಡೂ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೊನ್ ಲಿಸ್ಟ್‌ಗೆ ಸೇರಿಸಿದೆ. ಮುಂದಿನ ದಿನಗಳಲ್ಲಿ ಮಹಾ ನಗರದಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಕೊರೋನಾ ಸೋಂಕಿಗೆ ಕಡಿಮೆ ‌ದರದಲ್ಲಿ ವೆಂಟಿಲೇಟರ್ ಆವಿಷ್ಕಾರ; ಧಾರವಾಡ ಕಾಲೇಜಿನ ಸಾಧನೆ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading