HOME » NEWS » Coronavirus-latest-news » INCREASING COVID CASES IN CHIKKAMAGALURU PEOPLE ARE INTERESTED TO TAKE VACCINE VCTV SESR

Covid Vaccine: ಕಾಫಿನಾಡಿನಲ್ಲಿ ಹೆಚ್ಚಾಗುತ್ತಿರುವ ಸೋಂಕು ಪ್ರಕರಣ: ಲಸಿಕೆಗಾಗಿ ಮುಗಿಬಿದ್ದ ಜನ

ಲಸಿಕೆ ವಿತರಣೆ ಆರಂಭ ಕಾಲದಲ್ಲಿ ಈ ಬಗ್ಗೆ ಹೆಚ್ಚಿನ ಒಲವು ತೋರದ ಜನ ಕಳೆದ ಎರಡ್ಮೂರು ದಿನಗಳಿಂದ ಲಸಿಕೆ ಕೇಂದ್ರಗಳತ್ತ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂದಿದೆ. 

news18-kannada
Updated:April 27, 2021, 5:38 PM IST
Covid Vaccine: ಕಾಫಿನಾಡಿನಲ್ಲಿ ಹೆಚ್ಚಾಗುತ್ತಿರುವ ಸೋಂಕು ಪ್ರಕರಣ: ಲಸಿಕೆಗಾಗಿ ಮುಗಿಬಿದ್ದ ಜನ
ಲಸಿಕೆಗೆ ಕಾದಿರುವ ಜನ
  • Share this:
ಚಿಕ್ಕಮಗಳೂರು (ಏ. 27): ಕಾಫಿನಾಡಿನಲ್ಲಿ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸೋಂಕಿನ ವಿರುದ್ಧ ಹೋರಾಡಲು ಸದ್ಯಕ್ಕಿರುವ ರಾಮಬಾಣ ಲಸಿಕೆಯಾಗಿದೆ. ಇದೇ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲೆಯ ಜನರು ಮುಂದಾಗುತ್ತಿದ್ದಾರೆ. ಲಸಿಕೆ ವಿತರಣೆ ಆರಂಭ ಕಾಲದಲ್ಲಿ ಈ ಬಗ್ಗೆ ಹೆಚ್ಚಿನ ಒಲವು ತೋರದ ಜನ ಕಳೆದ ಎರಡ್ಮೂರು ದಿನಗಳಿಂದ ಲಸಿಕೆ ಕೇಂದ್ರಗಳತ್ತ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂದಿದೆ.  ಇದರಿಂದಾಗಿ ಈ ಹಿಂದೆ ಲಸಿಕೆ ಗುರಿ ತಲುಪಲು ಹರಸಾಹಸ ಮಾಡುತ್ತಿದ್ದ ಆರೋಗ್ಯ ಸಿಬ್ಬಂದಿ ನಿರೀಕ್ಷೆಗೆ ಮೀರಿ ಗುರಿ ತಲುಪುತ್ತಿದ್ದಾರೆ.

ಕೊರೋನಾ ಎರಡನೇ ಅಲೆ ಆರಂಭದಲ್ಲಿಯೂ ಜಿಲ್ಲೆಯ ಜನರಲ್ಲಿ ಅಷ್ಟಾಗಿ ಜಾಗ್ರತೆ ಕಂಡಿರಲಿಲ್ಲ. ಕೊರೋನಾ ಇಲ್ಲ ಎಂಬ ನಿರ್ಲಕ್ಷ್ಯ ಭಾವದಲ್ಲಿ  ಮುಖಕ್ಕೆ ಮಾಸ್ಕ್ ಇಲ್ಲದೇ,  ಸಾಮಾಜಿಕ ಅಂತರವೂ ಇಲ್ಲದೇ,  ಬೇಕಾಬಿಟ್ಟಿ ಓಡಾಡುತ್ತಿದ್ದರು. ಆರಂಭದಲ್ಲಿ ಜಿಲ್ಲೆಯಲ್ಲಿ 15-20-30 ಪ್ರಕರಣ ದಾಖಲಾಗುತ್ತಿದ್ದ ಹಿನ್ನಲೆ ಜನರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.  ಜೊತೆಗೆ ಆರಂಭದಲ್ಲಿ ವ್ಯಾಕ್ಸಿನ್ ಪಡೆಯಿರಿ ಎಂದರೆ ಜ್ವರ ಬರುತ್ತದೆ. ವ್ಯಾಕ್ಸಿನ್ ಪಡೆದವರಿಗೂ ಕೊರೋನಾ ಬಂದಿದೆ. ಬೇಕಾದಾಗ ಹೋಗಿ ತೆಗೆದುಕೊಳ್ಳೋಣ ಎಂಬ ಧೋರಣೆ ಹೊಂದಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನ ನೂರು, ನೂರೈವತ್ತು, ಇನ್ನೂರು, ಇನ್ನೂರೈವತ್ತು ಪ್ರಕರಣ ಕಂಡು ಜನರು ಕಂಗಾಲಾಗಿದ್ದಾರೆ. ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗ್ತಿದ್ದಂತೆ ಜನ ಸ್ವಯಂ ಪ್ರೇರಿತರಾಗಿ ಬಂದು ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಅಲ್ಲದೇ, ವ್ಯಾಕ್ಸಿನ್ ಪಡೆದವರಿಗೆ ಕೊರೋನಾ ಬಂದಿದ್ದು ತುಂಬಾ ಕಡಿಮೆ ಅಂದಾಗ ಈಗ ವ್ಯಾಕ್ಸಿನ್‍ಗೆ ಮುಗಿಬಿದ್ದಿದ್ದಾರೆ. ತುಂಬಾ ಜನ ಇದ್ದಾರೆ ಮಧ್ಯಾಹ್ನ ಬನ್ನಿ ಎಂದರೆ, ಹೇಗೂ ಬಂದಿದ್ದೀವಿ ಪಡೆದೆ ಹೋಗುತ್ತೇವೆ ಎಂದು  ಆಸ್ಪತ್ರೆ ಬಾಗಿಲು  ಮುಂದೆಯೇ ಕಾಯುತ್ತಿದ್ದಾರೆ.

ಇದನ್ನು ಓದಿ: ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ: ಕೋವಿಡ್​ಗೆ ಬಲಿಯಾದ 30ರ ಯುವಕ

ಜಿಲ್ಲೆಯಲ್ಲಿ ಈವರೆಗೂ ಮೊದಲ ಹಂತದಲ್ಲಿ 1.67.461 ಮಂದಿಗೆ ಲಸಿಕೆ ನೀಡಲಾಗಿದೆ. ಎರಡನೇ ಹಂತದಲ್ಲಿ 1.87.557 ಲಸಿಕೆ ನೀಡಿದ್ದು ಒಟ್ಟಾರೆ 1.86.215 ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಲಸಿಕೆ ತೆಗೆದುಕೊಂಡವರಲ್ಲಿ 33 ಜನರಿಗೆ ಕೊವೀಡ್ ಪಾಸಿಟಿವ್ ಬಂದಿದೆ. ಆದರೆ, ಅದು ಶೇಕಡವಾರು ಲಸಿಕೆ ಪಡೆದವರಲ್ಲಿ ಕೊವೀಡ್ ಬರುವುದು ತುಂಬಾ ಕಡಿಮೆ ಅಂತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಮೊದಲು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದ್ದರು. ಆರಂಭದಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ತುಂಬಾ ಕಡಿಮೆ ಇತ್ತು. ಸರ್ಕಾರದ ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಪ್ರತಿ ದಿನ 6 ಸಾವಿರದಿಂದ ಏಳು ಸಾವಿರ ಲಸಿಕೆ ನೀಡುತ್ತಿದ್ದು, ಕೊರೋನಾ ಲಸಿಕೆ ಪಡೆಯಲು ಜನ ಕೂಡ ಮುಂದೆ ಬರುತ್ತಿದ್ದಾರೆ.

ಒಟ್ಟಾರೆ, ವ್ಯಾಕ್ಸಿನ್ ಹಂಚಿಕೆಯ ಆರಂಭದ ದಿನಗಳಲ್ಲಿ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಜನರಿಗೆ ಈಗ ನಂಬಿಕೆ ಮೂಡಲಾರಂಭಿಸಿದೆ. ಅಲ್ಲದೇ, ಯಾಕೆ ಪದೇ ಪದೇ ಮಾಸ್ಕ್​ ಹಾಕಿ, ಸಾಮಾಜಿಕ ಅಂತರ ಕಾಪಾಡಿ ಎಂಬುದು ಅರಿವರಿಗೆ ಬಂದಿದ್ದು, ಜನರು ಸ್ವಯಂ ಜಾಗೃತಿಗೆ ಮುಂದಾಗಿದ್ದಾರೆ.
Published by: Seema R
First published: April 27, 2021, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories