ಆಂಧ್ರ-ತೆಲಂಗಾಣದಲ್ಲಿ ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್; ಆತಂಕದಲ್ಲಿದೆ ಗಡಿ ಹಂಚಿಕೊಂಡಿರುವ ರಾಯಚೂರು ಜಿಲ್ಲೆ

ಗದ್ವಾಲದಲ್ಲಿ 19 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಈ ಪೈಕಿ ಒಂದು ಸಾವನ್ನಪ್ಪಿದ್ದರೆ, ಕರ್ನೂಲಿನಲ್ಲಿ ಸುಮಾರು 56 ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಎಲ್ಲಾ ಪ್ರಕರಣಗಳು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದ ನಂತರ ವರದಿಯಾಗಿರುವುದು ಉಲ್ಲೇಖಾರ್ಹ. 

news18-kannada
Updated:April 8, 2020, 11:28 AM IST
ಆಂಧ್ರ-ತೆಲಂಗಾಣದಲ್ಲಿ ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್; ಆತಂಕದಲ್ಲಿದೆ ಗಡಿ ಹಂಚಿಕೊಂಡಿರುವ ರಾಯಚೂರು ಜಿಲ್ಲೆ
ರಾಯಚೂರು ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವ ಪೊಲೀಸರು.
  • Share this:
ರಾಯಚೂರು (ಏಪ್ರಿಲ್ 08); ನೆರೆಯ ಆಂಧ್ರಪ್ರದೇಶದ ಮತ್ತು ತೆಲಂಗಾಣದಲ್ಲಿ ದಿನೇ ದಿನೇ ಕೊರೋನಾ ಪೀಡಿತರ ಸಂಖ್ಯೆ ಅಧಿಕವಾಗುತ್ತಿದ್ದ, ಈ ರಾಜ್ಯದ ಜೊತೆಗೆ ಗಡಿ ಹಂಚಿಕೊಂಡಿರುವ ರಾಯಚೂರಿನ ಜನ ಇದೀಗ ಆತಂಕದಲ್ಲಿ ದಿನದೂಡುವಂತಾಗಿದೆ.

ನಿನ್ನೆ ಸಂಜೆ 6 ಗಂಟೆಯಿಂದ ಈವರೆಗೆ ಆಂಧ್ರಪ್ರದೇಶದಲ್ಲಿ ಹೊಸದಾಗಿ 15 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಆಂಧ್ರದಲ್ಲಿ ಸೋಂಕು ಪೀಡಿತರ ಸಂಖ್ಯೆ 329ಕ್ಕೆ ಏರಿಕೆಯಾಗಿದೆ. ಇನ್ನೂ ತೆಲಂಗಾಣದ ಗದ್ವಾಲ, ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳು ಅಧಿಕವಾಗುತ್ತಿವೆ

ಗದ್ವಾಲದಲ್ಲಿ 19 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಈ ಪೈಕಿ ಒಂದು ಸಾವನ್ನಪ್ಪಿದ್ದರೆ, ಕರ್ನೂಲಿನಲ್ಲಿ ಸುಮಾರು 56 ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಎಲ್ಲಾ ಪ್ರಕರಣಗಳು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದ ನಂತರ ವರದಿಯಾಗಿರುವುದು ಉಲ್ಲೇಖಾರ್ಹ.

ಹೀಗಾಗಿ ಈ ಎರಡೂ ಜಿಲ್ಲೆಗಳ ಜೊತೆಗೆ ಗಡಿ ಹಂಚಿಕೊಂಡಿರುವ ರಾಯಚೂರಿನ ಜನ ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ರಾಯಚೂರು ಜಿಲ್ಲೆಯ ಗಡಿಗಳಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಸಿಂಗನೋಡಿ, ಯರೆಗೇರಾ, ಕೊತ್ತದೊಡ್ಡಿ ಹಾಗೂ ಗಿಲ್ಲೆಗಸೂರು ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಈ ಜಿಲ್ಲೆಗಳಿಗೆ ಹೋಗಿ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಆದರೂ, ಬೈಕ್ ಸವಾರರು ಹೊಲಗಳಲ್ಲಿ ಅಡ್ಡದಾರಿಗಳನ್ನು ಬಳಸಿ ರಾಯಚೂರಿನತ್ತ ಪ್ರವೇಶ ಮಾಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ರಾಯಚೂರಿನಲ್ಲಿ ಈವರೆಗೆ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಆದರೆ, ರಾಯಚೂರು ಜಿಲ್ಲೆಯ ವ್ಯಾಪಾರ, ಸಮಾಜಿಕ ಸಂಪರ್ಕ ಎರಡೂ ಸಹ ಗದ್ವಾಲ, ಮಹಿಬೂಬನಗರ ಹಾಗೂ ಕರ್ನೂಲ ಜಿಲ್ಲೆಯವರದು ಅಧಿಕ ಸಂಖ್ಯೆಯಲ್ಲಿರುವ ಕಾರಣ ಕೊರೋನಾ ಇಲ್ಲೂ ವ್ಯಾಪಿಸುತ್ತದೆಯೇ ಎಂಬ ಆತಂಕ ಎಲ್ಲರಲ್ಲೂ ಶುರುವಾಗಿದೆ.

ಇದನ್ನೂ ಓದಿ : ದೇಶದಲ್ಲಿ 149ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ, 5000 ಸೋಂಕು ಪೀಡಿತರು; ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ!
First published: April 8, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading