ಕಳೆದ 24 ಗಂಟೆಗಳಲ್ಲಿ 6 ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಸಾವು ಮತ್ತು ಸೋಂಕು; ಲಾಕ್‌ಡೌನ್ ಸಡಿಲಿಕೆ ಕಾರಣವಿರಬಹುದೇ?

ಮೇ 03ಕ್ಕೆ ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಅವಧಿಯನ್ನು ಮತ್ತೆ ಎರಡು ವಾರಗಳ ಕಾಲಕ್ಕೆ ವಿಸ್ತರಣೆ ಮಾಡಿದೆ. ಆದರೆ, ಈ ವೇಳೆ ಹಸಿರು ವಲಯದಲ್ಲಿ ಲಾಕ್‌ಡೌನ್‌ ಅನ್ನು ಸಡಿಲಿಸಿತ್ತು.

news18-kannada
Updated:May 5, 2020, 11:20 AM IST
ಕಳೆದ 24 ಗಂಟೆಗಳಲ್ಲಿ 6 ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಸಾವು ಮತ್ತು ಸೋಂಕು; ಲಾಕ್‌ಡೌನ್ ಸಡಿಲಿಕೆ ಕಾರಣವಿರಬಹುದೇ?
ಪ್ರಾತಿನಿಧಿಕ ಚಿತ್ರ.
  • Share this:
ನವ ದೆಹಲಿ (ಮೇ 05); ದೇಶದಾದ್ಯಂತ ಲಾಕ್‌ಡೌನ್ ಸಡಿಲಿಸಿದ್ದ ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ಸುಮಾರು 6 ರಾಜ್ಯಗಳಲ್ಲಿ ಕೊರೋನಾದಿಂದ ಹೆಚ್ಚು ಸಂಖ್ಯೆಯ ಸಾವು ಸಂಭವಿಸಿದೆ ಅಲ್ಲದೆ, ಕೊರೋನಾ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.

ಕಳೆದ 24 ಗಂಟೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 98, ಮಹಾರಾಷ್ಟ್ರದಲ್ಲಿ 35, ಗುಜರಾತಿನಲ್ಲಿ 29, ಮಧ್ಯಪ್ರದೇಶದಲ್ಲಿ 9, ಉತ್ತರ ಪ್ರದೇಶದಲ್ಲಿ 7 ಹಾಗೂ ರಾಜಸ್ಥಾನದಲ್ಲಿ 6 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 1,567, ತಮಿಳುನಾಡಿನಲ್ಲಿ 527, ಗುಜರಾತಿನಲ್ಲಿ 376, ದೆಹಲಿಯಲ್ಲಿ 349, ಪಶ್ಚಿಮ ಬಂಗಾಳದಲ್ಲಿ 296 ಹಾಗೂ ರಾಜಸ್ಥಾನದಲ್ಲಿ 175 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಮೇ 03ಕ್ಕೆ ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಅವಧಿಯನ್ನು ಮತ್ತೆ ಎರಡು ವಾರಗಳ ಕಾಲಕ್ಕೆ ವಿಸ್ತರಣೆ ಮಾಡಿದೆ. ಆದರೆ, ಈ ವೇಳೆ ಹಸಿರು ವಲಯದಲ್ಲಿ ಲಾಕ್‌ಡೌನ್‌ ಅನ್ನು ಸಡಿಲಿಸಿತ್ತು. ಆದರೆ, ಇದೇ ಅವಧಿಯಲ್ಲಿ ದೇಶದ 6 ರಾಜ್ಯಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿರುವುದು ಕೇಂದ್ರ ಸರ್ಕಾರಕ್ಕೆ ಇದೀಗ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ : ಬ್ಯಾಂಕ್ ಸಾಲಗಳ ಮೇಲಿನ ಮರುಪಾವತಿಗೆ ಇನ್ನೂ ಮೂರು ತಿಂಗಳು ವಿನಾಯಿತಿ; ಆರ್‌ಬಿಐ ಚಿಂತನೆ

 

 
First published: May 5, 2020, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading