Covid Guideline: ಹೆಚ್ಚಾಗಿದೆ ಕೊರೊನಾ ಅಬ್ಬರ, ಬೆಂಗಳೂರಿಗೆ ಪ್ರತ್ಯೇಕ ಗೈಡ್​ಲೈನ್; ಕಚೇರಿ, ಅಪಾರ್ಟ್​ಮೆಂಟ್​ಗಳಿಗೆ ಕಠಿಣ​​ ರೂಲ್ಸ್

ಬೆಂಗಳೂರಿನಲ್ಲಿ ಜೂನ್ 10ರ ಬಳಿಕ ಕೊರೊನಾ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್​ ಹೊರಡಿಸಿದೆ. ಕಚೇರಿಗಳು, ಶಾಲಾ- ಕಾಲೇಜು ಹಾಗೂ ಅಪಾರ್ಟ್​ಮೆಂಟ್​ಗಳಿಗೆ ಗೈಡ್‌ಲೈನ್ಸ್ ನೀಡಿ ಸುತ್ತೋಲೆ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ.28): ರಾಜ್ಯದಲ್ಲಿ ದಿನೇ ದಿನೇ ಕೊರೊನಾ (Corona) ಪ್ರಕರಣಗಳು ಹೆಚ್ಚುತ್ತಲೆ ಇದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಜೂನ್ 10ರ ಬಳಿಕ ಕೊರೊನಾ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್​ ಹೊರಡಿಸಿದೆ. ಕಚೇರಿಗಳು, ಶಾಲಾ- ಕಾಲೇಜು ಹಾಗೂ ಅಪಾರ್ಟ್​ಮೆಂಟ್​ಗಳಿಗೆ ಗೈಡ್‌ಲೈನ್​ (Guideline)  ನೀಡಿ ಸುತ್ತೋಲೆ ಹೊರಡಿಸಲಾಗಿದೆ.

1.ಅಪಾರ್ಟ್​ ಮೆಂಟ್‌ಗಳಲ್ಲಿ ಕೊರೊನಾ ಪಾಸಿಟಿವ್ ಆದ ಬ್ಲಾಕ್‌ಗಳನ್ನು ಕ್ಲಸ್ಟರ್ ಎಂದು ಪರಿಗಣಿಸಬೇಕು.

2.ಸೋಂಕಿನ ಲಕ್ಷಣ ಹೊಂದಿದವರಿಗೆ RAT ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು.

3.ಪಾಸಿಟಿವ್ ಬಂದ ವ್ಯಕ್ತಿಯನ್ನ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು.

4.ಪಾಸಿಟಿವ್ ಇದ್ದವರ CT ವ್ಯಾಲ್ಯೂ 25 ಕ್ಕಿಂತ ಹೆಚ್ಚಿದ್ದರೆ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಬೇಕು .

5.ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು

6. 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಗಂಭೀರ ಆರೋಗ್ಯ
ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆರ್‌ಟಿಸಿಪಿಆರ್ ಪರೀಕ್ಷೆಗೆ ಒಳಪಡಿಸುವುದು.

ಇದನ್ನೂ ಓದಿ: Corona 4th Wave: ಕೊರೊನಾ ಬಾಹುಗಳಲ್ಲಿ ರಾಜಧಾನಿ; ಕೋವಿಡ್ ಪಾಸಿಟಿವಿಟಿ ರೇಟ್ ಶೇ.3.26ಕ್ಕೇರಿಕೆ

 ಕಚೇರಿಗಳು ಹಾಗೂ ಶಾಲಾ-ಕಾಲೇಜಿಗೆ ರೂಲ್ಸ್​

1.ಕೋವಿಡ್ 19ನ ಲಕ್ಷಣಗಳನ್ನು ಹೊಂದಿರುವವರು ಕಚೇರಿಗಳು ಮತ್ತು ಕಾಲೇಜುಗಳಿಗೆ ಹಾಜರಾಗದಂತೆ ಸೂಚಿಸುವುದು.

2.ರಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಲ್ಲಿ,  ಐಸೋಲೆಷನ್‌ನಲ್ಲಿ ಇರಿಸಿ
ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಲ್ಲಿ, ಆರ್‌ಟಿಪಿಸಿಆರ್ ಮಾದರಿಯನ್ನು ನೀಡಿ : ಐಸೊಲೇಷನ್ ನಲ್ಲಿದ್ದು, ಫಲಿತಾಂಶವನ್ನು ನಿರೀಕ್ಷಿಸುವುದು. ಫಲಿತಾಂಶದ ನಂತರ ಅಗತ್ಯ ಕ್ರಮ ವಹಿಸುವುದು.

3. ಕೋವಿಡ್ 19 ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸುವುದು.

4. ಪಾಸಿಟಿವ್ ಫಲಿತಾಂಶ ದೃಢಪಟ್ಟಲ್ಲಿ ಶಿಷ್ಟಾಚಾರದ
ಅನ್ವಯ ಕ್ರಮ ವಹಿಸುವುದು.

5. ಕ್ಲಸ್ಟರ್ | ಸಾಂಕ್ರಾಮಿಕ ಸ್ಫೋಟಗಳು ವರದಿಯಾದಲ್ಲಿ ರೋಗ ಲಕ್ಷಣಗಳಿರುವವರಿಗೆ ರಾಪಿಡ್ ಆಂಟಿಜೆನ್
ಪರೀಕ್ಷೆ ಮಾಡುವುದು. ಪಾಸಿಟಿವ್ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೊಲೇಷನ್ ಇರಿಸಿ, ಆಸ್ಪತ್ರೆಗೆ ಸೇರಿಸಿ

6. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಯುಕೊಳ್ಳಬೇಕು

ಶಾಲೆಗಳು- ಕಾಲೀಜಿಗೆ ನಿಯಮ ( 12 ನೇ ತರಗತಿಯವರೆಗೆ)

1.ಕೋವಿಡ್ 19  ಲಕ್ಷಣಗಳನ್ನು ಹೊಂದಿರುವವರು ಶಾಲೆಗೆ ಹಾಜರಾಗದಂತೆ ಸೂಚಿಸುವುದು.

2.ಸದರಿಯವರು ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡುವುದು ಹಾಗೂ ಪಾಸಿಟಿವ್ ಫಲಿತಾಂಶ ಬಂದಲ್ಲಿ, ಐಸೋಲೆಷನ್‌ನಲ್ಲಿ ಇರಿಸಿ ನಿರ್ವಹಣೆ ಮಾಡುವುದು.

3. ಶಾಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾದ ಕೊಠಡಿಗಳನ್ನು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು ಮತ್ತು ಮರುದಿನದಿಂದ ಕೊಠಡಿಗಳನ್ನು ಪುನಃ ಬಳಕೆ ಮಾಡಬಹುದು

4.ಕೋಪಿಡ್-19 ಸೂಕ್ತ ನಡವಳಿಕೆಗಳ ಪಾಲನೆ : ಕಡ್ಡಾಯ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಪಾಲನೆ

5.ಹ್ಯಾಂಡ್ ಸ್ಯಾನಿಟೈಸರ್‌ಗಳ ಬಳಕೆಗೆ ಅವಕಾಶ, ಪ್ರವೇಶ ದ್ವಾರದಲ್ಲಿ ಜ್ವರ ತಪಾಸಣೆಗೆ ಥರ್ಮಲ್‌ಗಳ ಬಳಕೆ

6.ಜ್ವರ, ನೆಗಡಿ, ಕೆಮ್ಮ ಹಾಗೂ ಉಸಿರಾಟದ ತೊಂದರೆ ಗಳಿರುವವರನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ
ಪಡೆಯಲು ಶಿಫಾರಸ್ಸು ಮಾಡುವುದು.

ಇದನ್ನೂ ಓದಿ: New Covid Symptoms: ಈ ಎರಡು ರೋಗಲಕ್ಷಣಗಳು ಇದ್ರೆ ಬಹಳ ಸಮಯದವರಗೆ ಕೋವಿಡ್ ನಿಮ್ಮನ್ನು ಕಾಡಬಹುದು ಅಂತಾರೆ ವೈದ್ಯರು

ಮಾಸ್ಕ್​ ಧರಿಸದಿದ್ರೆ ಬೀಳುತ್ತೆ ದಂಡ!?

ಬೆಂಗಳೂರು (ಜೂ.27): ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ  ಸೋಂಕು ಹೆಚ್ಚಾಗುತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಿದರು ಸಾರ್ವಜನಿಕರು ಕ್ಯಾರೆ ಎನ್ನುತ್ತಿಲ್ಲ. ಸೋಂಕು ಹರಡದಂತೆ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಅಲರ್ಟ್​ ಆಗಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ರೆ ಮಾಸ್ಕ್  ದಂಡ ಅಸ್ತ್ರ ಪ್ರಯೋಗ ಈ ವಾರದಿಂದಲೇ ಶುರು ಆಗಲಿದೆ. ರಾಜ್ಯ  ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂದು ಆದೇಶಿಸಿದ್ರು ಜನ ಮಾಸ್ಕ್ ಬಳಕೆ‌ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗಿಸಿ ಎಂದ‌ ತಾಂತ್ರಿಕ ಸಲಹಾ ಸಮಿತಿ ಸಲಹೆ ಹಿನ್ನೆಲೆ ಮಾಸ್ಕ್ ಕಡ್ಡಾಯ ಪಾಲಿಸಲು ದಂಡ ಪ್ರಯೋಗ ಅನಿವಾರ್ಯ ಎಂದು  ಆರೋಗ್ಯ ‌ಇಲಾಖೆ ಆಯುಕ್ತ ಡಾ. ರಂದೀಪ್ ಹೇಳಿದ್ದಾರೆ. ಮಾಸ್ಕ್ ದಂಡದ ಬಗ್ಗೆ ಸರ್ಕಾರ ಅಂತಿಮ  ತೀರ್ಮಾನ ನಿರ್ಧಾರಕೈಗೊಳ್ಳಲಿದೆ
Published by:Pavana HS
First published: