ರಾಜ್ಯದಲ್ಲಿ ಅರ್ಧ ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲಿಯೇ 32 ಪ್ರಕರಣ

48 ರೋಗಿಗಳು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಜನರು ಡಿಸ್ಚಾರ್ಜ್ ಆಗಿದ್ದಾರೆ. ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಕೊರೋನಾ ಸೋಂಕು ಪಾಸಿಟಿವ್ ಇರುವುದು ಕಂಡು ಬಂದಿದೆ.

ದೇಶಾದ್ಯಂತ ಕೊರೋನಾದಿಂದ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 700 ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಈದ 640 ರೋಗಿಗಳಲ್ಲಿ ಕೊರೋನಾ ಸೋಂಕು ಇದೆ.

ದೇಶಾದ್ಯಂತ ಕೊರೋನಾದಿಂದ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 700 ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಈದ 640 ರೋಗಿಗಳಲ್ಲಿ ಕೊರೋನಾ ಸೋಂಕು ಇದೆ.

 • Share this:
  ಬೆಂಗಳೂರು(ಮಾ.25): ಕೊರೋನಾ ಸೋಂಕಿತ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯದಲ್ಲಿ 50ರ ಗಡಿಯಲ್ಲಿ ದಾಟಿದೆ. ಯುಗಾದಿಯ ದಿನವಾದ ಇಂದು ಹತ್ತು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ. 

  ಕಳೆದ ಮೂರು ದಿನಗಳಿಂದಲೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕ್ರಮೇಣ ಏರಿಕೆ ಕಾಣುತ್ತಲೇ ಇದೆ. ಸೋಮವಾರ 7, ಮಂಗಳವಾರ 8 ಹಾಗೂ ಬುಧವಾರ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊರೋನಾ ಸಂತ್ರಸ್ತರ ಆರೈಕೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವರನ್ನು ಪ್ರತ್ಯೇಕಿತ ಚಿಕಿತ್ಸೆ ನೀಡಲಾಗುತ್ತಿದೆ.

  ಆರೋಗ್ಯ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. 48 ರೋಗಿಗಳು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಜನರು ಡಿಸ್ಚಾರ್ಜ್ ಆಗಿದ್ದಾರೆ. ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಕೊರೋನಾ ಸೋಂಕು ಪಾಸಿಟಿವ್ ಇರುವುದು ಕಂಡು ಬಂದಿದೆ.

  ರಾಜ್ಯದಲ್ಲಿ ಪತ್ತೆಯಾದ ಕೊರೋನಾ ಪ್ರಕರಣಗಳು

  ಬೆಂಗಳೂರಿನಲ್ಲಿ - 32 ಪ್ರಕರಣ

  ಕಲಬುರಗಿ - 3 ಪ್ರಕರಣ

  ಕೊಡಗು - 1 ಪ್ರಕರಣ

  ಚಿಕ್ಕಬಳ್ಳಾಪುರ - 3 ಪ್ರಕರಣ

  ಮೈಸೂರು - 2 ಪ್ರಕರಣ

  ಧಾರವಾಡ - 1 ಪ್ರಕರಣ

  ದಕ್ಷಿಣ ಕನ್ನಡ - 5 ಪ್ರಕರಣ

  ಉತ್ತರ ಕನ್ನಡ - 2 ಪ್ರಕರಣ

  ದಾವಣಗೆರೆ - 1 ಪ್ರಕರಣ

  ಉಡುಪಿ - 1 ಪ್ರಕರಣ

  ಇದನ್ನೂ ಓದಿ : ಸರ್ಕಾರ ರೇಷ್ಮೆ ಬೆಳೆಗಾರರು ಮತ್ತು ಬಿಚ್ಚಾಣಿಕೆದಾರರ ನೆರವಿಗೆ ಧಾವಿಸಬೇಕು: ಸಿಎಂ ಬಿಎಸ್​ವೈಗೆ ಡಿಕೆಶಿ ಆಗ್ರಹ

  ಇದುವರೆಗೂ ಒಟ್ಟು 51 ಪ್ರಕರಣ ಪತ್ತೆಯಾಗಿವೆ. ಒಂದೇ ಕುಟುಂಬದ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಮೊದಲು ತಂದೆಗೆ ನಂತರ ತಾಯಿ ನಂತರ ಈಗ ಇಬ್ಬರು ಹೆಣ್ಣು ಮಕ್ಕಳಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ. ಈ ನಾಲ್ವರನ್ನೂ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  ವಿದೇಶಗಳಿಂದ ಬಂದ 1.28 ಲಕ್ಷ ಪ್ರಯಾಣಿಕರನ್ನು ಈವರೆಗೆ ರಾಜ್ಯದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. 840 ಮಂದಿಯನ್ನು ಅವಲೋಕನಕ್ಕಾಗಿ ಪಟ್ಟಿ ಮಾಡಲಾಗಿದೆ, 54 ಮಂದಿಯನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇಂದು ಒಟ್ಟು 278 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇಂದು ಒಟ್ಟು 175 ಪ್ರಕರಣಗಳಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ.

    ಟಾಸ್ಕ್​​ ಪೋರ್ಸ್​ ಜೊತೆ ಚರ್ಚೆ ನಡೆಸಿದ ಸಚಿವರು

  ಕೊರೋನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಟಾಸ್ಕ್ ಫೋರ್ಸ್ ಜೊತೆ ಸಭೆ ಮಾಡಲಾಗಿದೆ. ನಿನ್ನೆ 41 ಪಾಸಿಟಿವ್ ಇತ್ತು ಇಂದು 51 ಆಗಿದೆ. ಇವತ್ತು ರಾತ್ರಿ ಎಷ್ಟಾಗುತ್ತೊ ಗೊತ್ತಿಲ್ಲ. ಅದಕ್ಕಾಗಿ ಚಿಕಿತ್ಸೆ, ಪರೀಕ್ಷೆಗೆ ಎಲ್ಲಿ ವ್ಯವಸ್ಥೆ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯಾದ್ಯಂತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್​ ತಿಳಿಸಿದ್ದಾರೆ.

   

   
  First published: