ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿ ನಿವಾಸದಲ್ಲಿ ಕೊರೋನಾ ಹಾವಳಿ: ಸಿಎಂ ಸೇರಿದಂತೆ 11 ಮಂದಿಗೆ ಪಾಸಿಟಿವ್​​

ಗೃಹ ಕಚೇರಿ ಕೃಷ್ಣಾ ಮತ್ತು ಸಿಎಂ ಅಧಿಕೃತ ನಿವಾಸಕ್ಕೆ ಹೊರಗಡೆಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ರಜೆ ಮೇಲೆ ಊರಿಗೆ ತೆರಳಿದ್ದ ಸಿಬ್ಬಂದಿ ಮತ್ತು ಸಿಎಂ ಕುಟುಂಬ ಸದಸ್ಯರನ್ನು ಕೋವಿಡ್​-19 ಟೆಸ್ಟ್​ಗೆ ಒಳಪಡಿಸಲಾಗಿದೆ. ಜತೆಗೆ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ.

news18-kannada
Updated:August 3, 2020, 3:21 PM IST
ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿ ನಿವಾಸದಲ್ಲಿ ಕೊರೋನಾ ಹಾವಳಿ: ಸಿಎಂ ಸೇರಿದಂತೆ 11 ಮಂದಿಗೆ ಪಾಸಿಟಿವ್​​
ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು(ಆ.03): ರಾಜ್ಯದಲ್ಲಿ ಕೊರೋನಾ ವೈರಸ್​ ತಡೆಗೆ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪಗೂ ಸೋಂಕು ತಗುಲಿದೆ. ಹೀಗಾಗಿಯೇ ಯಡಿಯೂರಪ್ಪರನ್ನು ಭೇಟಿ ಮಾಡಿದ್ದ ಎಲ್ಲರೂ ಈಗ ಹೋಮ್​​ ಕ್ವಾರಂಟೈನ್​​ ಆಗಿದ್ದಾರೆ. ಜತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಮತ್ತು ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸಿ ಕುಟುಂಬ ಸದಸ್ಯರು ಯಾರಿಗೆ ಪ್ರವೇಶಕ್ಕೆ ಅವಕಾಶ ನೀಡದೇ ನಿರ್ಬಂಧಿಸಿದ್ದಾರೆ.

ಇನ್ನು, ಸಿಎಂ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಲಾಗುತ್ತಿದೆ. ಸಿಎಂಗೆ ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ಇಂದು ಬೆಳಗ್ಗೆ ಆಗಮಿಸಿದ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ, ಗೃಹ ಕಚೇರಿ ಕೃಷ್ಣಾ ಮತ್ತು ಅಧಿಕೃತ ನಿವಾಸ ಕಾವೇರಿ ಆವರಣವನ್ನು ಸ್ಯಾನಿಟೈಸ್ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾ ಮತ್ತು ಸಿಎಂ ಅಧಿಕೃತ ನಿವಾಸಕ್ಕೆ ಹೊರಗಡೆಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ರಜೆ ಮೇಲೆ ಊರಿಗೆ ತೆರಳಿದ್ದ ಸಿಬ್ಬಂದಿ ಮತ್ತು ಸಿಎಂ ಕುಟುಂಬ ಸದಸ್ಯರನ್ನು ಕೋವಿಡ್​-19 ಟೆಸ್ಟ್​ಗೆ ಒಳಪಡಿಸಲಾಗಿದೆ. ಜತೆಗೆ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ.

ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ ಸೋಮಣ್ಣ‌ಗೆ ಕೋವಿಡ್ ಟೆಸ್ಟ್‌ ಮಾಡಿದ್ದು, ರಿಸಲ್ಟ್ ನೆಗೆಟಿವ್ ಬಂದಿದೆ. ಹಾಗೆಯೇ ಸಿಎಂ ನಿವಾಸದ ಅಡುಗೆ ಸಿಬ್ಬಂದಿ ಮತ್ತು ಕಾರ್​​ ಚಾಲಕ ಸೇರಿದಂತೆ ಒಂಬತ್ತು ಮಂದಿಗೆ ಕೊರೋನಾ ತಗುಲಿದೆ.

ಕೊರೋನಾ ಕಾಣಿಸಿಕೊಂಡರೂ ಈ 9 ಮಂದಿಗೆ ಯಾವುದೇ ರೋಗಲಕ್ಷಣಗಳು ಇಲ್ಲ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್​​ಗೆ ಕಳುಹಿಸಿಕೊಡಲಾಗಿದೆ. ಉಳಿದವರಿಗೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ.

ಇದನ್ನೂ ಓದಿ: BS Yediyurappa: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ; ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ ವಿಡಿಯೋ ಸಂದೇಶಕೊರೋನಾ ಪಾಸಿಟಿವ್​ ವರದಿ ಬಂದ ಬಗ್ಗೆ ಭಾನುವಾರ ಬಿಎಸ್​ವೈ ಟ್ವೀಟ್​ ಮಾಡಿದ್ದರು. ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನ ಎಂದು ಹೇಳಿದ್ದರು. ಹೀಗಾಗಿ ಅವರ ಟ್ರಾವೆಲ್​ ಹಿಸ್ಟರಿಯನ್ನು ಪರೀಕ್ಷಿಸಿ ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್​ ಮಾಡಲಾಗಿದೆ.
Published by: Ganesh Nachikethu
First published: August 3, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading