ಕೊರೋನಾ ಕಾರ್ಯಪಡೆ ಸಮಿತಿಗೆ ಕಾಂಗ್ರೆಸ್ ನಾಯಕರನ್ನು ಸೇರಿಸಿಕೊಳ್ಳಿ; ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಸಲಹೆ

ಖಾಸಗಿ ಆಸ್ಪತ್ರೆಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಖಾಸಗಿ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಸ್ಥಗಿತ ಮಾಡುತ್ತೇವೆ ಎಂದು ಬೆದರಿಕೆ ಹಾಕಬೇಡಿ. ಈಗ ಅವರಿಗೆ ಬೆದರಿಕೆ ಹಾಕಿ ಅವರಿಂದ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ವಿವಿಧ ಜೀವ ವಿಮೆ ಸೌಲಭ್ಯ ಒದಗಿಸಿ. ಈ ಮೂಲಕ ಅವರ ಸಹಾಯ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ

 • Share this:
  ಬೆಂಗಳೂರು; ಕೊರೋನಾ ಪರಿಸ್ಥಿತಿಯಲ್ಲಿ ಪರಸ್ಪರ ಸರ್ಕಾರದ ಲೋಪ -ದೋಷದ ಬಗ್ಗೆ ಚರ್ಚೆ ಬೇಡ. ಜನರ ರಕ್ಷಣೆ ಮಾಡಲು ಸರ್ಕಾರದ ಜೊತೆ ಕೈ ಜೋಡಿಸಬೇಕು. ಜನರ ಜೀವನದ ಜೊತೆ ಚೆಲ್ಲಾಟ ಆಡುವ ಬದಲು, ಕೊರೋನಾ ಹರಡುವಿಕೆ ತಡೆಯಲು ಸರ್ಕಾರಕ್ಕೆ ಸಹಕಾರ ಕೊಡಬೇಕು. ಈಗಾಗಲೇ ನಾವು ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಇಲ್ಲಿಯವರೆಗೆ ಕೈಗೊಂಡ ನಿಮ್ಮ ಹುಡುಗಾಟಿಕೆಯ ನಿರ್ಧಾರಗಳನ್ನು ನಿಲ್ಲಿಸಿ. ಈಗಲಾದರೂ ನಿಮ್ಮ ಲೋಪ- ದೋಷಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಲೋಪಗಳ ಬಗ್ಗೆ ಮಂತ್ರಿಗಳೇ ಹೇಳುತ್ತಿದ್ದಾರೆ. ಎಲ್ಲೆ ಮೀರಿ ಹೋಗಿದೆ ಎಂದು ಸಿಎಂ ಕೂಡ ನಿರುತ್ಸಾಹಗೊಂಡಿದ್ದಾರೆ. ಈ ಬಗ್ಗೆ ಜನರ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದೀರಿ. ನಿಜವಾಗಿಯೂ ಇದನ್ನು ಯಾರೂ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಬರೀ ಸಭೆ, ಮಾತುಗಳಿಗಷ್ಟೇ ನಿಮ್ಮ ಸಮಯ ಕಳೆದಿದ್ದೀರಿ. ಈಗ ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು, ತಜ್ಞರ ಜೊತೆ ಚರ್ಚಿಸಿ ಜನರ ಜೀವ ರಕ್ಷಣೆ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

  ಕೋವಿಡ್ ಹಣ ದುರುಪಯೋಗ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು,  ನಿಮ್ಮ ಸರ್ಕಾರದ ಮೇಲೆ ನಮಗೆ ವಿಶ್ವಾಸ ಇದೆ. ನಾವು ನಿಮ್ಮ ಮೇಲೆ ಯಾವುದೇ ಆರೋಪ ಮಾಡಿಲ್ಲ. ಆದರೆ ಕೋವಿಡ್ ಅವ್ಯವೆಹಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ.  ಅದಕ್ಕಾಗಿ ಕಾಂಗ್ರೆಸ್ ನ ನಾಯಕರನ್ನು ಟಾಸ್ಕ್ ಫೋರ್ಸ್ ಗೆ ಸೇರಿಸಿಕೊಳ್ಳಿ. ಅವರನ್ನು ಆ ಕಮಿಟಿಗೆ ಮೆಂಬರ್ ಮಾಡಿಕೊಳ್ಳಿ. ಸಿದ್ದರಾಮಯ್ಯ ಸೇರಿದಂತೆ ಉಳಿದ ಕಾಂಗ್ರೆಸ್ ನಾಯಕರನ್ನು ಸೇರಿಸಿಕೊಳ್ಳಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಆದರೆ ಇಂತಹ ಸಂದರ್ಭದಲ್ಲಿ ವಿಪಕ್ಷಗಳು ಈ ರೀತಿಯ ಹೇಳಿಕೆ ಕೊಡೋದು ಒಳ್ಳೆಯ ಬೆಳವಣಿಗೆ ಅಲ್ಲ.  ಪ್ರತಿನಿತ್ಯದ ನಿಮ್ಮ ಸಭೆಗಳಿಗೆ ಸಿದ್ದರಾಮಯ್ಯಗೆ ಆಹ್ವಾನ ಕೊಡಿ. ಹಣ, ಖರ್ಚು ವೆಚ್ಚದ ಬಗ್ಗೆ ಅವರಿಗೂ ತಿಳಿಸಿ, ನಿರ್ಧಾರ ಮಾಡಿ. ಆಗುವಂತಹ ಅನಾಹುತಗಳನ್ನು ತಪ್ಪಿಸಿ ಎಂದು ಹೇಳಿದರು.

  ಇದನ್ನು ಓದಿ: ‘ಗುತ್ತಿಗೆ ವೈದ್ಯರ ಖಾಯಂ ಮಾಡಲು ಸಂಪುಟ ಒಪ್ಪಿಗೆ‘ - ಸಚಿವ ಜೆ.ಸಿ ಮಾಧುಸ್ವಾಮಿ

  ಕೋವಿಡ್ ನಿಯಂತ್ರಣಕ್ಕೆ ಕಾಟಚಾರದ ಸಭೆಗಳು ಆಗಬಾರದು. ಈಗ ಎಂಟು ವಲಯಗಳಿಗೆ ಎಂಟು ಸಚಿವರನ್ನು ನೇಮಕ ಮಾಡಿದ್ದೀರಿ. ಅವರ ಜವಬ್ದಾರಿ ಏನು..? ಅವರು ಏನು ಕಲಸ ಮಾಡುತ್ತಾರೆ ಎಂಬುದನ್ನು ತಿಳಿಸಿ. ಖಾಸಗಿ ಆಸ್ಪತ್ರೆಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಖಾಸಗಿ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಸ್ಥಗಿತ ಮಾಡುತ್ತೇವೆ ಎಂದು ಬೆದರಿಕೆ ಹಾಕಬೇಡಿ. ಈಗ ಅವರಿಗೆ ಬೆದರಿಕೆ ಹಾಕಿ ಅವರಿಂದ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ವಿವಿಧ ಜೀವ ವಿಮೆ ಸೌಲಭ್ಯ ಒದಗಿಸಿ. ಈ ಮೂಲಕ ಅವರ ಸಹಾಯ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
  Published by:HR Ramesh
  First published: