HOME » NEWS » Coronavirus-latest-news » INCIDENCE OF CORONAVIRUS INFECTION AMONG CHILDREN UNDER 10 YEARS BY 261 PC ANXIETY IN PARENTS MAK

CoronaVirus: 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.261 ರಷ್ಟು ಸೋಂಕು ಏರಿಕೆ: ಪೋಷಕರಲ್ಲಿ ಮೂಡಿದ ಆತಂಕ

ಜೂನ್ 1ರ ವೇಳೆಗೆ ರಾಜ್ಯದಲ್ಲಿ ‌10 ವರ್ಷಕ್ಕಿಂತ ಕಡಿಮೆ ವಯಸ್ಸಿನ 298 ಮಕ್ಕಳಲ್ಲಿ ಸೋಂಕು ಕಂಡುಬಂದಿತ್ತು.‌ ಜುಲೈ 1ರ ವೇಳೆಗೆ ಈ ಸಂಖ್ಯೆ 1076 ಕ್ಕೆ ಏರಿಕೆಯಾಗಿದೆ. ‌ಇವರಲ್ಲಿ 423 ಮಕ್ಕಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. ರಾಜ್ಯದ ಒಟ್ಟಾರೆ ಸೋಂಕಿತರಲ್ಲಿ ಈ ಪುಟ್ಟ ಮಕ್ಕಳ ಪ್ರಮಾಣ ಶೇ.6.5 ರಷ್ಟಿದೆ.

news18-kannada
Updated:July 6, 2020, 7:40 PM IST
CoronaVirus: 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.261 ರಷ್ಟು ಸೋಂಕು ಏರಿಕೆ: ಪೋಷಕರಲ್ಲಿ ಮೂಡಿದ ಆತಂಕ
ಸಾಂದರ್ಭಿಕ ಚಿತ್ರ.
  • Share this:
ಕೊರೋನಾ ಸೋಂಕಿನ ಕರಾಳ ಮುಖಗಳು ಪ್ರತಿದಿನ ಅನಾವರಣಗೊಳ್ಳುತ್ತಲೇ ಇದೆ.‌ ಯಾವುದೇ ಖಾಯಿಲೆಯಾದ್ರೂ ಚಿಕ್ಕ ಮಕ್ಕಳನ್ನು ಹೆಚ್ಚು ಕಾಡಿದರೆ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗುತ್ತದೆ. ಆದರೆ, ಇತ್ತೀಚೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗಿನ ವರದಿಗಳ ಪ್ರಕಾರ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬರೋಬ್ಬರಿ ಶೇ.261 ರಷ್ಟು ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿದೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಆತಂಕ ಅಂದ್ರೆ ಈ ವಯಸ್ಸಿನ ಬಹುಪಾಲು ಮಕ್ಕಳಲ್ಲಿ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ.

ಜೂನ್ 1ರ ವೇಳೆಗೆ ರಾಜ್ಯದಲ್ಲಿ ‌10 ವರ್ಷಕ್ಕಿಂತ ಕಡಿಮೆ ವಯಸ್ಸಿನ 298 ಮಕ್ಕಳಲ್ಲಿ ಸೋಂಕು ಕಂಡುಬಂದಿತ್ತು.‌ ಜುಲೈ 1ರ ವೇಳೆಗೆ ಈ ಸಂಖ್ಯೆ 1076 ಕ್ಕೆ ಏರಿಕೆಯಾಗಿದೆ. ‌ಇವರಲ್ಲಿ 423 ಮಕ್ಕಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. ರಾಜ್ಯದ ಒಟ್ಟಾರೆ ಸೋಂಕಿತರಲ್ಲಿ ಈ ಪುಟ್ಟ ಮಕ್ಕಳ ಪ್ರಮಾಣ ಶೇ.6.5 ರಷ್ಟಿದೆ. ಆಶ್ಚರ್ಯ ಅಂದ್ರೆ‌ ಈ ಮಕ್ಕಳು ಹೆಚ್ಚಾಗಿ ಮನೆಗಳಲ್ಲೇ ಇದ್ದಾರೆ. ಹೊರಗೆಲ್ಲೋ ತಿರುಗಾಡಲು ಹೋಗದಂತೆ ಕುಟುಂಬದವರು ಕಾಪಾಡಿದ್ದಾರೆ.

ಹೀಗಾಗಿ ಬಹುತೇಕ ತಂದೆ-ತಾಯಿ ಕುಟುಂಬಸ್ಥರಿಂದಲೇ ಸೋಂಕು ಬಂದಿರುವ ಸಾಧ್ಯತೆ ಇದೆ. ಹಾಗಂತ ಸೋಂಕಿತ ಮಕ್ಕಳ ಪೋಷಕರಿಗೂ ಪರೀಕ್ಷೆ ಮಾಡಲಾಯ್ತು. ಆಗ ಅನೇಕ ಪೋಷಕರಿಗೆ ಸೋಂಕು ಇರಲೇ ಇಲ್ಲ. ಅಂದರೆ ಪೋಷಕರು ಒಂದು ಸಮಯದಲ್ಲಿ ಏಸಿಂಪ್ಟಮ್ಯಾಟಿಕ್ ಅಂದ್ರೆ ರೋಗಲಕ್ಷಣ ಇಲ್ಲದೇ ಸೋಂಕು ಪಡೆದಿರುವ ಸಾಧ್ಯತೆ ಇದೆ.

ಇದನ್ನೂ ಓದಿ : ಕೊರೋನಾ ಸಂಕಷ್ಟದಿಂದಾಗಿ ಡೀಸಲ್ ದುಡ್ಡಿಗೂ ಸಾರಿಗೆ ಇಲಾಖೆಯಲ್ಲಿ ಹಣವಿಲ್ಲ: ಲಕ್ಷ್ಮಣ ಸವದಿ
Youtube Video

ಈ ಸಂದರ್ಭದಲ್ಲಿ ಜೊತೆಗಿರುವ ಪುಟ್ಟ ಮಕ್ಕಳಿಗೆ ಸೋಂಕು ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಮೊದಲು ಬೇರೆ ದೇಶ ಅಥವಾ ರಾಜ್ಯಗಳಿಂದ ಬಂದ ಮಕ್ಕಳಲ್ಲಿ ಸೋಂಕು ಸಾಮಾನ್ಯವಾಗಿ ಕಂಡುಬಂದಿತ್ತು. ಆದರೆ ಇತ್ತೀಚೆಗೆ ಬೇರೆ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಬಂದ ಮಕ್ಕಳಿಗೆ ಪರೀಕ್ಷೆ ಮಾಡಿದಾಗ ಸೋಂಕು ಕಂಡು ಬಂದ ಪ್ರಕರಣಗಳೂ ಬೆಳಕಿಗೆ ಬಂದಿವೆ. ಸಾಮಾನ್ಯವಾಗಿ ಈ ಬೆಳವಣಿಗೆ ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ.
Published by: MAshok Kumar
First published: July 6, 2020, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories