Coronavirus India: ಭಾರತದಲ್ಲಿ ತೀಕ್ಷ್ಣವಾಗುತ್ತಿದೆ ಕೊರೋನಾ; ಕಳೆದ 24 ಗಂಟೆಯಲ್ಲಿ ಈ ವೈರಸ್‌ಗೆ 29 ಬಲಿ, 1463 ಹೊಸ ಪ್ರಕರಣ

Coronavirus Pandemic: ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಇಷ್ಟು ವೇಗವಾಗಿ ಕೊರೋನಾ ವೈರಸ್‌ ಹರಡಿರುವುದು ಮತ್ತು ಕೇವಲ 24 ಗಂಟೆಯ ಅವಧಿಯಲ್ಲಿ ಇಷ್ಟು ಪ್ರಮಾಣದ ಬಲಿ ತೆಗೆದುಕೊಂಡಿರುವ ಘಟನೆ ಇದಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ಹರಡುವ ವೇಗ ಮತ್ತಷ್ಟು ಹೆಚ್ಚಾಗಿರುವುದು ಸ್ಪಷ್ಟವಾಗಿದೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವ ದೆಹಲಿ (ಏಪ್ರಿಲ್ 15); ಮಾರಣಾಂತಿಕ ಕೊರೋನಾ ವೈರಸ್‌ಗೆ ಸೋಮವಾರ ಸಂಜೆಯಿಂದ ಮಂಗಳವಾರದ ಅಂತ್ಯದ ವರೆಗೆ ಒಟ್ಟಾರೆ 29 ಜನ ಸಾವನ್ನಪ್ಪಿದ್ದು ಕೊರೋನಾಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1,463 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ 10,815 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಇಷ್ಟು ವೇಗವಾಗಿ ಕೊರೋನಾ ವೈರಸ್‌ ಹರಡಿರುವುದು ಮತ್ತು ಕೇವಲ 24 ಗಂಟೆಯ ಅವಧಿಯಲ್ಲಿ ಇಷ್ಟು ಪ್ರಮಾಣದ ಬಲಿ ತೆಗೆದುಕೊಂಡಿರುವ ಘಟನೆ ಇದಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ಹರಡುವ ವೇಗ ಮತ್ತಷ್ಟು ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಕೊರೋನಾ ಪಾಸಿಟಿವ್ ಪ್ರಕರಣಗಳ ಪೈಕಿ 76 ಜನ ವಿದೇಶಿ ಪ್ರಜೆಗಳೂ ಇದ್ದು, ಈವರೆಗೆ 1189 ಜನರನ್ನು ಗುಣಪಡಿಸಿ ಮನೆಗೆ ಕಳುಹಿಸಲಾಗಿದೆ. ಆದರೆ, ಸೋಮವಾರದಿಂದ ಮಂಗಳವಾರ ಸಂಜೆಯವರೆಗೆ ಒಟ್ಟು 29 ಸಾವುಗಳು ದಾಖಲಾಗಿವೆ. ಈ ಪೈಕಿ ಮಹರಾಷ್ಟ್ರದಲ್ಲಿ 11, ಮಧ್ಯಪ್ರದೇಶದಲ್ಲಿ 07, ದೆಹಲಿಯಲ್ಲಿ 04, ಕರ್ನಾಟಕದಲ್ಲಿ 03, ಆಂಧ್ರಪ್ರದೇಶದಲ್ಲಿ 02 ಮತ್ತು ಪಂಜಾಬ್-ತೆಲಂಗಾಣದಲ್ಲಿ ತಲಾ 01 ಸಾವು ಸಂಭವಿಸಿದೆ.

ಒಟ್ಟು 353 ಸಾವುಗಳಲ್ಲಿ ಅತಿಹೆಚ್ಚು ಸಾವು ಸಂಭವಿಸಿರುವುದು ಮಹಾರಾಷ್ಟ್ರದಲ್ಲೇ. ಈ ರಾಜ್ಯದಲ್ಲಿ ಈವರೆಗೆ ಒಟ್ಟಾರೆ 160 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಇನ್ನೂ ಕ್ರಮವಾಗಿ ಮಧ್ಯಪ್ರದೇಶದಲ್ಲಿ 50, ದೆಹಲಿಯಲ್ಲಿ 28, ಗುಜರಾತ್ 26 ಮತ್ತು ತೆಲಂಗಾಣದಲ್ಲಿ 17 ಸಾವು ಸಂಭವಿಸಿದೆ.

ಇನ್ನೂ ಕರ್ನಾಟಕದಲ್ಲಿ 10, ಪಶ್ಚಿಮ ಬಂಗಾಳದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರೆ, ಉತ್ತರಪ್ರದೇಶದಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ನಾಲ್ಕು ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿಅಂಶಗಳು ತಿಳಿಸಿವೆ.

ಇದನ್ನೂ ಓದಿ : ಇಂದಿನಿಂದ ಬೆಂಗಳೂರಿನಲ್ಲಿ ಲಾಕ್​ಡೌನ್ ಮತ್ತಷ್ಟು ಬಿಗಿ; ಅನವಶ್ಯಕವಾಗಿ ತಿರುಗಾಡಿದರೆ ವಾಹನ ಸೀಜ್
First published: