Reliance: ಕೊರೋನಾ ಕಷ್ಟ ಕಾಲದಲ್ಲಿ ರಿಲಯನ್ಸ್ ಸಂಸ್ಥೆಯಿಂದ ನೆರವು; ಸುಪ್ರೀಂ ಕೋರ್ಟ್​​ನಲ್ಲಿ ಪ್ರಶಂಸೆ!

ರಿಲಯನ್ಸ್​​ ಸಂಸ್ಥೆ ಜಾಮ್​ನಗರದಲ್ಲಿ ಮಾಡಿರುವ ಕೆಲಸ ನನ್ನ ಕಣ್ಣು ತೆರೆಸುತ್ತಿದೆ. ಸಂಸ್ಥೆಯೊಂದು ಈ ಮಟ್ಟಕ್ಕೆ ನೆರವಾಗಬಹುದು ಎಂದು ರಿಲಯನ್ಸ್​ ತೋರಿಸಿಕೊಟ್ಟಿದೆ.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

 • Share this:
  ನವದೆಹಲಿ: ಕೊರೋನಾ 2ನೇ ಅಲೆಯ ಭಯಾನಕತೆಯನ್ನು ಕಾಣುತ್ತಿರುವ ಭಾರತಕ್ಕೆ ಸದ್ಯ ಹಿಂದೆಂದಿಗಿಂತಲೂ ಹೆಚ್ಚಿನ ನೆರವಿನ ಅಗತ್ಯವಿದೆ. ಇಂಥಾ ಸಂಕಷ್ಟ ಕಾಲದಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳು, ಉದ್ಯಮಿಗಳು ನೆರವಿನ ಹಸ್ತ ಚಾಚಿದ್ದಾರೆ. ಹೀಗೆ ದೇಶಕ್ಕೆ ಹೆಗಲಾಗಿರುವ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವುದು ರಿಲಯನ್ಸ್​​ ಸಂಸ್ಥೆ. ಸಕಲ ರೀತಿಯಲ್ಲೂ ಜನರಿಗೆ ನೆರವಾಗಲು ರಿಲಯನ್ಸ್​ ಸಂಸ್ಥೆ ಪಣತೊಟ್ಟಂತೆ ಕಾರ್ಯ ನಿರ್ವಹಿಸುತ್ತಿದೆ. 2 ದಿನಗಳ ಹಿಂದೆ ಗುಜರಾತ್​ನ ಜಾಮ್​ನಗರದಲ್ಲಿ ರಿಲಯನ್ಸ್​​ ಸಂಸ್ಥೆ 1 ಸಾವಿರ ಹಾಸಿಗೆಗಳುಳ್ಳ ಕೋವಿಡ್​ ಕೇರ್​ ಸೆಂಟರ್​ ನಿರ್ಮಿಸಿ ಉಚಿತ ಚಿಕಿತ್ಸೆ ನೀಡುತ್ತಿದೆ. ಈ ವಿಷಯ ಇಂದು ಸುಪ್ರೀಂ ಕೋರ್ಟ್​ನಲ್ಲಿ ಪ್ರತಿಧ್ವನಿಸಿದೆ.

  ದೇಶದಲ್ಲಿನ ಆಕ್ಸಿಜನ್​ ಬಿಕ್ಕಟ್ಟಿನ ಕುರಿತು ಸುಪ್ರೀಂಕೋರ್ಟ್​ನಲ್ಲಿ ನಡೆದ ವಿಚಾರಣೆ ವೇಳೆ ಅಡಿಷನಲ್​ ಸೆಕ್ರೆಟರಿ ಸುಮಿತಾ ದ್ವಾರ ರಿಲಯನ್ಸ್​ ಸಂಸ್ಥೆಯನ್ನು ಉಲ್ಲೇಖಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್​ ಅವರ ಎದುರು ಮಾತನಾಡಿರುವ ಸುಮಿತಾ ದ್ವಾರ, ರಿಲಯನ್ಸ್​​ ಸಂಸ್ಥೆ ಜಾಮ್​ನಗರದಲ್ಲಿ ಮಾಡಿರುವ ಕೆಲಸ ನನ್ನ ಕಣ್ಣು ತೆರೆಸುತ್ತಿದೆ. ಸಂಸ್ಥೆಯೊಂದು ಈ ಮಟ್ಟಕ್ಕೆ ನೆರವಾಗಬಹುದು ಎಂದು ರಿಲಯನ್ಸ್​ ತೋರಿಸಿಕೊಟ್ಟಿದೆ. ಕೋವಿಡ್​ ಕೇರ್​ ನಿರ್ಮಿಸಿ ಅದಕ್ಕೆ ಬೇಕಾದ ಎಲ್ಲಾ ವೈದ್ಯಕೀಯ ಸೌಲಭ್ಯವನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.  ರಿಲಯನ್ಸ್​ ಸಂಸ್ಥೆ ಜಾಮ್​​ನಗರದಲ್ಲಿ 1,000 ಹಾಸಿಗೆಗಳುಳ್ಳ ಕೋವಿಡ್​ ಕೇರ್​ ಸೆಂಟರನ್ನು ತೆರೆದಿದೆ. ಈ ಕೋವಿಡ್​ ಕೇರ್​ ಸೆಂಟರ್​ ಮೂಲಕ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡತ್ತಿದೆ. ಆಕ್ಸಿಜನ್​ ಸೌಲಭ್ಯ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚವನ್ನು ರಿಲಯನ್ಸ್​ ಸಂಸ್ಥೆಯೇ ಭರಿಸಿದೆ. ಜಾಮ್​ನಗರದ ಮೆಡಿಕಲ್​ ಕಾಲೇಜ್​ನಲ್ಲಿ ಸದ್ಯ 400 ವೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ಮುಕೇಶ್​ ಅಂಬಾನಿ ಅವರು ಖುದ್ದು ಇದರ ಮೇಲುಸ್ತುವಾರಿ ವಹಿಸಿದ್ದಾರೆ. ಇನ್ನೊಂದು ವಾರದೊಳಗೆ 600 ಬೆಡ್​ಗಳನ್ನು ವ್ಯವಸ್ಥೆಯನ್ನು ರಿಲಯನ್ಸ್​ ಸಂಸ್ಥೆ ಮಾಡಲಿದೆ.

  ಕೋವಿಡ್​ ಕೇರ್​ ಸೆಂಟರ್​ಗೆ ಬೇಕಾದ ಮೆಡಿಕಲ್​​ ಉಪಕರಣಗಳು, ಅಗತ್ಯ ಔಷಧಿ, ಆಕ್ಸಿಜನ್​ ಸಿಲಿಂಡರ್​ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ರಿಲಯನ್ಸ್​ ಸಂಸ್ಥೆ ಒದಗಿಸಿದೆ. ಗುಜರಾತ್​ ಸರ್ಕಾರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ರಾಜ್ಯ ಸರ್ಕಾರ ಹಾಗೂ ರಿಲಯನ್ಸ್​ ಸಂಸ್ಥೆ ಸಹಯೋಗದಲ್ಲಿ ಈ ಕೋವಿಡ್​ ಕೇರ್​ ಸೆಂಟರ್​ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದ ಜಾಮ್​​ನಗರ, ಕಬಾಲಿಯಾ, ದ್ವಾರಕ, ಪೋರಬಂದರ್​ ಹಾಗೂ ಸೌರಾಷ್ಟ್ರದ ಜನರಿಗೆ ಈ ಕೋವಿಡ್​ ಸೆಂಟರ್​ ಆಸರೆಯಾಗಲಿದೆ.

  1,000 ಬೆಡ್​ಗಳುಳ್ಳ ಕೋವಿಡ್​ ಕೇರ್​ ಸೆಂಟರ್​ ನಿರ್ಮಾಣದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದ ರಿಲಯನ್ಸ್​ ಸಂಸ್ಥೆ ಮುಖ್ಯಸ್ಥರಾದ ನೀತಾ ಅಂಬಾನಿ, ಕೊರೋನಾ ಕಷ್ಟ ಕಾಲದಲ್ಲಿ ದೇಶಕ್ಕೆ ಸಹಾಯದ ಅಗತ್ಯವಿದೆ. ನಮ್ಮ ಸಂಸ್ಥೆ ಎಲ್ಲ ರೀತಿಯಲ್ಲೂ ನೆರವು ನೀಡಲು ಸಿದ್ಧವಾಗಿದೆ. ಮುಖ್ಯವಾಗಿ ಇಂದು ಸರ್ಕಾರಕ್ಕೆ ಹೆಚ್ಚುವರಿ ಕೋವಿಡ್​ ಕೇರ್​ ಸೆಂಟರ್​ನ ಅಗತ್ಯವಿದೆ. ಇಂಥ ಸಂಕಷ್ಟ ಕಾಲದಲ್ಲಿ ದೇಶದ ಜನಕ್ಕೆ ಹೆಗಲಾಗಲು ರಿಲಯನ್ಸ್​​ ಸಂಸ್ಥೆ ಮುಂದಾಗಿದೆ. ಉಚಿತವಾಗಿ ಹಾಗೂ ನಿರಂತವಾಗಿ ಜೀವಗಳನ್ನು ಉಳಿಸುವ ಕಾರ್ಯ ಸಂಸ್ಥೆಯಿಂದ ನಡೆಯಲಿದೆ. ಜೊತೆಯಾಗಿ ನಾವೆಲ್ಲಾ ಈ ಯುದ್ಧವನ್ನು ಗೆಲ್ಲೋಣ ಎಂದು ತಿಳಿಸಿದ್ದರು. ಇನ್ನು ಮುಂಬೈನಲ್ಲೂ ರಿಲಯನ್ಸ್​ ಸಂಸ್ಥೆ 875 ಹಾಸಿಗೆಗಳ ಕೋವಿಡ್​ ಕೇರ್​ ಸೆಂಟರನ್ನು ನಿರ್ಮಿಸಿದೆ.
  Published by:Kavya V
  First published: