Vande Bharat Mission: ಮೇ 16ರಿಂದ 2ನೇ ಹಂತದ ವಂದೇ ಭಾರತ್ ಮಿಷನ್; 149 ವಿಮಾನಗಳ ಮೂಲಕ ವಿದೇಶಗಳಿಂದ ಭಾರತೀಯರನ್ನು ಕರೆತರಲು ಸಿದ್ಧತೆ

Coronavirus India Updates: ಭಾರತದಲ್ಲೂ ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಈವರೆಗೂ ಒಟ್ಟು 70 ಸಾವಿರ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಒಟ್ಟು 2290 ಜನರು ಬಲಿಯಾಗಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಎರಡನೇ ಹಂತವನ್ನು ಸರ್ಕಾರ ಮೇ 16ರಿಂದ ಆರಂಭಿಸಲಿದೆ. ವಂದೇ ಭಾರತ ಯೋಜನೆಯಡಿ ವಿವಿಧ ದೇಶಗಳಲ್ಲಿ ಸಿಲಿಕಿರುವ ಭಾರತೀಯರನ್ನು ಕರೆತರುವ ಎರಡನೇ ಹಂತದ ಕಾರ್ಯಾಚರಣೆ ಮೇ 16ರಿಂದ 22ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 31 ದೇಶಗಳಲ್ಲಿ ಸಿಲಿಕಿಕೊಂಡಿರುವ ಭಾರತೀಯರನ್ನು ಕರೆತರಲು ಒಟ್ಟು 149 ವಿಮಾನಗಳನ್ನು ನಿಯೋಜಿಸಲಾಗಿದೆ.

  ವಂದೇ ಭಾರತ್ ಯೋಜನೆಯಡಿ ಮೊದಲ ಹಂತದಲ್ಲಿ ಒಟ್ಟು ಐದು ದಿನಗಳ ಕಾಲ ಏರ್ ಇಂಡಿಯಾ ಮತ್ತು ಇದರ ಅಂಗಸಂಸ್ಥೆಯಾದ ಏರ್ ಇಂಡಿಯಾ ಏಕ್ಸ್​ಪ್ರೆಸ್​ನ 31 ವಿಮಾನಗಳು ಕೊರೋನಾ ವೈರಸ್ ಲಾಕ್​ಡೌನ್​ನಿಂದ ವಿದೇಶಗಳಲ್ಲಿ ಸಿಲುಕಿದ್ದ 6,0347 ಭಾರತೀಯರನ್ನು ಕರೆತಂದಿವೆ.

  ಏರ್​ ಇಂಡಿಯಾ ಮತ್ತು ಏರ್ ಇಂಡಿಯಾ ಏಕ್ಸ್​ಪ್ರೆಸ್​ ಮೇ 7ರಿಂದ ಮೇ 14ರವರೆಗೆ ಒಟ್ಟು 64 ವಿಮಾನಗಳು ಭಾರತೀಯರನ್ನು ವಿದೇಶಗಳಿಂದ ಕರೆತರುವ ಕಾರ್ಯಾಚರಣೆ ಆರಂಭಿಸಿವೆ. ಈ ಅವಧಿಯಲ್ಲಿ ಒಟ್ಟು 12 ದೇಶಗಳಿಂದ ಸುಮಾರು 15 ಸಾವಿರ ಭಾರತೀರನ್ನು ಸ್ವದೇಶಕ್ಕೆ ಕರೆತರಲಿವೆ.  ಭಾರತದಲ್ಲೂ ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಈವರೆಗೂ ಒಟ್ಟು 70 ಸಾವಿರ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಒಟ್ಟು 2290 ಜನರು ಬಲಿಯಾಗಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ.

  ಇದನ್ನು ಓದಿ: PM Narendra Modi Speech: 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್, ಲಾಕ್​ಡೌನ್​ ವಿಸ್ತರಣೆ; ಮೋದಿ ಘೋಷಣೆ
  First published: