• ಹೋಂ
 • »
 • ನ್ಯೂಸ್
 • »
 • Corona
 • »
 • ಹಕ್ಕು ಪಡೆಯದೆ ಖಾಲಿ ಬಿದ್ದಿದೆ 58,000 ಕೋಟಿ ಪಿಎಫ್​ ಹಣ: ನಿಮ್ಮ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಹೀಗೆ ಮಾಡಿ

ಹಕ್ಕು ಪಡೆಯದೆ ಖಾಲಿ ಬಿದ್ದಿದೆ 58,000 ಕೋಟಿ ಪಿಎಫ್​ ಹಣ: ನಿಮ್ಮ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲವರು ಅವಶ್ಯಕತೆ ಇದ್ದರೂ ಈ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಿವೃತ್ತಿಯಾದ ಬಳಿಕ ಪಿಎಫ್‌ ಹಣವನ್ನು ಸುಲಭವಾಗಿ ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅದಕ್ಕೆ ಪಿಎಫ್‌ ಚಂದಾದಾರರು ಕೆಲ ಅಪ್‌ಡೇಟ್‌ಗಳನ್ನು ಮಾಡಬೇಕು ಅಷ್ಟೇ. ನೀವೂ ಸಹ ಪಿಎಫ್‌ ಹಣ ಪಡೆದುಕೊಳ್ಳಬೇಕಾ.. ಹಾಗಾದರೆ,  ಮುಂದೆ ಓದಿ.

ಮುಂದೆ ಓದಿ ...
 • Share this:

  ಕೊರೊನಾ ವೈರಸ್‌ ಸಮಯದಲ್ಲಿ ತೊಂದರೆಗೀಡಾದವರಿಗೆ ಪಿಎಫ್‌ ಹಣವನ್ನು ಚಂದಾದಾರರು ಪಡೆದುಕೊಳ್ಳಲು ಇಪಿಎಫ್‌ಒ ಕಳೆದ ವರ್ಷದಂತೆ ಈ ವರ್ಷವೂ ಅವಕಾಶ ನೀಡಿದೆ. ಅಲ್ಲದೆ, ಬಡ್ಡಿ ದರವನ್ನು ಕಡಿಮೆ ಮಾಡದೆ ಭವಿಷ್ಯ ನಿಧಿ ಸಂಸ್ಥೆ ತನ್ನ ಚಂದಾದಾರರನ್ನು ಹೆಚ್ಚು ತೊಂದರೆಗೀಡಾಗದಂತೆಯೂ ಮಾಡಿದೆ. ಆದರೂ, ಇಪಿಎಫ್‌ಒನಲ್ಲಿ 58,000 ಕೋಟಿ ರೂ.ಗಳಷ್ಟು ಹಣವನ್ನು ಹಕ್ಕು ಪಡೆಯಲಾಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ.


  ಹಲವರು ಅವಶ್ಯಕತೆ ಇದ್ದರೂ ಈ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಿವೃತ್ತಿಯಾದ ಬಳಿಕ ಪಿಎಫ್‌ ಹಣವನ್ನು ಸುಲಭವಾಗಿ ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅದಕ್ಕೆ ಪಿಎಫ್‌ ಚಂದಾದಾರರು ಕೆಲ ಅಪ್‌ಡೇಟ್‌ಗಳನ್ನು ಮಾಡಬೇಕು ಅಷ್ಟೇ. ನೀವೂ ಸಹ ಪಿಎಫ್‌ ಹಣ ಪಡೆದುಕೊಳ್ಳಬೇಕಾ.. ಹಾಗಾದರೆ,  ಮುಂದೆ ಓದಿ..


  ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯೊಂದಿಗೆ 58,000 ಕೋಟಿ ರೂ.ಗಳಷ್ಟು ಹಣವನ್ನು ಹಕ್ಕು ಪಡೆಯಲಾಗುತ್ತಿಲ್ಲ ಎಂದು ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳೆಂದು ಹೇಳಿಕೊಳ್ಳುವ  ಭಾರತದ ನೌಕರರ ಸಾಮಾಜಿಕ ಭದ್ರತಾ ಸಂಸ್ಥೆ ಹೇಳಿದೆ. ಹಕ್ಕು ಪಡೆಯದ ಇಪಿಎಫ್ ಮೊತ್ತದ ಹೆಚ್ಚುತ್ತಿರುವ ಮೂಲವನ್ನು ನೋಡಿದ, ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಚಂದಾದಾರರಿಗೆ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಡೇಟ್‌ ಮಾಡಲುಅಥವಾ ಅವರ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಳುತ್ತಿದೆ. ಚಂದಾದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇದನ್ನು ಮಾಡಲಾಗಿದೆ, ಮತ್ತು ಯಾವುದೇ ಸಮಸ್ಯೆಯಿಲ್ಲದೆ ಮೊತ್ತವನ್ನು ಉದ್ಯೋಗಿಗಳ ಅಥವಾ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದೂ ಭರವಸೆ ನೀಡಿದೆ.


  ಇತ್ತೀಚೆಗೆ, ಅನೇಕ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ ಮತ್ತು ಅವುಗಳ ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ವಿಲೀನಗೊಂಡ ಸರ್ಕಾರಿ ಬ್ಯಾಂಕುಗಳ ಗ್ರಾಹಕರಿಗೆ ತಮ್ಮ ವಿವರಗಳ ನವೀಕರಣಗಳನ್ನು ಮತ್ತು ಹಕ್ಕುಗಳನ್ನು ಮಾಡುವಾಗ ಯಾವುದೇ ಸಮಸ್ಯೆಯನ್ನು ಎದುರಿಸದಂತೆ ಖಾತೆಗಳನ್ನು ಲಿಂಕ್ ಮಾಡಲು ಇಪಿಎಫ್‌ಒ ಮನವಿ ಮಾಡಿದೆ.


  ಪಿಎಫ್ ಖಾತೆಗಳನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸದಿದ್ದರೆ, ಇಪಿಎಫ್ ಚಂದಾದಾರರು ತಮ್ಮ ಮೊತ್ತವನ್ನು ವರ್ಗಾವಣೆ ಮಾಡಲು ಆನ್‌ಲೈನ್ ಹಕ್ಕು ಪಡೆಯಲು ಸಾಧ್ಯವಿಲ್ಲ ಎಂಬುದು ಸಹ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ. ಪ್ರಸ್ತುತ, ದೇಶದಲ್ಲಿ 6 ಕೋಟಿಗೂ ಹೆಚ್ಚು ಪಿಎಫ್ ಚಂದಾದಾರರಿದ್ದಾರೆ.


  ನೌಕರರ ಭವಿಷ್ಯ ನಿಧಿ (ಇಪಿಎಫ್) ಎಂಬುದು ಸರ್ಕಾರದ ಬೆಂಬಲಿತ ಯೋಜನೆಯಾಗಿದ್ದು, ಇದು ಸಂಬಳ ಪಡೆಯುವ ನೌಕರರಿಗೆ ಪಿಎಫ್‌ ಹಣದ ಕಡ್ಡಾಯ ಕಡಿತವನ್ನು ಬಯಸುತ್ತದೆ. ಈ ನಿಧಿಯಲ್ಲಿ, ಸಂಬಳದ ಒಂದು ನಿರ್ದಿಷ್ಟ ಭಾಗವನ್ನು ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಕೊಡುಗೆ ನೀಡುತ್ತಾರೆ ಮತ್ತು ಸಾಮಾನ್ಯವಾಗಿ ನಿವೃತ್ತಿಯ ಸಮಯದಲ್ಲಿ ಈ ಹಣವನ್ನು ಒದಗಿಸುವ ಗುರಿಯನ್ನು ಇಪಿಎಫ್‌ಒ ಹೊಂದಿದೆ.


  ಈ ಮೊದಲು, ಇಪಿಎಫ್‌ಒ ತಮ್ಮ ಖಾತೆಯನ್ನು ಜುಲೈನಿಂದ ಆಧಾರ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಲು ಕೇಳಿಕೊಂಡಿದೆ. ಇದನ್ನು ಮಾಡುವಲ್ಲಿ ವಿಫಲವಾದರೆ ಪಿಎಫ್ ಖಾತೆದಾರರಿಗೆ ಉದ್ಯೋಗದಾತ ಕೊಡುಗೆಯನ್ನು ಸಹ ನಿಲ್ಲಿಸಬಹುದು.


  ಇದನ್ನೂ ಓದಿ: Siddaramaiah| ಮುಂದಿನ ಚುನಾವಣೆಯಲ್ಲಿ ನಾನು ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ; ಸಿದ್ದರಾಮಯ್ಯ ಘೋಷಣೆ!


  ಅಲ್ಲದೆ, ಪಿಎಫ್ ಖಾತೆ ಹೊಂದಿರುವ ಚಂದಾದಾರರು ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ, ಅವರು ಇಪಿಎಫ್‌ಒನ ಇತರ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  First published: