ಕೊರೋನಾ ಭಯ; ಜೂಮ್ ವಿಡಿಯೋ ಕಾಲ್ ಮೂಲಕ ಮದುವೆ; ಕಾನೂನು ಮಾನ್ಯತೆ ನೀಡಿದ ನ್ಯೂಯಾರ್ಕ್ ಆಡಳಿತ

ವಿಶ್ವದಾದ್ಯಂತ ಇಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದಿಗ್ಭ ಸಂದರ್ಭದಲ್ಲಿ ಮದುವೆ ಮತ್ತು ಸಮಾಜಿಕ ಅಂತರ ಎರಡರ ಬಗ್ಗೆಯೂ ಸಮತೋಲನ ಕಾಪಾಡಲು ಮುಂದಾಗಿರುವ ನ್ಯೂಯಾರ್ಕ್ ಆಡಳಿತ ಇದಕ್ಕೊಂದು ಪರಿಹಾರ ಹುಡುಕಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನ್ಯೂಯಾರ್ಕ್ (ಏಪ್ರಿಲ್ 20); ಕೊರೋನಾ ವೈರಸ್ ಜಗತ್ತಿನಾದ್ಯಂತ ತನ್ನ ಕಬಂಧಬಾಹುವನ್ನು ಚಾಚಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಮದುವೆ ಸಮಾರಂಭಗಳು ಸಹ ಸ್ಥಗಿತಗೊಂಡಿವೆ.

ಆದಾಗ್ಯೂ, ಅನೇಕ ಜೋಡಿಗಳು ಕೊರೋನಾ ವೈರಸ್ ಹರಡುವುದನ್ನು ತಡೆಯಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ವಿಡಿಯೋ ಕರೆಗಳ ಮೂಲಕವೇ ತಮ್ಮ ವಿವಾಹವನ್ನು ನೆರವೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಭಾರತದಲ್ಲಿ ಸಾಧ್ಯವಿಲ್ಲದೆ ಇರಬಹುದು. ಆದರೆ, ಯುರೋಪ್ ದೇಶಗಳಲ್ಲಿ ಇಂತಹ ವಿಡಿಯೋ ಕಾಲ್ ಮದುವೆಗಳು ಇತ್ತೀಚೆಗೆ ಭಾರೀ ಸಂಖ್ಯೆಯಲ್ಲಿ ಏರುತ್ತಿದೆ.

ವಿಶ್ವದಾದ್ಯಂತ ಇಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದಿಗ್ಭ ಸಂದರ್ಭದಲ್ಲಿ ಮದುವೆ ಮತ್ತು ಸಮಾಜಿಕ ಅಂತರ ಎರಡರ ಬಗ್ಗೆಯೂ ಸಮತೋಲನ ಕಾಪಾಡಲು ಮುಂದಾಗಿರುವ ನ್ಯೂಯಾರ್ಕ್ ಆಡಳಿತ ಇದಕ್ಕೊಂದು ಪರಿಹಾರ ಹುಡುಕಿದೆ.ಈ ಕುರಿತು ಶನಿವಾರ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಮಾತನಾಡಿ, “ಇಂತಹ ಸಂದರ್ಭದಲ್ಲಿ ಮದುವೆ ಪ್ರಶ್ನೆ ಬಂದಾಗ ಕೆಲವು ಸಡಿಲಿಕೆಗಳು ಅನಿವಾರ್ಯ. ನೀವು ಜೂಮ್ ವಿಡಿಯೋ ಕಾಲ್ ಮೂಲಕವೂ ಮದುವೆಯಾಗಬಹುದು. ಹೀಗಾಗಿ ಮದುವೆ ವಿಚಾರದಲ್ಲಿ ನವ ಜೋಡಿಗಳಿಗೆ ಕೆಲವು ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಜೂಮ್ ಮೂಲಕ ನೆರವೇರುವ ಎಲ್ಲರ ಮದುವೆಗೂ ಸರ್ಕಾರ ಕಾನೂನಾತ್ಮಕ ಮಾನ್ಯತೆ ನೀಡಲಿದೆ” ಎಂದು ತಿಳಿಸಿದ್ದಾರೆ.

ಅಲ್ಲದೆ, “ಈ ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ಸಭೆಗಳು, ಆನ್‌ಲೈನ್ ತರಗತಿಗಳು ಸೇರಿದಂತೆ ಅನೇಕ ವಿಭಾಗಗಳಲ್ಲಿ ವೀಡಿಯೊ ಕರೆ ವೇದಿಕೆಯಾದ ಜೂಮ್ ತೀವ್ರ ಜನಪ್ರಿಯತೆಯನ್ನು ಗಳಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಭಾನುವಾರ ಒಂದೇ ದಿನ 1,997 ಕ್ಕೂ ಹೆಚ್ಚು ಜನರು ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 40,555 ಕ್ಕೆ ಏರಿಕೆಯಾಗಿದೆ. ಅಲ್ಲದೆ, 7,63,835 ಜನರಿಗೆ ಕೊರೋನಾ ಸೋಂಕು ತಗುಲಿದ್ದ ಜಗತ್ತಿನಲ್ಲೇ ಅತೀ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿದ ದೇಶ ಎಂಬ ಕುಖ್ಯಾತಿಗೂ ಅಮೆರಿಕ ಒಳಗಾಗಿದೆ.

ಇದನ್ನೂ ಓದಿ : ಅಮೆರಿಕದಲ್ಲಿ ನಿಲ್ಲದ ಕೊರೋನಾ ಆರ್ಭಟ; ಒಂದೇ ದಿನ 1997 ಜನ ಬಲಿ, 40,000 ದಾಟಿದ ಸೋಂಕಿತರ ಸಂಖ್ಯೆ
First published: