HOME » NEWS » Coronavirus-latest-news » IN BBMP BUDGET RESERVES MONEY FOR EDUCATION DEPARTMENT LG

BBMP Budget 2020: ಶಿಕ್ಷಣ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್​​ನಲ್ಲಿ ಮೀಸಲಿಟ್ಟ ಹಣ ಎಷ್ಟು ಗೊತ್ತೇ?

Bruhat Bengaluru Mahanagara Palike Budget 2020: ಇನ್ನು, ವಿದ್ಯಾರ್ಥಿಗಳಿಗೆ ಬಿಎಂಟಿಸಿಯ ಉಚಿತ ಬಸ್ ಪಾಸ್ ಕಾರ್ಯಕ್ರಮಕ್ಕಾಗಿ 75 ಲಕ್ಷ  ಹಣ ಮೀಸಲಿರಿಸಲಾಗಿದೆ.  ಸಿ.ಸಿ ಕ್ಯಾಮೆರಾ ಅಳವಡಿಕೆಗೆ 5 ಕೋಟಿ ಹಣ ಮೀಸಲು ಇಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 2 ಕೋಟಿ ಹಣ ಮೀಸಲಿಡಲಾಗಿದೆ.

news18-kannada
Updated:April 20, 2020, 1:55 PM IST
BBMP Budget 2020: ಶಿಕ್ಷಣ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್​​ನಲ್ಲಿ ಮೀಸಲಿಟ್ಟ ಹಣ ಎಷ್ಟು ಗೊತ್ತೇ?
ಬಿಬಿಎಂಪಿ
  • Share this:
ಬೆಂಗಳೂರು(ಏ.20): ಇಂದು ಬಿಬಿಎಂಪಿ ಬಜೆಟ್​ನ್ನು ಮಂಡಿಸಲಾಗಿದ್ದು, ಶಿಕ್ಷಣ, ಆರೋಗ್ಯ ಇನ್ನೂ ಮೊದಲಾದ ಇಲಾಖೆಗಳಿಗೆ ಅನುದಾನವನ್ನು ಮೀಸಲಿಡಲಾಗಿದೆ.  ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್​.ಶ್ರೀನಿವಾಸ್​ ಬಜೆಟ್​ ಮಂಡನೆ ಮಾಡಿದರು. ಈ ಬಾರಿಯ ಬಿಬಿಎಂಪಿ ಬಜೆಟ್ ಗಾತ್ರ 10,899 ಕೋಟಿಯದ್ದಾಗಿದೆ. 

ಈ ಬಜೆಟ್​​ನಲ್ಲಿ ಶಿಕ್ಷಣ ವಿಭಾಗಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್ ಶಿಕ್ಷಣ ಆರಂಭಕ್ಕೆ 7 ಕೋಟಿ ಮೀಸಲು ಇಡಲಾಗಿದೆ. ಜ್ಞಾನ ದೀಪ ಕಾರ್ಯಕ್ರಮಕ್ಕೆ 7.5 ಕೋಟಿ ಹಣ ಮೀಸಲಿರಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಶಾಲೆಗಳ ನಿರ್ಮಾಣಕ್ಕೆ 10 ಕೋಟಿ ಮೀಸಲು ಹಣ ಇಡಲಾಗಿದೆ.

ಇನ್ನು, ವಿದ್ಯಾರ್ಥಿಗಳಿಗೆ ಬಿಎಂಟಿಸಿಯ ಉಚಿತ ಬಸ್ ಪಾಸ್ ಕಾರ್ಯಕ್ರಮಕ್ಕಾಗಿ 75 ಲಕ್ಷ  ಹಣ ಮೀಸಲಿರಿಸಲಾಗಿದೆ.  ಸಿ.ಸಿ ಕ್ಯಾಮೆರಾ ಅಳವಡಿಕೆಗೆ 5 ಕೋಟಿ ಹಣ ಮೀಸಲು ಇಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 2 ಕೋಟಿ ಹಣ ಮೀಸಲಿಡಲಾಗಿದೆ.

Padarayanapura Riot: ಪಾದರಾಯನಪುರಕ್ಕೆ ವೈದ್ಯ ಸಿಬ್ಬಂದಿಗಳು ರಾತ್ರಿ ವೇಳೆ ಹೋಗಬಾರದಿತ್ತು; ಜಮೀರ್ ಅಹಮದ್ ಅಸಮಾಧಾನ

 ಪಾಲಿಕೆಯ ಶಾಲಾ -ಕಾಲೇಜುಗಳ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿಗೆ 2 ಕೋಟಿ ರೂ. ಹಣವನ್ನು ಮೀಸಲು ಇರಿಸಲಾಗಿದೆ. ಶಾಲಾ ಕಾಲೇಜು ಶಿಕ್ಷಕರ ಸಮವಸ್ತ್ರಕ್ಕೆ 30 ಲಕ್ಷ ಹಣವನ್ನು ಕಾಯ್ದಿರಿಸಲಾಗಿದೆ. ಅಂತರ್ ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಲಕ್ಷ ಹಣವನ್ನು ಮೀಸಲು ಇಡಲಾಗಿದೆ.

ಸಚಿವ ಆರ್ ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್, ಮೇಯರ್ ಗೌತಮ್ ಕುಮಾರ್, ಉಪಮೇಯರ್, ಆಡಳಿತ ಮತ್ತು ವಿಪಕ್ಷ ನಾಯಕರು ಸೇರಿದಂದೆ ಸ್ಥಾಯಿ ಸಮಿತಿ ಅದ್ಯಕ್ಷರುಗಳು ಕೆಲ ಶಾಸಕರು ಹಾಗೂ ಕೆಲವು ಪಾಲಿಕೆ ಸದಸ್ಯರು ಮಾತ್ರ ಬಜೆಟ್​ ಮಂಡನೆಯನ್ನು ವಿಡಿಯೋ ಕಾನ್ಫೆರೆನ್ಸ್​ ಮೂಲಕ ವೀಕ್ಷಿಸಿದರು.
 

 
First published: April 20, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories