ತೈಲ ದರದಲ್ಲಿ ಮತ್ತೆ ಮಹಾಕುಸಿತ; 1999ರ ನಂತರ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾ ತೈಲ

ಏಕಾಏಕಿ ಹಬ್ಬಿದ ಮಾರಕ ಸೋಂಕಿನಿಂದ ಇಂಧನ ಬೇಡಿಕೆ ವಿಶ್ವದಾದ್ಯಂತ ಶೇ.30ರಷ್ಟು ಕಡಿಮೆಯಾಗಿದೆ. ಮತ್ತು ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕರಾದ ಯುನೈಟೆಡ್​ ಸ್ಟೇಟ್ಸ್​ನ ಇಂಧನ ಕಂಪನಿಗಳು ಹೆಚ್ಚುವರಿ ತೈಲ ಶೇಖರಣೆ ಮಾರ್ಗೋಪಾಯ ಕಂಡುಕೊಳ್ಳಲು ಪರದಾಡುತ್ತಿವೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ತೈಲ ದರ ಬುಧವಾರ ಮತ್ತೆ ಕುಸಿದಿದ್ದು, 1999ರಿಂದ ಇದೇ ಮೊದಲ ಬಾರಿಗೆ ತೈಲ ದರ ಈ ಪ್ರಮಾಣದಲ್ಲಿ ಕುಸಿದಿದೆ. ಕೊರೋನಾ ವೈರಸ್​ನಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಸ್ಥಬ್ಧವಾಗಿದ್ದು, ವಾಹನ ಓಡಾಟದಿಂದ ಹಿಡಿದು ವಿಮಾನ ಹಾರಾಟ ರದ್ದಾಗಿರುವುದರಿಂದ ತೈಲದ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ತೈಲ ಮಾರುಕಟ್ಟೆ ಕಂಗೆಟ್ಟು ಹೋಗಿದೆ.

  ಹಿಂದಿನ ಅವಧಿಯಲ್ಲಿ ಕಚ್ಚಾ ತೈಲ ಶೇ.24ರಷ್ಟು ಕುಸಿಯುವ ಮೂಲಕ ಬ್ಯಾರಲ್​ಗೆ 15.98 ಡಾಲರ್​ ತಲುಪಿತ್ತು. ಈ ಪ್ರಮಾಣದಲ್ಲಿ ಕಚ್ಛಾ ತೈಲ ದರ ಕುಸಿದಿದ್ದು 1999ರ ಜೂನ್​ ನಂತರ ಇದೇ ಮೊದಲು. 0432 ಜಿಎಂಟಿ ವಹಿವಾಟಿನಲ್ಲೂ ಮತ್ತೆ 2.70 ಡಾಲರ್ ಅಥವಾ ಶೇ.14ರಷ್ಟು ಕುಸಿತ ಕಂಡಿದೆ.

  ಪಶ್ಚಿಮ ಟೆಕ್ಸಾಸ್ ಇಂಟರ್​ಮಿಡಿಯೆಟ್​ 68 ಸೆಂಟ್ಸ್ ಅಥವಾ ಶೇ. 6ರಷ್ಟು ಇಳಿಕೆಯಾಗಿ ಬ್ಯಾರೆಲ್​ಗೆ 10.89 ಡಾಲರ್​ ತಲುಪಿದೆ.

  ತೈ,ಲ ವಹಿವಾಟಿನ ಇತಿಹಾಸದಲ್ಲಿ ಕಳೆದ ಎರಡು ದಿನಗಳಲ್ಲಿ ವಿಪರೀತ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದರೆ, ಮುಂಬರುವ ಕೆಲ ತಿಂಗಳಲ್ಲಿ ತೈಲಕ್ಕೆ ವಿಶ್ವದಾದ್ಯಂತ ಭಾರೀ ಬೇಡಿಕೆ ಸೃಷ್ಟಿಯಾಗಲಿದೆ. ಯಾಕೆಂದರೆ ಪ್ರಸ್ತುತ ಬೇಡಿಕೆ ಕುಸಿತದಿಂದ ಉತ್ಪಾದನೆ ಕಡಿತ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ತೈಲ ಅಭಾವ ತಲೆದೋರಬಹುದಾಗಿದೆ.

  ಕೊರೋನಾ ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಹರಡಿರುವುದರಿಂದ ಈ ವರ್ಷ ತೈಲ ಬೆಲೆ ಸುಮಾರು ಶೇ.80ರಷ್ಟು ಕುಸಿದಿದೆ. ಮಾರಕ ಕೊರೋನಾ ಹೆಮ್ಮಾರಿಯಿಂದ ವಿಶ್ವದಾದ್ಯಂತ ಈವರೆಗೂ 1,80,000 ಜನರು ಮೃತಪಟ್ಟಿದ್ದಾರೆ. ಎಲ್ಲ ದೇಶಗಳ ಆರ್ಥಿಕ ಸ್ಥಿತಿಗತಿ ಅಯೋಮಯವಾಗಿದೆ. 1930ರ ಕೆಟ್ಟ ಆರ್ಥಿಕತೆಯನ್ನು ಮತ್ತೆ ಜಗತ್ತು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿವೆ.

  ಇದನ್ನು ಓದಿ: Earth day 2020: ಜೇನುನೊಣ-ಪರಾಗಸ್ಪರ್ಶ: ಕ್ರಿಯಾತ್ಮಕವಾಗಿ ವಿಶ್ವ ಭೂದಿನ ಆಚರಿಸಿದ ಗೂಗಲ್ ಡೂಡಲ್

  ಏಕಾಏಕಿ ಹಬ್ಬಿದ ಮಾರಕ ಸೋಂಕಿನಿಂದ ಇಂಧನ ಬೇಡಿಕೆ ವಿಶ್ವದಾದ್ಯಂತ ಶೇ.30ರಷ್ಟು ಕಡಿಮೆಯಾಗಿದೆ. ಮತ್ತು ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕರಾದ ಯುನೈಟೆಡ್​ ಸ್ಟೇಟ್ಸ್​ನ ಇಂಧನ ಕಂಪನಿಗಳು ಹೆಚ್ಚುವರಿ ತೈಲ ಶೇಖರಣೆ ಮಾರ್ಗೋಪಾಯ ಕಂಡುಕೊಳ್ಳಲು ಪರದಾಡುತ್ತಿವೆ.

   
  First published: