ಕೊರೋನಾ ಎಫೆಕ್ಟ್​: ಜಾಗತಿಕ ಆರ್ಥಿಕ ಕುಸಿತ ಸುಧಾರಣೆ ಸದ್ಯಕ್ಕಿಲ್ಲ- ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ

ಪ್ರಪಂಚದ ಬಹುತೇಕ ಲಾಕ್​ಡೌನ್​​ ಮಾಡಿರುವುದರಿಂದ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗಿದೆ. ಈ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕೊನೆ ಯಾವಾಗ? ಎಂದು ಹೇಳಲಾಗದು. ಇಂತಹ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಕಾಲ ಬೇಕು. ನಾವು ಇದನ್ನು ಎದುರಿಸಲು ಸಿದ್ದರಿರಬೇಕು ಎಂದರು.

news18-kannada
Updated:May 19, 2020, 10:07 AM IST
ಕೊರೋನಾ ಎಫೆಕ್ಟ್​: ಜಾಗತಿಕ ಆರ್ಥಿಕ ಕುಸಿತ ಸುಧಾರಣೆ ಸದ್ಯಕ್ಕಿಲ್ಲ- ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ
ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ
  • Share this:
ನವದೆಹಲಿ(ಮೇ.19): ಕೊರೋನಾ ವೈರಸ್​ ಸಾಂಕ್ರಾಮಿಕ ರೋಗವೂ ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.  ಈ ಕುರಿತು ಮಾಧ್ಯಮದವರೊಂದಿಗೆ ಮಾತಾಡಿರುವ ಕ್ರಿಸ್ಟಲಿನಾ ಜಿರ್ಜೀವಾ, ಸದ್ಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್​​-19 ಜಾಗತೀಕ ಆರ್ಥಿಕತೆಯನ್ನು ಹಿಂದಕ್ಕೆ ದೂಡಿದೆ. ಇದರಿಂದ ಅಭಿವೃದ್ಧಿಶೀಲ ದೇಶಗಳಿಗೆ ಭಾರೀ ಹೊಡೆತ ಬಿದ್ದಿದೆ ಎಂದರು.

ಪ್ರಪಂಚದ ಬಹುತೇಕ ಲಾಕ್​ಡೌನ್​​ ಮಾಡಿರುವುದರಿಂದ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗಿದೆ. ಈ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕೊನೆ ಯಾವಾಗ? ಎಂದು ಹೇಳಲಾಗದು. ಇಂತಹ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಕಾಲ ಬೇಕು. ನಾವು ಇದನ್ನು ಎದುರಿಸಲು ಸಿದ್ದರಿರಬೇಕು ಎಂದರು.

ಹೀಗೆ ಮುಂದುವರಿದ ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ, 2020ರಲ್ಲಿ ಜಾಗತಿಕ ಜಿಡಿಪಿ ಶೇ. 3ಕ್ಕೆ ಕುಸಿಯಬಹುದು. 2021ರ ವೇಳೆಗೆ ಶೇ. 5.8 ರಷ್ಟು ಆಗುವ ನಿರೀಕ್ಷೆ ಇದೆ. ಇದರ ಅಂಕಿ ಅಂಶಗಳು ನಿರೀಕ್ಷೆಗಿಂತಲೂ ಕೆಟ್ಟದಾಗಿವೆ. ಇದರರ್ಥ ಚೇತರಿಸಿಕೊಳ್ಳಲು ಈಗಲೇ ಸಾಧ್ಯವಿಲ್ಲ ಎನ್ನುವುದು ಎಂದು ಎಚ್ಚರಿಸಿದರು.

ಇದನ್ನೂ ಓದಿ: ಅಮೆರಿಕಕ್ಕೆ ಭಾರತ ಸರಬರಾಜು ಮಾಡಿದ ಔಷಧಿಯನ್ನೇ ನಿತ್ಯ ಸೇವಿಸುತ್ತಿರುವ ಟ್ರಂಪ್

ಇನ್ನು, 80ಕ್ಕೂ ಹೆಚ್ಚು ದೇಶಗಳು ನಮ್ಮ ಬಳಿ ಸಹಾಯ ಕೇಳಿವೆ. ಹೆಚ್ಚಾಗಿ ಕಡಿಮೆ ಆದಾಯ ಹೊಂದಿರುವವರು, ಈಗಾಗಲೇ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ತುರ್ತು ಸಹಾಯವನ್ನು ಕೋರಿದ್ದಾರೆ. ತಮ್ಮದೇ ಆದ ಮೀಸಲು ಮತ್ತು ದೇಶೀಯ ಸಂಪನ್ಮೂಲಗಳು ಸಾಕಾಗುವುದಿಲ್ಲ ಎಂದು ಈ ಹಿಂದೆಯೇ ಜಾರ್ಜೀವಾ ಹೇಳಿದ್ದರು.
First published: May 19, 2020, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading