HOME » NEWS » Coronavirus-latest-news » ILLEGAL SAND MINING TAKING PLACE AT BADAMI IN BAGALKOTE HK

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ

ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

news18-kannada
Updated:May 17, 2020, 12:15 PM IST
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ
ಅಕ್ರಮ ಮರಳುಗಾರಿಕೆ
  • Share this:
ಬಾಗಲಕೋಟೆ(ಮೇ17): ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸದ್ದು ಜೋರಾಗಿದೆ. ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಅಕ್ರಮ ಮರಳು ಗಣಿಗಾರಿಕೆಗೆ ಮಲಪ್ರಭಾ ನದಿ ತೀರ ಹಾಟ್ ಸ್ಪಾಟ್ ಆಗಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲ್ಲಾಪೂರದಲ್ಲಿ ಆನಂದ್ ಬಾಬಾ ಜನಾದ್ರಿ ಎಂಬುವರ 7ಎಕರೆ 23 ಗುಂಟೆ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ಲೀಸ್ ಪಡೆದಿದ್ದಾರೆ. ಆದರೆ, ಆನಂದ್ ಬಾಬಾ ಜನಾದ್ರಿ ಎಂಬುವರ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದ ಸರ್ವೆ ನಂಬರ್ 80ರ ಜಮೀನಿನಲ್ಲಿ ಲೀಸ್ ಅನುಮತಿ ಪಡೆಯದೇ ಮರಳು ಲೂಟಿ ಮಾಡಿ ಅಧಿಕೃತ ಪಾಯಿಂಟ್ ಕಲ್ಲಾಪೂರದಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕಲ್ಲಾಪೂರ ಹಾಗೂ ಕಿತ್ತಲಿ ಗ್ರಾಮ ಮಲಪ್ರಭಾ ನದಿ ತೀರದ ಬಲ, ಎಡದಂಡೆಯಲ್ಲಿ ಬರುವ ಗ್ರಾಮಗಳು. ಇದೀಗ ಅಕ್ರಮ ಮರಳು ದಂಧೆಕೋರರಿಗೆ ಲೀಸ್ ಪಡೆಯುವುದು ಒಂದೆಡೆ, ಮರಳು ಲೂಟಿ ಮಾಡುವುದು ಮತ್ತೊಂದೆಡೆ ಅನ್ನುವುದಕ್ಕೆ ಅನುಕೂಲವಾಗಿದೆ. ಇನ್ನು ಅಧಿಕಾರಿಗಳು ಕೊರೋನಾ ಡ್ಯೂಟಿಯಲ್ಲಿ ನಿರತರಾಗಿದ್ದಾರೆ. ಅಕ್ರಮ ಮರಳು ದಂಧೆಕೋರರು ಲೂಟಿಯಲ್ಲಿ ತೊಡಗಿದ್ದಾರೆ. ಕಲ್ಲಾಪೂರ ಗ್ರಾಮದಲ್ಲಿ ಲೀಸ್ ಪಡೆದ ಜಮೀನಿನಲ್ಲಿ ಮರಳು ಖಾಲಿಯಾಗಿದೆ. ಹಾಗಾಗಿ ಕಿತ್ತಲಿ ಗ್ರಾಮದಲ್ಲಿ ಲೀಸ್ ಪಡೆಯದ ಮಲಪ್ರಭಾ ನದಿ ಒಡಲಿನಲ್ಲಿರುವ ಜಮೀನಿನಲ್ಲಿ ಜೆಸಿಬಿ ಮೂಲಕ ಬಗೆದು ಮರಳು ಎಗ್ಗಿಲ್ಲದೆ ಸಾಗಿಸುತ್ತಿದ್ದಾರೆ.

ಇನ್ನು ಕಿತ್ತಲಿ ಗ್ರಾಮದ ಸರ್ವೆ ನಂಬರ್ 80, ಜಮೀನು ಶಿವನಗೌಡ, ಮಲ್ಲಪ್ಪ, ಸಂಗಪ್ಪ ಎಂಬುವರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಈ ಜಮೀನಿನಲ್ಲಿ ಹಗಲುರಾತ್ರಿ ಅನಧಿಕೃತ ಮರಳು ಸಾಗಾಟ ಮಾಡಿ ಕಲ್ಲಾಪೂರ ಅಧಿಕೃತ ಪಾಯಿಂಟ್ ನಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆಂದು ಬಲವಾಗಿ ಆರೋಪ ಕೇಳಿ ಬರುತ್ತಿದೆ. ಬಾದಾಮಿ ತಾಲೂಕಿನ ಮಲಪ್ರಭಾ ನದಿ ತೀರದಲ್ಲಿನ ಮರಳು ಗಣಿಗಾರಿಕೆ ಪಾಯಿಂಟ್ ಳಿಂದ ಮರಳು ತುಂಬಿದ ಲಾರಿಗಳ ಓಡಾಟ ಜೋರಾಗಿದೆ.

ಓವರ್ ಸ್ಪೀಡ್ ಲಾರಿ ಓಡಾಟಕ್ಕೆ ಬಾದಾಮಿ ಜನತೆ ಬೆಚ್ಚಿ ಬಿದ್ದಿದ್ದು, ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಕಿತ್ತಲಿ ಗ್ರಾಮದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ‌ಸ್ಥಳ ಪರಿಶೀಲನೆ ಮಾಡಲಾಗುವುದು. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅನಧಿಕೃತ ಪಾಯಿಂಟ್ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಾದಾಮಿ ತಹಶೀಲ್ದಾರ್ ಎಸ್ ಎಸ್ ಇಂಗಳೆ ಹೇಳುತ್ತಾರೆ.

ಏನೇ ಆಗಲಿ ಒಂದೆಡೆ ಅನುಮತಿ ಪಡೆದು ಮತ್ತೊಂದೆಡೆ ಅಕ್ರಮ ಮರಳು ದಂಧೆ ನಡೆಸುತ್ತಿರುವುದು ನ್ಯೂಸ್ 18 ಕನ್ನಡ ಬಯಲು ಮಾಡಿ, ಅಧಿಕಾರಿಗಳ ಗಮನಕ್ಕೆ ತಂದಿದೆ.ಇದನ್ನೂ ಓದಿ : ಕಲಬುರ್ಗಿಯ ಮೋಮಿನಪುರ ಕೊರೋನಾ ಹಾಟ್ ಸ್ಟಾಟ್ ; ಮನೆ ಮನೆ ಸ್ಕ್ರೀನಿಂಗ್ ಆರಂಭಿಸಿದ ಜಿಲ್ಲಾಡಳಿತ

ಕೊರೊನಾ ಲಾಕ್ ಡೌನ್ ಮಧ್ಯೆಯೂ ಅಕ್ರಮ ಮರಳು ದಂಧೆಕೋರರ ಮತ್ತೊಂದು ಅಕ್ರಮದ ರೂಪಕ್ಕಿಳಿದಿದ್ದು,ಇಂತಹ ಅಕ್ರಮಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ. ಬಡಜನರಿಗೆ,ಕಟ್ಟಡ ನಿರ್ಮಾಣದಾರರಿಗೆ ಯೋಗ್ಯದರದಲ್ಲಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

(ವರದಿ: ರಾಚಪ್ಪ ಬನ್ನಿದಿನ್ನಿ)
First published: May 17, 2020, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories