HOME » NEWS » Coronavirus-latest-news » ILLEGAL LIQUOR DESTROYED IN KARAWAR WHICH IS CARRYING FROM GOA GNR

ಕಾರವಾರದಲ್ಲಿ 21 ಲಕ್ಷ ಮೌಲ್ಯದ 6,900 ಲೀಟರ್​ ಅಕ್ರಮ ಮದ್ಯ ನಾಶಪಡಿಸಿದ ಅಧಿಕಾರಿಗಳು

ಇನ್ನು, ತಾಲೂಕು ಆಡಳಿತ ಮತ್ತು ಅಬಕಾರಿ ಅಧಿಕಾರಿಗಳು ಗ್ರಾಮಸ್ಥರ ಸಹಾಯ ಪಡೆದು ಅಕ್ರಮ ಗೋವಾ ಮದ್ಯ ತಡೆಗೆ ಮುಂದಾಗಿದ್ದಾರೆ. ಗೋವಾದಿಂದ ಇಷ್ಟು ಪ್ರಮಾಣದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಸಾಗಾಟವಾಗುವುದು ನೋಡಿದರೇ ದಂಧೆ ಹಿಂದೆ ದೊಡ್ಡವರ ಕೈವಾಡ ಇರುವುದು ಖಾತ್ರಿ ಆಗುತ್ತದೆ.

news18-kannada
Updated:June 10, 2020, 5:16 PM IST
ಕಾರವಾರದಲ್ಲಿ 21 ಲಕ್ಷ ಮೌಲ್ಯದ 6,900 ಲೀಟರ್​ ಅಕ್ರಮ ಮದ್ಯ ನಾಶಪಡಿಸಿದ ಅಧಿಕಾರಿಗಳು
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜೂ.10): ಗೋವಾ ಗಡಿ ಭಾಗದಿಂದ ಅಕ್ರಮವಾಗಿ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಸಾಗಾಟ ನಡೆಯುತ್ತಲೇ ಇರುತ್ತದೆ. ಹೀಗೆ ಆಗ್ಗಾಗ ಕಿಡಿಗೇಡಿಗಳ ಮೇಲೆ ದಾಳಿ ಮಾಡಿ ಅಬಕಾರಿ ಇಲಾಖೆ ಅಧಿಕಾರಿಗಳು ಭಾರೀ ಪ್ರಮಾಣ ಮದ್ಯ ವಶಕ್ಕೆ ಪಡೆದಿದ್ದರು. ಇದೀಗ ಈ 21 ಲಕ್ಷ ಮೌಲ್ಯದ 6,900 ಲೀಟರ್​ನಷ್ಟು ಅಕ್ರಮ​ ಮದ್ಯವನ್ನು ಅಧಿಕಾರಿಗಳು ಇಲ್ಲಿನ ಗಡಿ ಭಾಗದ ಮಾಜಾಳಿಯ ಅರಣ್ಯ ಪ್ರದೇಶದಲ್ಲಿ ನಾಶಪಡಿಸಿದ್ದಾರೆ.

ಹೌದು, ನಾಶಪಡಿಸಿದ ಮದ್ಯದ ಪೈಕಿ ಗೋವಾ ಪೆನ್ನಿ, ಬೀಯರ್, ಭಾರೀ ಪ್ರಮಾಣದ ವಿಸ್ಕಿ ಇತ್ತು. ಇಷ್ಟು ಪ್ರಮಾಣದ ಮದ್ಯವನ್ನು ಕಾಡಿನಲ್ಲೇ ಅಧಿಕಾರಿಗಳು ನಾಶ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ದಾಳಿಯಲ್ಲಿ ವಶಕ್ಕೆ ಪಡೆದ ಇಷ್ಟು ಮದ್ಯವನ್ನು ಹಿರಿಯ ಅಬಕಾರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ನಾಶ ಮಾಡಲಾಗಿದೆ.

ಪ್ರತೀನಿತ್ಯ ಲಾಕ್​​ಡೌನ್ ಸಂದರ್ಭದಲ್ಲಿ ಅರಣ್ಯ ಪ್ರದೇಶದ ಕಳ್ಳ ದಾರಿ ಮೂಲಕ ಅಕ್ರಮವಾಗಿ ಗೋವಾದಿಂದ ರಾಜ್ಯಕ್ಕೆ ಮದ್ಯ ಸಾಗಾಟ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ಮದ್ಯ ವಶಕ್ಕೆ ಪಡೆದರೂ ಸಾಗಾಟ ಮಾತ್ರ ಇನ್ನೂ ನಿಂತಿಲ್ಲ. ಹೀಗಾಗಿ ಅಬಕಾರಿ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಅರಣ್ಯ ಪ್ರದೇಶದಲ್ಲಿ ಗೋವಾದಿಂದ ಮಾಡಲಾಗುತ್ತಿರುವ ಅಕ್ರಮ ಮದ್ಯ ಸಾಗಾಟ ತಡೆಯುವುದು ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಪೆಟ್ರೋಲ್​​​-ಡೀಸೆಲ್​​ ದರದಲ್ಲಿ ಭಾರೀ ಏರಿಕೆ - ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗು

ಇನ್ನು, ತಾಲೂಕು ಆಡಳಿತ ಮತ್ತು ಅಬಕಾರಿ ಅಧಿಕಾರಿಗಳು ಗ್ರಾಮಸ್ಥರ ಸಹಾಯ ಪಡೆದು ಅಕ್ರಮ ಗೋವಾ ಮದ್ಯ ತಡೆಗೆ ಮುಂದಾಗಿದ್ದಾರೆ. ಗೋವಾದಿಂದ ಇಷ್ಟು ಪ್ರಮಾಣದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಸಾಗಾಟವಾಗುವುದು ನೋಡಿದರೇ ದಂಧೆ ಹಿಂದೆ ದೊಡ್ಡವರ ಕೈವಾಡ ಇರುವುದು ಖಾತ್ರಿ ಆಗುತ್ತದೆ.

ಅಬಕಾರಿ ಇಲಾಖೆ  ಅಕ್ರಮ‌ ಮದ್ಯ ಸಗಾಟದ ಬೇರು ಸಮೇತ ಕೀಳಲು ಮುಂದಾಗಬೇಕಿದೆ. ಕೇವಲ ಸಾಗಾಟದಾರರನ್ನ ಮಾತ್ರ ದಸ್ತಗಿರಿ ಮಾಡಿ ಬಿಡೋದರಲ್ಲಿ ಯಾವುದೇ ಅರ್ಥವಿಲ್ಲ. ಇದರ ಜತೆಗೆ ಇದರ‌ ಮೂಲ ಎಲ್ಲಿ ಎನ್ನೋದು ಪತ್ತೆ ಹಚ್ಚಿ ಅಕ್ರಮಕ್ಕೆ ಕಡಿವಾಣ ಹಾಕಬೇಡಿ ಎಂಂಬುದು ಜನರ ಆಗ್ರಹ.
First published: June 10, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories