ಅನಗತ್ಯ ಸುತ್ತಾಡಿದ್ರೆ ಮನೆಗೇ ಬರುತ್ತೆ ನೋಟಿಸ್​; ಮೈಸೂರು ಪೊಲೀಸರಿಂದ ಹೊಸ ಕ್ರಮ

ನಗರದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಸಿಸಿ ಟಿವಿ ದೃಶ್ಯ ಆಧಾರಿಸಿ   ಅನಗತ್ಯ ಸುತ್ತಾಟ ನಡೆಸುವ ಕಾರು ಮಾಲೀಕರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

news18-kannada
Updated:March 31, 2020, 8:26 AM IST
ಅನಗತ್ಯ ಸುತ್ತಾಡಿದ್ರೆ ಮನೆಗೇ ಬರುತ್ತೆ ನೋಟಿಸ್​; ಮೈಸೂರು ಪೊಲೀಸರಿಂದ ಹೊಸ ಕ್ರಮ
ಸಾಂದರ್ಭಿಕ ಚಿತ್ರ
  • Share this:
ಮೈಸೂರು (ಮಾ.31): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ದೇಶಾದ್ಯಂತ ಸೋಮವಾರ 227 ಹೊಸ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 1251ಕ್ಕೆ ಏರಿಕೆ ಆಗಿದೆ. ಕರ್ನಾಟಕದಲ್ಲಿ ಒಟ್ಟು88 ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಲಾಕ್​ಡೌನ್ ಆದೇಶ ಇದ್ದರೂ ಜನರು ಅನಗತ್ಯವಾಗಿ ರಸ್ತೆಯ ಮೇಲೆ ಸುತ್ತಾಟ ನಡೆಸುತ್ತಿದ್ದಾರೆ. ಇದನ್ನು ತಡೆಯುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮೈಸೂರು ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ.

12 ಕೊರೋನಾ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ಈ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಜನರ ಅನಗತ್ಯ ಸಂಚಾರ ನಿಲ್ಲಿಸಲು ಪೊಲೀಸರು ಹೊಸ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಸಿಸಿ ಟಿವಿ ದೃಶ್ಯ ಆಧಾರಿಸಿ   ಅನಗತ್ಯ ಸುತ್ತಾಟ ನಡೆಸುವ ಕಾರು ಮಾಲೀಕರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

ಇದನ್ನೂ ಓದಿ: ಸೋಮವಾರ ಒಂದೇ ದಿನ ಭಾರತದಲ್ಲಿ 227 ಹೊಸ ಕೊರೋನಾ ಪ್ರಕರಣ; 32ಕ್ಕೆ ಏರಿದ ಸಾವಿನ ಸಂಖ್ಯೆಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ನೋಟಿಸ್ ಹೊರಡಿಸುತ್ತಿದ್ದಾರೆ. “ಅನಗತ್ಯವಾಗಿ ನೀವು ಕಾರು ಚಲಾಯಿಸಿದ್ದೀರಿ. ಈ ಮೂಲಕ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ್ದೀರಿ. ನಿಮ್ಮ ವಿರುದ್ಧ ನಾವು ಏಕೆ ಕಾನೂನು ಕ್ರಮ ಕೈಗೊಳ್ಳಬಾರದು? ಇದಕ್ಕೆ 31-03-2020ರ ಒಳಗೆ ಉತ್ತರಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲು ಮಾಡುತ್ತೇವೆ,” ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.  .
First published: March 31, 2020, 8:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading