ರೈತರ ಸಮಸ್ಯೆ ಆಲಿಸದಿದ್ದರೆ ನಾಲ್ಕೈದು ದಿನದಲ್ಲಿ ಜೆಡಿಎಸ್​ನಿಂದ ಉಗ್ರ ಹೋರಾಟ; ಎಚ್​.ಡಿ.ರೇವಣ್ಣ ಎಚ್ಚರಿಕೆ

ಅಬಕಾರಿ ಅಧಿಕಾರಿಗಳೇ ಮದ್ಯದಂಗಡಿ ಕಳ್ಳತನ ಮಾಡಿಸುತ್ತಿದ್ದಾರೆ. ಚನ್ನರಾಯಪಟ್ಟಣ ಅಬಕಾರಿ ಮಹಿಳಾ ಅಧಿಕಾರಿಯೇ ಎಣ್ಣೆ ಮಾರಿಸುತ್ತಿದ್ದಾರಂತೆ. ಹೊಳೆನರಸೀಪುರದಲ್ಲೂ ಇದೇ ಪರಿಸ್ಥಿತಿ. ಇವರ ಬಗ್ಗೆ ಅಬಕಾರಿ ಡಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ

ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ

  • Share this:
    ಹಾಸನ: ಸಿಎಂ ನಿಧಿಗೆ ಸಾರ್ವಜನಿಕರಿಂದ ಬಂದಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಎಚ್​.ಡಿ.ರೇವಣ್ಣ ಸವಾಲು ಹಾಕಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ರೀತಿ ರೈತರ ಸಮಸ್ಯೆ ಆಲಿಸಲಿದ್ದರೆ ಜೆಡಿಎಸ್ ನಿಂದ ಉಗ್ರ ಹೋರಾಟ ಮಾಡಲಾಗುವುದು. ಇನ್ನೂ ನಾಲ್ಕೈದು ದಿನ ನೋಡಿದ ಬಳಿಕ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಸಿದ್ದರಾಮಯ್ಯರಿಗೂ ನಾನೇ ಫೋನ್ ಮಾಡುತ್ತೇನೆ. ಎಚ್.ಡಿ.ಕುಮಾರಸ್ವಾಮಿ ಮತ್ತು ಬೇರೆ ವಿಪಕ್ಷದವರನ್ನು ಕರೆಸಿ ಮಾತನಾಡಿ ಹೋರಾಟ ಮಾಡಿ. ವಿಪಕ್ಷ ನಾಯಕರಾದ ಸಿದ್ದರಾಮಯ್ಯರವರೇ ಎಲ್ಲಾ ವಿಪಕ್ಷದವರನ್ನು ಕರೆದು ಸಭೆ ಮಾಡಿ, ಹೋರಾಟ ಮಾಡೋಣ. ರೈತರ ಸಮಸ್ಯೆ ಆಲಿಸದಿದ್ದರೆ ಸಿಎಂ ವಿರುದ್ದ ಉಗ್ರ ಹೋರಾಟ ಮಾಡೋಣ ಎಂದು ಹೇಳಿದರು.

    ಮುಖ್ಯಮಂತ್ರಿಗಳೇ ವಿಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿವೆ ಎಂದು ಹೇಳಬೇಡಿ,  ಜನರ ಸಮಸ್ಯೆ ಬಗೆಹರಿಸಿ. ಕುಮಾರಸ್ವಾಮಿ ಈ ಹಿಂದೆ ಮಾಡಿದ್ದ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ನೀವು ರೈತರ ಸಮಸ್ಯೆ ಬಗ್ಗೆ ಗಮನಹರಿಸಿ. ಸುಮ್ಮನೆ ಸುಳ್ಳು ಹೇಳಿಕೊಂಡು ಕಾಲ ಕಳೆಯಬೇಡಿ ಎಂದು ಮನವಿ ಮಾಡಿದರು

    ಕೊರೋನಾ ಲಾಕ್ ಡೌನ್ ಆಗಿ 29 ದಿನ ಕಳೆಯಿತು. ನಾನೇ ಖುದ್ದಾಗಿ ಸಿಎಂ ಭೇಟಿಯಾಗಿ ರೈತರ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇನೆ. ನಾನೇ ರೈತರಿಂದ 25 ಟನ್ ತರಕಾರಿಯನ್ನು ಖರೀದಿಸಿ ಜನರಿಗೆ ಹಂಚಿಸಿದ್ದೇನೆ. ಜನರಿಗೆ ಕಡಿಮೆ ದರದಲ್ಲಿ ತರಕಾರಿ ಹಂಚಿಸಿದ್ದೇನೆ.  ಪ್ರತಿದಿನ ನಾನು 10 ಲಕ್ಷ ಮೌಲ್ಯದ ತರಕಾರಿ ಖರೀದಿಸುತ್ತಿದ್ದೇನೆ. ರೈತರ ವಸ್ತುಗಳನ್ನು ಖರೀದಿಸುವವರೇ ಇಲ್ಲಾ. 80 ರೂಪಾಯಿಯ ಅಡುಗೆ ಎಣ್ಣೆಯನ್ನು ಪ್ರತೀ ಲೀಟರ್​ಗೆ 130 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನಾನೇ ಮಂಗಳೂರಿನಿಂದ 5 ಲೋಡ್ ಅಡುಗೆ ಎಣ್ಣೆ ತರಿಸುತ್ತಿದ್ದೇನೆ ಎಂದು ಹೇಳಿದರು.

    ಇದನ್ನು ಓದಿ: ರಾಜ್ಯದಲ್ಲಿ ಇಂದು 18 ಕೊರೋನಾ ಪಾಸಿಟಿವ್​​ ಪ್ರಕರಣ ಪತ್ತೆ: ಸೊಂಕಿತರ ಸಂಖ್ಯೆ 408ಕ್ಕೇರಿಕೆ

    ಅಬಕಾರಿ ಅಧಿಕಾರಿಗಳೇ ಮದ್ಯದಂಗಡಿ ಕಳ್ಳತನ ಮಾಡಿಸುತ್ತಿದ್ದಾರೆ. ಚನ್ನರಾಯಪಟ್ಟಣ ಅಬಕಾರಿ ಮಹಿಳಾ ಅಧಿಕಾರಿಯೇ ಎಣ್ಣೆ ಮಾರಿಸುತ್ತಿದ್ದಾರಂತೆ. ಹೊಳೆನರಸೀಪುರದಲ್ಲೂ ಇದೇ ಪರಿಸ್ಥಿತಿ. ಇವರ ಬಗ್ಗೆ ಅಬಕಾರಿ ಡಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

     
    First published: