ಕೋವಿಡ್ ಹಾಸಿಗೆಗಳ ಕೊರತೆ ನೀಗಿಸದಿದ್ದರೆ ಸಾವಿನ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ..!

ಖಾಸಗಿ  ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ  2097 ಕೋವಿಡ್ ಹಾಸಿಗೆಗಳಿದ್ದು ಈ ಪೈಕಿ 1265 ಹಾಸಿಗೆಗಳು ಭರ್ತಿಯಾಗಿವೆ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಗಳಲ್ಲಿ ಬಾಕಿ ಇರುವುದು ಕೇವಲ 832 ಕೋವಿಡ್  ಹಾಸಿಗೆಗಳು ಮಾತ್ರ.

news18-kannada
Updated:July 18, 2020, 2:29 PM IST
ಕೋವಿಡ್ ಹಾಸಿಗೆಗಳ ಕೊರತೆ ನೀಗಿಸದಿದ್ದರೆ ಸಾವಿನ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ..!
ಸಾಂದರ್ಭಿ ಚಿತ್ರ
  • Share this:
ಬೆಂಗಳೂರು(ಜು.18): ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸಾಕಷ್ಟು ಜನರಿಗೆ ಕೋವಿಡ್ ಹಾಸಿಗೆಗಳ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಶೇಕಡಾ 49 ರಷ್ಟು ಕೋವಿಡ್  ಹಾಸಿಗೆಗಳು ಈಗಾಗಲೇ ಭರ್ತಿಯಾಗಿವೆ. ಪರಿಸ್ಥಿತಿ‌ ದಿನೇ ದಿನೇ ಹದಗೆಡುತ್ತಿರುವ ಸನ್ನಿವೇಶದಲ್ಲಿ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಪೂರೈಸುವುದು ಕ್ಲಿಷ್ಟಕರ ಹಾಗೂ ಸವಾಲೇ ಸರಿ.

ಕೊರೋನಾ ಸೋಂಕಿನ ಪ್ರಕರಣಗಳು ರಾಜಧಾನಿಯಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಈ ರೀತಿಯಾದಂತಹ ಸ್ಫೋಟಕ ಮಾಹಿತಿ ಹೊರ ಬಿದ್ದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯೇ. ಕೊರೋನಾವನ್ನು ಹೇಗೆ ನಿಯಂತ್ರಣಕ್ಕೆ ತರಬೇಕೆನ್ನುವ ಆಲೋಚನೆಗೆ ಬಿದ್ದಿರುವ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗೆ ಈ ಪರಿಸ್ಥಿತಿ ಮತ್ತಷ್ಟು ಸವಾಲುಗಳನ್ನು ತಂದೊಡ್ಡಿದೆ.

ಅಂದಹಾಗೆ ಬೆಂಗಳೂರಿನ ಒಟ್ಟು ಕೋವಿಡ್ ಹಾಸಿಗೆ ಗಳ ಪೈಕಿ ಮೊದಲೇ ಹೇಳಿದ ಹಾಗೆ ಶೇಕಡಾ 49 ರಷ್ಟು ಹಾಸಿಗೆಗಳು ಈಗಾಗಲೇ ಭರ್ತಿಯಾಗಿದೆ. ಒಟ್ಟು 10,878 ಹಾಸಿಗೆಗಳ ಪೈಕಿ 4887  ಹಾಸಿಗೆಗಳು ಭರ್ತಿಯಾಗಿದೆ. ಇವುಗಳಲ್ಲಿ ಬಹುಪಾಲು ತೀವ್ರ ನಿಗಾಘಟಕದ ಹಾಸಿಗೆಗಳು ಎನ್ನುವುದು ವಿಶೇಷ. 10,878 ಹಾಸಿಗೆಗಳಲ್ಲಿ ಈಗಾಗಲೇ 4887 ಹಾಸಿಗೆಗಳು ಭರ್ತಿಯಾಗಿವೆ ಹಾಗಾಗಿ ಉಳಿದಿರುವಂತದ್ದು ಕೇವಲ 5991. ಇದು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಸಂಖ್ಯೆ ಎನ್ನುವುದು ಮತ್ತಷ್ಟು ವಿಶೇಷ.

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಒಟ್ಟು ಕೋವಿಡ್  ಹಾಸಿಗೆಗಳು 853. ಈ ಪೈಕಿ 480 ಹಾಸಿಗೆಗಳು ಭರ್ತಿಯಾಗಿವೆ ಎಂದು ಹೇಳಿದರೆ, ಅರ್ಧಕ್ಕರ್ಧ ಹಾಸಿಗೆಗಳು ಭರ್ತಿಯಾಗಿರುವುದು ಸರ್ಕಾರಿ ಆಸ್ಪತ್ರೆಗಳಲ್ಲಿ. ಇನ್ನೂ ಖಾಲಿ ಇರುವಂಥದು ಕೇವಲ 373  ಕೋವಿಡ್ ಹಾಸಿಗೆಗಳು  ಮಾತ್ರ. ಹಾಗೆಯೇ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಇರುವುದು 769  ಕೋವಿಡ್ ಹಾಸಿಗೆಗಳು. ಈ ಪೈಕಿ 740  ಹಾಸಿಗೆಗಳು ಭರ್ತಿಯಾಗಿದೆ. ಹಾಗಾಗಿ ಕಾಲೇಜುಗಳಲ್ಲಿ ಲಭ್ಯ ಇರುವಂಥದು ಕೇವಲ 29 ಕೋವಿಡ್ ಹಾಸಿಗೆಗಳು.

BBMP Commissioner: ಬಿಬಿಎಂಪಿ ಕಮಿಷನರ್​ ಅನಿಲ್​ ಕುಮಾರ್​ ವರ್ಗಾವಣೆ; ಮಂಜುನಾಥ್ ಪ್ರಸಾದ್ ನೂತನ ಆಯುಕ್ತ

ಇನ್ನು, ಖಾಸಗಿ ಆಸ್ಪತ್ರೆಗಳ ವಿಷಯಕ್ಕೆ ಬರುವುದಾದರೆ ಅಲ್ಲಿ ಇರುವುದು 5045 ಹಾಸಿಗೆಗಳು. ಈ ಪೈಕಿ 527  ಹಾಸಿಗೆಗಳು ಭರ್ತಿಯಾಗಿದೆ. ಹಾಗಾಗಿ ಉಳಿದಿರುವಂತದ್ದು 4518. ಅಂದರೆ ಅತಿ ಹೆಚ್ಚಿನ ಹಾಸಿಗೆಗಳು ಲಭ್ಯ ಇರುವುದು ಖಾಸಗಿ ಆಸ್ಪತ್ರೆಗಳಲ್ಲಿ ಎನ್ನುವಂತಾಯಿತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ 5045 ಕೋವಿಡ್  ಹಾಸಿಗೆಗಳ ಪೈಕಿ ಹಾಲಿ ಲಭ್ಯ ಇರುವಂತದ್ದು 4518. ಹಾಗಾಗಿ ಕೊರೋನಾ ಸೋಂಕಿತರಿಗೆ  ಆಶಾಕಿರಣವಾಗಿ ಖಾಸಗಿ ಆಸ್ಪತ್ರೆಗಳು ಪರಿಣಮಿಸಿದೆ.

ಇನ್ನು ಖಾಸಗಿ  ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ  2097 ಕೋವಿಡ್ ಹಾಸಿಗೆಗಳಿದ್ದು ಈ ಪೈಕಿ 1265 ಹಾಸಿಗೆಗಳು ಭರ್ತಿಯಾಗಿವೆ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಗಳಲ್ಲಿ ಬಾಕಿ ಇರುವುದು ಕೇವಲ 832 ಕೋವಿಡ್  ಹಾಸಿಗೆಗಳು ಮಾತ್ರ. ಕೊರೋನಾ ಕೇರ್ ಕೇಂದ್ರಗಳಲ್ಲಿ 2114  ಹಾಸಿಗೆಗಳ ಪೈಕಿ ಒಂದು ಸಾವಿರದ ಎಂಟುನೂರ ಎಪ್ಪತ್ತೈದು 1875  ಹಾಸಿಗೆಗಳು ಭರ್ತಿಯಾಗಿದೆ. ಉಳಿದಿರುವುದು ಕೇವಲ 239 ಹಾಸಿಗೆಗಳು. ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅವಶ್ಯಕತೆಯನ್ನು ಈ ಅಂಕಿಸಂಖ್ಯೆಗಳು ಒತ್ತಿ  ಹೇಳುತ್ತವೆ.

ಕೊರೋನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿರುವುದು ನಿಜಕ್ಕೂ ಆತಂಕಕಾರಿ. ಇಂಥಾ  ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಕೋವಿಡ್  ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಹಾಸಿಗೆಗಳು ಲಭ್ಯವಿಲ್ಲದೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನವನ್ನು ಮಾಡಲೇಬೇಕಿದೆ. ಇದು ಅನಿವಾರ್ಯ ದಷ್ಟೇ, ಅಗತ್ಯ ಕೂಡ.
Published by: Latha CG
First published: July 18, 2020, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading