Corona: ಮುಂಬೈನಿಂದ ಮತ್ತೆ ಯಾದಗಿರಿಗೆ ಕೊರೋನಾ ಕಂಟಕವಾಗುತ್ತಾ...?

ಸೋಮವಾರ ಮುಂಬೈನಿಂದ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ 60 ಕ್ಕೂ ಹೆಚ್ಚು ಪ್ರಯಾಣಿಕರು ರೈಲ್ವೆ ಗಾಡಿ ಮೂಲಕ ಆಗಮಿಸಿದರು,. ಆದರೆ, ಅದರಲ್ಲಿ ಕೇವಲ 12 ಜನರಿಗೆ ಮಾತ್ರ ಟೆಸ್ಟ್ ಮಾಡಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಯಾದಗಿರಿ(ಫೆ.23): ಕೊರೋನಾ ಆರಂಭದಲ್ಲಿ ಮುಂಬೈ ವಲಸಿಗರಿಂದ ಜಿಲ್ಲೆಗೆ ಕೊರೊನಾ ಕಂಟಕವಾಗಿತ್ತು. ಮಹಾರಾಷ್ಟ್ರದಿಂದ ಜಿಲ್ಲೆಗೆ ವಲಸೆ ಬಂದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತವೆಂದು ಜನ ನೆಮ್ಮದಿಯಾಗಿದ್ದರು. ಆದರೆ, ಈಗ ಮತ್ತೆ ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಜನರು ‌ಈಗ ಆತಂಕಗೊಂಡಿದ್ದಾರೆ. ಮಹಾರಾಷ್ಟ್ರದಿಂದ ರೈಲ್ವೆ ಹಾಗೂ ‌ಬಸ್ ಗಳಲ್ಲಿ ನಿತ್ಯವೂ ಪ್ರಯಾಣಿಕರು ಯಾದಗಿರಿ ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಈಗಾಗಲೇ ಸರಕಾರ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕೊವೀಡ್ ‌ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬಂದ್ರೆ ಜಿಲ್ಲೆಗೆ ಪ್ರವೇಶ ಮಾಡಿಕೊಳ್ಳಲು ಸರಕಾರ ಸೂಚನೆ ನೀಡಿದೆ. ಆದರೆ, ಯಾದಗಿರಿಯಲ್ಲಿ ಕೊರೊನಾಗೆ ಡೋಂಟ್ ಕೇರ್ ಎನ್ನುವಂತಾಗಿದೆ. ಮುಂಬೈನಿಂದ ಯಾದಗಿರಿ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಯಾವುದೇ ಕೊವೀಡ್ ನೆಗೆಟಿವ್ ವರದಿ ತೆಗೆದುಕೊಂಡು ಬರುತ್ತಿಲ್ಲ. ಇದರಿಂದ ಈಗ ಜನ ಆತಂಕ ಪಡುವಂತಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಅಲಕ್ಷ್ಯ...!

ಯಾದಗಿರಿ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು ಮಹಾರಾಷ್ಟ್ರದಿಂದ ವಲಸೆ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟು ಕೊವೀಡ್ ನೆಗೆಟಿವ್ ರಿಪೋರ್ಟ್ ಪರಿಶೀಲನೆ ಮಾಡಬೇಕು ಅದೆ ರೀತಿ ಟೆಸ್ಟ್ ಮಾಡಿಸಿಕೊಳ್ಳದೆ ಹಾಗೆ ರೈಲ್ವೆ ನಿಲ್ದಾಣಕ್ಕೆ ಬಂದ್ರೆ ಅವರನ್ನು ತಪಾಸಣೆ ಮಾಡಿ ಕೊವೀಡ್ ಟೆಸ್ಟ್ ಮಾಡಿಸಬೇಕು ಆದರೆ,ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗುತ್ತಿದೆ.

Mangalore: ಕೊರೋನಾ ಹಿನ್ನೆಲೆ ಮಂಗಳೂರು- ಕೇರಳ ಗಡಿ ಬಂದ್; ಜನರ ಆಕ್ರೋಶ

ಕಾಟಾಚಾರಕ್ಕೆ ಟೆಸ್ಟ್ ...!

ಆರೋಗ್ಯ ಇಲಾಖೆ ಸಿಬ್ಬಂದಿಗಳು ರೈಲ್ವೆ ನಿಲ್ದಾಣದಲ್ಲಿ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರೆಲ್ಲನ್ನೂ ಕೊವೀಡ್ ಟೆಸ್ಟ್ ‌ಮಾಡಿಸಬೇಕು. ಆದರೆ, ಕೇವಲ ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಕೊವೀಡ್ ಟೆಸ್ಟ್ ಮಾಡಲಾಗುತ್ತಿದೆ. ಸಿಬ್ಬಂದಿಗಳ ಕೊರತೆ ನಡುವೆ ಹಾಗೂ ಪ್ರಯಾಣಿಕರ ನಿರಾಶಕ್ತಿಯಿಂದ ಟೆಸ್ಟ್ ಮಾಡುವ ಸಂಖ್ಯೆ ಕಡಿಮೆಯಾಗಿದೆ‌. ಸೋಮವಾರ ಮುಂಬೈನಿಂದ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ 60 ಕ್ಕೂ ಹೆಚ್ಚು ಪ್ರಯಾಣಿಕರು ರೈಲ್ವೆ ಗಾಡಿ ಮೂಲಕ ಆಗಮಿಸಿದರು,. ಆದರೆ, ಅದರಲ್ಲಿ ಕೇವಲ 12 ಜನರಿಗೆ ಮಾತ್ರ ಟೆಸ್ಟ್ ಮಾಡಲಾಗಿದೆ.

ಕೋವಿಡ್ ಭಯಕ್ಕೆ ಪ್ರಯಾಣಿಕರು ಕೂಡ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೆ ರೀತಿ ನಿರ್ಲಕ್ಷ್ಯ ತೋರಿದ್ರೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಕೊರೊನಾ ಕಂಟಕವಾಗಲಿದೆ.ಯಾವುದೇ ಟೆಸ್ಟ್ ಮಾಡಿಸಿಕೊಳ್ಳದೆ ಜಿಲ್ಲೆಯ ವಿವಿಧೆಡೆ ಕೊರೊನಾ ರೋಗ ಇದ್ದವರು ಜನರ ಜೊತೆ ಸಂಪರ್ಕ ಸಾಧಿಸಿದರೆ ಮತ್ತೆ ಜಿಲ್ಲೆಗೆ ಮಹಾಕಂಟಕವಾಗಲಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಮಾತನಾಡಿ, ನಾನು ರೈಲ್ವೆ ‌ನಿಲ್ದಾಣದಲ್ಲಿ ಪ್ರಯಾಣಿಕರಿಗೆ  ಕೊವೀಡ್ ಟೆಸ್ಟ್ ಮಾಡಲು ಮುಂದಾದರೆ ಯಾರು ಸಹಕಾರ ಕೊಡುತ್ತಿಲ್ಲ.ನಮಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕೊವೀಡ್ ನೆಗೆಟಿವ್ ಇಲ್ಲದೇ ಪ್ರಯಾಣಿಕರು ಬರುತ್ತಿದ್ದಾರೆ ಎಂದರು.

ರೈಲ್ವೆ ನಿಲ್ದಾಣದಲ್ಲಿ ವ್ಯಾಪಕ ಕಟ್ಟೆಚ್ಚೆರ ವಹಿಸಬೇಕು ಆದರೆ, ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ.ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಮಾಸ್ಕ್ ಹಾಕದೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.ಇದರಿಂದ ಪ್ರಕರಣಗಳು ಹೆಚ್ಚಾಗುವ ಆತಂಕ ಎದುರಾಗಿದೆ.ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ಮಾತನಾಡಿ, ಮಹಾರಾಷ್ಟ್ರದಿಂದ ಬರುವರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಅವರನ್ನು ಕೊವೀಡ್ ಟೆಸ್ಟ್ ಮಾಡಿಸಲಾಗುತ್ತದೆ.ಜಿಲ್ಲೆಯ ಜನರು ‌ಕೂಡ ಕೊವೀಡ್ ನಿಯಮ ಪಾಲಿಸಬೇಕೆಂದರು.
Published by:Latha CG
First published: