• ಹೋಂ
 • »
 • ನ್ಯೂಸ್
 • »
 • Corona
 • »
 • ಅಮೇರಿಕಾದಲ್ಲಿ ಐಸಿಯು ಹಾಸಿಗೆ ಬಿಕ್ಕಟ್ಟು: ಆಸ್ಟಿನ್​ ನಗರದ 24 ಲಕ್ಷ ಜನರಿಗೆ ಖಾಲಿ ಇರುವುದು 6 ಬೆಡ್​ಗಳು ಮಾತ್ರ!!

ಅಮೇರಿಕಾದಲ್ಲಿ ಐಸಿಯು ಹಾಸಿಗೆ ಬಿಕ್ಕಟ್ಟು: ಆಸ್ಟಿನ್​ ನಗರದ 24 ಲಕ್ಷ ಜನರಿಗೆ ಖಾಲಿ ಇರುವುದು 6 ಬೆಡ್​ಗಳು ಮಾತ್ರ!!

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

ಯುಎಸ್​ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅಮೇರಿಕಾದ ಆಸ್ಟಿನ್ ನಗರವು  24 ಲಕ್ಷ ಜನಸಂಖ್ಯೆಯನ್ನು ಹೊಂದಿದೆ, ಆದರೆ ಈ ನಗರದ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಕೇವಲ ಆರು ಹಾಸಿಗೆಗಳು ಮಾತ್ರ ಖಾಲಿ ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ  ಬಿಡುಗಡೆ ಮಾಡಿದ ಮಾಹಿತಿ ಹೇಳುತ್ತಿದೆ.

ಮುಂದೆ ಓದಿ ...
 • Share this:

  SARS-CoV-2 ನ ಡೆಲ್ಟಾ ರೂಪಾಂತರ ವೈರಾಣು ಪ್ರಭಾವದಿಂದ US ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಭಾರೀ ಏರಿಕೆ ಕಂಡಿದೆ, ಅಮೇರಿಕನ್ ನಗರ ಆಸ್ಟಿನ್​ನಲ್ಲಿ ಸೋಮವಾರದ ಹೊತ್ತಿಗೆ ಎಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕ (ICU)ಗಳನ್ನು ಜಾಲಾಡಿದರೂ ಕೇವಲ ಆರು ಹಾಸಿಗೆಗಳು ಮಾತ್ರ ಖಾಲಿ ಇದ್ದವು ಎಂದು ವರದಿಯಾಗಿದೆ. ಟೆಕ್ಸಾಸ್ ಮಹಾನಗರದ ಹತ್ತಿರವಿರುವ ಆಸ್ಟಿನ್ ಸುಮಾರು 24 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
  ರಾಜ್ಯ ಆರೋಗ್ಯ ಇಲಾಖೆಯಿಂದ ಬಿಡುಗಡೆಯಾದ ದತ್ತಾಂಶದ ಪ್ರಕಾರ, ಆಸ್ಟಿನ್ ನಲ್ಲಿ ಉಂಟಾಗಿರುವ ಐಸಿಯು ಹಾಸಿಗೆಯ ಬಿಕ್ಕಟ್ಟು ಡೆಲ್ಟಾ ರೂಪಾಂತರದಿಂದ ಈ ಮಟ್ಟಕ್ಕೆ ಏರಿಕೆಯಾಗಿದೆ. ಕೋವಿಡ್ -19 ಪ್ರಕರಣಗಳ ತೀವ್ರ ಏರಿಕೆಯಿಂದ ಪ್ರಚೋದಿಸಲ್ಪಟ್ಟಿದೆ. ಕಳೆದ ವರ್ಷ ಭಾರತದಲ್ಲಿ ಡೆಲ್ಟಾ ರೂಪಾಂತರಿ ವೈರಾಣು ಹರಡಿರುವುದು ಮೊದಲು ಕಂಡುಹಿಡಿಯಲಾಯಿತು.


  ಆಸ್ಟಿನ್ ನಲ್ಲಿನ ಪರಿಸ್ಥಿತಿ "ಕ್ರಿಟಿಕಲ್​" ಹಂತ ತಲುಪಿದೆ ಏಕೆಂದರೆ ಕೇವಲ 313 ವೆಂಟಿಲೇಟರ್‌ಗಳು ಮತ್ತು ಆರು ಐಸಿಯು ಹಾಸಿಗೆಗಳು ನಗರದಲ್ಲಿ ಲಭ್ಯವಿದ್ದು, ಇದು 2.4 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರಕ್ಕೆ ಸಾಕಾಗುವುದೇ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.


  "ಪರಿಸ್ಥಿತಿ ಚಿಂತಾಜನಕವಾಗಿದೆ" ಎಂದು ರಾಜ್ಯದ ಆರೋಗ್ಯ ಪ್ರಾಧಿಕಾರದ ಆಸ್ಟಿನ್ ವೈದ್ಯಕೀಯ ನಿರ್ದೇಶಕರಾದ ಡಾ. ಡೆಸ್ಮಾರ್ ವಾಕ್ಸ್  ಹೇಳಿದ್ದಾರೆ ಎಂದು ವರದಿ ಮಾಡಲಾಗಿದೆ.


  ಆಸ್ಟಿನ್ ನಲ್ಲಿನ ಆರೋಗ್ಯ ಇಲಾಖೆಯು "ತುರ್ತು ಪರಿಸ್ಥಿತಿಯ" ಎಚ್ಚರಿಕೆಯನ್ನು ಕಳುಹಿಸಿದೆ. ಈ ಅಧಿಸೂಚನೆಗಳನ್ನು ನಗರದ ನಿವಾಸಿಗಳಿಗೆ ಇಮೇಲ್‌ಗಳು, ಪಠ್ಯ ಸಂದೇಶಗಳು ಮತ್ತು ಫೋನ್ ಕರೆಗಳ ಮೂಲಕ ಕಳುಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.


  ಬ್ಲೂಮ್‌ಬರ್ಗ್ ವರದಿಯ ಪ್ರಕಾರ, "ನಮ್ಮ ಆಸ್ಪತ್ರೆಗಳು ತೀವ್ರವಾಗಿ ಒತ್ತಡಕ್ಕೀಡಾಗಿವೆ ಮತ್ತು ಹೆಚ್ಚುತ್ತಿರುವ ಪ್ರಕರಣಗಳಿಂದ ಹೊರೆಯನ್ನು ಕಡಿಮೆ ಮಾಡಲು ನಾವು ಒಂದಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದೇವೆ" ಎಂದು ಡಾ.ವಾಲ್ಕ್ನೀಸ್​ ಹೇಳಿದ್ದಾರೆ.


  ಟೆಕ್ಸಾಸ್‌ನಲ್ಲಿ ಕೋವಿಡ್ -19 ರ ರೂಪಾಂತರ ವೈರಸ್ಸಿನ ಪ್ರಭಾವದಿಂದ ನಗರದ ಕೆಲವು ಪ್ರದೇಶಗಳಲ್ಲಿ  ಆರೋಗ್ಯ ವ್ಯವಸ್ಸತೆಯೂ ಹಿಂದೆಂದೂ ಕಾಣದಂತಹ ಇಕ್ಕಟ್ಟಿನ ಪರಿಸ್ಥಿತಿಗೆ ತಲುಪಿದೆ, ಏಕೆಂದರೆ ತೀವ್ರ ನಿಗಾ ಘಟಕದ ಹಾಸಿಗೆಗಳು ತುಂಬಿ ಹೋಗಿವೆ.


  "ನಾವು ಸಮಯ ಮೀರುತ್ತಿದ್ದೇವೆ ಮತ್ತು ನಮ್ಮ ಸಮುದಾಯವು ಈಗ ಈ ಗಂಡಾಂತರದ ವಿರುದ್ದ ತೀವ್ರವಾಗಿ ಕಾರ್ಯನಿರ್ವಹಿಸಬೇಕು" ಎಂದು ಡಾ ವಾಕ್ಸ್ ಹೇಳಿದ್ದಾರೆ.


  ಕಳೆದ ವಾರ, ಆಸ್ಟಿನ್ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮೂರು ಆಸ್ಪತ್ರೆ ವ್ಯವಸ್ಥೆಗಳಾದ ಅಸೆನ್ಶನ್ ಸೆಟಾನ್, ಬೇಲರ್ ಸ್ಕಾಟ್ ಅಂಡ್​ ವೈಟ್ ಮತ್ತು ಸೇಂಟ್ ಡೇವಿಡ್ಸ್ ಹೆಲ್ತ್‌ಕೇರ್ - ಇತ್ತೀಚಿನ ಕೋವಿಡ್ -19 ಸಂದರ್ಭ "ಆಸ್ಪತ್ರೆಯ ಸಿಬ್ಬಂದಿಗೆ ಸವಾಲು ಹಾಕಿದೆ" ಎಂದು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದವು. ಇದಾದ ಒಂದು ವಾರದ ನಂತರ ಪರಿಸ್ಥಿತಿ ತೀರ ಹದಗೆಟ್ಟು ಹೋಗಿದೆ.


  ಇತ್ತೀಚಿನ ಕೋವಿಡ್ -19 ಪರಿಸ್ಥಿತಿ "ನಮ್ಮ ಆಸ್ಪತ್ರೆಗಳು, ತುರ್ತು ವಿಭಾಗಗಳು ಮತ್ತು ಆರೋಗ್ಯ ವೃತ್ತಿಪರ ಶುಶ್ರೂಷಕರ ಮೇಲೆ ಅಸಾಧಾರಣ ಒತ್ತಡವನ್ನು ಬೀರುತ್ತಿದೆ, ಮತ್ತು ಇದು ದೀರ್ಘಾವಧಿಯ ಶುಶ್ರೂಷಾ ಕೊರತೆಯಿಂದಾಗಿ ಆಸ್ಪತ್ರೆಯ ಸಿಬ್ಬಂದಿಗೆ ಮತ್ತಷ್ಟು ಸವಾಲನ್ನು ತಂದೊಡ್ಡಿದೆ" ಎಂದು ಹೇಳಿಕೆಯಲ್ಲಿ ಹೇಳಲಾಗಿತ್ತು, ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.


  ಟೆಕ್ಸಾಸ್‌ನ ಮತ್ತೊಂದು ನಗರವಾದ ಸ್ಯಾನ್ ಆಂಟೋನಿಯೊ, ಕೊರೊನಾವೈರಸ್ ರೋಗಿಗಳ ಹೆಚ್ಚಳದಿಂದ ಬಳಲಿ ಬೆಂಡಾಗಿ ಹೋಗಿದೆ. ಅಲ್ಲದೆ ಸೂಕ್ತ ಶುಶ್ರೂಷೆಯ ಕೊರತೆಯನ್ನು ಎದುರಿಸುತ್ತಿದೆ. ಸ್ಯಾನ್ ಆಂಟೋನಿಯೊದಲ್ಲಿ, ಕೋವಿಡ್ -19 ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯು ಜುಲೈ ಆರಂಭದಿಂದ 430 ಪ್ರತಿಶತದಷ್ಟು ಹೆಚ್ಚಾಗಿದೆ.


  "ನಾವು ನಮ್ಮ ಆಸ್ಪತ್ರೆಯ ಕಾರಿಡಾರ್​ನಲ್ಲಿ ರೋಗಿಗಳನ್ನು ನೋಡುತ್ತಿದ್ದೇವೆ; ಆಸ್ಪತ್ರೆಯ ಹಜಾರದಲ್ಲಿ ರೋಗಿಗಳನ್ನು ನೋಡುತ್ತಿದ್ದೇವೆ" ಎಂದು ಸ್ಯಾನ್ ಆಂಟೋನಿಯೊದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಯೂನಿವರ್ಸಿಟಿ ಹೆಲ್ತ್‌ನ ಮುಖ್ಯ ನರ್ಸ್ ಎಕ್ಸಿಕ್ಯುಟಿವ್ ಟಾಮಿ ಆಸ್ಟಿನ್ ಭಾವುಕರಾಗಿ ಹೇಳಿದರು.


  "ಈ ಆಸ್ಪತ್ರೆಯ ಮೂಲೆ ಮೂಲೆಗೂ ಒಬ್ಬ ರೋಗಿಯಿದ್ದಾನೆ" ಎಂದು ಟಾಮಿ ಆಸ್ಟಿನ್ ಹೇಳಿದರು.


  ಭಾನುವಾರ, ಕೋವಿಡ್ -19 ಸೋಂಕಿತರು ಟೆಕ್ಸಾಸ್ ಆಸ್ಪತ್ರೆಗಳಲ್ಲಿ 6,594 ಜನರಿದ್ದರು. ಫೆಬ್ರವರಿ 24 ರ ನಂತರ ಇದು ಆಸ್ಪತ್ರೆಯಲ್ಲಿ ದಾಖಲಾದ ಅತಿ ಹೆಚ್ಚು ಕೋವಿಡ್ -19 ರೋಗಿಗಳ ಸಂಖ್ಯೆಯಾಗಿದೆ. ರಾಜ್ಯ ಆರೋಗ್ಯ ಅಧಿಕಾರಿಗಳು ಭಾನುವಾರದಂದು 21 ಕೋವಿಡ್ ಸೋಂಕಿತರ ಸಾವುಗಳನ್ನು ವರದಿ ಮಾಡಿದ್ದಾರೆ.


  ಇದನ್ನೂ ಓದಿ: Viral video: ಮನಬಂದಂತೆ ಥಳಿಸಿ ಕಸ ತಿನ್ನಿಸುವ ತನಕ ಬಿಟ್ಟಿಲ್ಲ ಈ ದುಷ್ಕರ್ಮಿಗಳು..!


  ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ, ಟೆಕ್ಸಾಸ್ ನಗರದಲ್ಲಿ ಕಳೆದ ವರ್ಷ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ 53,248 ಕೋವಿಡ್ -19 ಸಂಬಂಧಿತ ಸಾವುಗಳು ಸಂಭವಿಸಿವೆ, ಇದು ಯುಎಸ್​ನಲ್ಲಿ ಮೂರನೇ ಅತಿ ಕೆಟ್ಟ ರಾಜ್ಯವಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: