ಖಾಲಿ ಕಂಟೇನರ್​ಗಳಲ್ಲಿ ಸುಸಜ್ಜಿತ ಐಸಿಯು, ಬೆಂಗಳೂರಿನಲ್ಲಿ ತಯಾರಾಗಿದೆ ಅತ್ಯದ್ಭುತ ಚಿಕಿತ್ಸಾ ಘಟಕ!

ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ನೀಡಲು ಕಂಟೇನರ್ ಐಸಿಯುಗಳು ರೆಡಿಯಾಗಿವೆ. ಸದ್ಯ 50 ಹಾಸಿಗೆಗಳು ಹೀಗೆ ಸಜ್ಜಾಗಿದ್ದು ಅಗತ್ಯ ಬಿದ್ದರೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇಂಥಾ ಅನೇಕ ಕಂಟೇನರ್ ಐಸಿಯು ಸ್ಥಾಪಿಸುವ ಆಲೋಚನೆ ರಾಜ್ಯ ಸರ್ಕಾರಕ್ಕಿದೆ.

ಕಂಟೇನರ್ ಐಸಿಯು

ಕಂಟೇನರ್ ಐಸಿಯು

  • Share this:
ಬೆಂಗಳೂರು: ಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಬಳಕೆಯಾಗುವ ಕಂಟೇನರ್​ಗಳನ್ನ ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆ ಹಿಂಭಾಗದಲ್ಲಿ ಒಂದು ಸುಸಜ್ಜಿತ ಐಸಿಯು ಆಗಿ ಪರಿವರ್ತಿಸಲಾಗಿದೆ. ಒಂದೊಂದು ಕಂಟೇನರ್​ನಲ್ಲೂ ಆರು ಹಾಸಿಗೆಗಳು, ಅದಕ್ಕೆ ಬೇಕಾಗುವ ಎಲ್ಲಾ ಪರಿಕರಗಳು, ಆಕ್ಸಿಜನ್ ಸಪ್ಲೈ ಹೀಗೆ ಎಲ್ಲವೂ ಸಜ್ಜಾಗಿದೆ. ಒಂದು ಸುಸಜ್ಜಿತ ಐಸಿಯು ಹೇಗಿರುತ್ತೋ ಇದು ಕೂಡ ಅದೇ ರೀತಿ ಇದೆ. ಮೊಟ್ಟಮೊದಲ ಬಾರಿಗೆ ಇಂಥ ನೂತನ ಪ್ರಯತ್ನ ಬೆಂಗಳೂರಿನಲ್ಲಿ ಆಗಿದೆ.

ಕೊರೋನಾದ ಅಬ್ಬರ ಕಡಿಮೆಯಾಯ್ತು ಅಂತಿದ್ದವರಿಗೆ, ಮತ್ತೆ ಶಾಕ್ ನೀಡೋಕೆ ಮಹಾಮಾರಿ ಮುಂದಾಗಿದೆ. ಆದರೆ ಈ ಸಲ ಐಸಿಯುಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಅತ್ಯದ್ಭುತ ತಯಾರಿ ಮಾಡಿಕೊಂಡಿದೆ. ಕೊರೋನಾ ಹೋಗೇ ಬಿಡ್ತು ಅನ್ನೋ ತರದಲ್ಲಿ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಹಿಂದೆಲ್ಲಾ 7-8 ಸಾವಿರ ಕೇಸ್​ಗಳು ಪ್ರತಿದಿನ ಬರುತ್ತಿತ್ತು. ಆದರೆ ಕಳೆದ ಅಕ್ಟೋಬರ್​ನಲ್ಲಿ ಕೇಸ್​ಗಳ ಸಂಖ್ಯೆ ಇಳಿಮುಖ ಕಂಡು 2 ಸಾವಿರಕ್ಕೆ ಬಂದು ನಿಂತಿದೆ. ಹಾಗಂತ ಯಾರೂ ನಿಟ್ಟುಸಿರು ಬಿಡುವಂತಿಲ್ಲ. ಯಾಕೆಂದರೆ ಸೆಕೆಂಡ್​ ವೇವ್ ಯಾವುದೇ ಕ್ಷಣದಲ್ಲಿ ಬಂದು ಅಪ್ಪಳಿಸಬಹುದು. ಈಗಾಗಲೇ ಯೂರೋಪ್ ನಲ್ಲಿ ಸೆಕೆಂಡ್ ವೇವ್ ಸಿಕ್ಕಾಪಟ್ಟೆ ಹೊಡೆತ ನೀಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಎರಡನೇ ಅಲೆ ಅಪ್ಪಳಿಸಬಹುದು ಅಂತ ಆರೋಗ್ಯ ಇಲಾಖೆ ಕೊರೋನಾ ಎದುರಿಸಲು ತಯಾರಿ ಮಾಡಿಕೊಂಡಿದೆ.

ಇದನ್ನು ಓದಿ: ಜೆಪಿ ನಡ್ಡಾ-ಯಡಿಯೂರಪ್ಪ ಭೇಟಿ; 20 ನಿಮಿಷ ಚರ್ಚೆ; ಹೈಕಮಾಂಡ್ ನಿರ್ದೇಶನದ ಮೇರೆಗೆ ಮುಂದಿನ ನಿರ್ಧಾರ ಎಂದ ಸಿಎಂ

ನಾನಾ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಐಸಿಯು ನಿರ್ಮಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಕೆ.ಸಿ.ಜನರಲ್ ಆಸ್ಪತ್ರೆ -  ಹೆಚ್ಚುವರಿ 100 ಐಸಿಯು ಬೆಡ್, ವಿಕ್ಟೋರಿಯಾ ಆಸ್ಪತ್ರೆ - ಹೆಚ್ಚುವರಿ 32 ಐಸಿಯು ಬೆಡ್, ಸಿವಿ ರಾಮನ್ ಆಸ್ಪತ್ರೆ - ಹೆಚ್ಚುವರಿ 30 ಐಸಿಯು ಬೆಡ್,​  ಐಸೋಲೇಷನ್ ಆಸ್ಪತ್ರೆ - ಹೆಚ್ಚುವರಿ 30 ಐಸಿಯು ಬೆಡ್ ಸಿದ್ಧವಾಗಿವೆ.

ಒಟ್ಟಿನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ನೀಡಲು ಕಂಟೇನರ್ ಐಸಿಯುಗಳು ರೆಡಿಯಾಗಿವೆ. ಸದ್ಯ 50 ಹಾಸಿಗೆಗಳು ಹೀಗೆ ಸಜ್ಜಾಗಿದ್ದು ಅಗತ್ಯ ಬಿದ್ದರೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇಂಥಾ ಅನೇಕ ಕಂಟೇನರ್ ಐಸಿಯು ಸ್ಥಾಪಿಸುವ ಆಲೋಚನೆ ರಾಜ್ಯ ಸರ್ಕಾರಕ್ಕಿದೆ.
Published by:HR Ramesh
First published: