ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನದ ಪ್ರಕಾರ ಫ್ರಂಟ್ಲೈನ್ನಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರಲ್ಲಿ ಮರಣ ಪ್ರಮಾಣ ತಪ್ಪಿಸಲು ಕೋವಿಡ್ ವ್ಯಾಕ್ಸಿನೇಷನ್ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದೆ. ಕೋವಿಡ್ ಲಸಿಕೆಗಳನ್ನು ಪಡೆದ 1 ಲಕ್ಷಕ್ಕೂ ಹೆಚ್ಚು ತಮಿಳುನಾಡು ಪೊಲೀಸ್ ಅಧಿಕಾರಿಗಳ ನಡುವೆ ನಡೆಸಿದ ಅಧ್ಯಯನದ ಫಲಿತಾಂಶಗಳು ಗಮನಾರ್ಹವಾಗಿವೆ. 'ಫ್ರಂಟ್ಲೈನ್ ಕೆಲಸಗಾರರಲ್ಲಿ ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಕೋವಿಡ್ 19 ಲಸಿಕೆ ಪರಿಣಾಮಕಾರಿ' ಎಂದು ಐಸಿಎಂಆರ್ ಮಂಗಳವಾರ ಟ್ವೀಟ್ ನಲ್ಲಿ ತಿಳಿಸಿದೆ.
ಅಧ್ಯಯನದ ಪ್ರಕಾರ, ಒಂದೇ ಡೋಸೇಜ್ ಲಸಿಕೆ ಪಡೆದ ರಾಜ್ಯ ಪೊಲೀಸ್ ಅಧಿಕಾರಿಗಳಲ್ಲಿ 82 ಪ್ರತಿಶತ ಪರಿಣಾಮವನ್ನು ತೋರಿದೆ. ಅಲ್ಲದೇ ಎರಡೂ ಡೋಸೇಜ್ ಪಡೆದವರಲ್ಲಿ 95 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಪರಿಣಾಮಕಾರಿಯಾಗಿದೆ.
ರಾಜ್ಯ ಪೊಲೀಸ್ ಇಲಾಖೆ, ಐಸಿಎಂಆರ್- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ನಡೆಸಿದ ಈ ಅಧ್ಯಯನವನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ನಲ್ಲಿ ಪ್ರಕಟಿಸಲಾಗಿದೆ.
ತಮಿಳುನಾಡಿನ 1,17,524 ಪೊಲೀಸ್ ಸಿಬ್ಬಂದಿಯಲ್ಲಿ 32,792 ಒಂದು ಡೋಸ್ ಪಡೆದರೆ, 67,673 ಎರಡು ಡೋಸ್ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ 17,059 ಜನರು 2021ರ ಫೆಬ್ರವರಿ 1 ಮತ್ತು ಮೇ 14 ರ ನಡುವೆ ಯಾವುದೇ ಲಸಿಕೆಯನ್ನು ತೆಗೆದುಕೊಂಡಿಲ್ಲವೆಂದು ಹೇಳಿದೆ.
ಈ ವರ್ಷ ಏಪ್ರಿಲ್ 13 ಮತ್ತು ಮೇ 14 ರ ನಡುವೆ ಸಾವನ್ನಪ್ಪಿದ 31 ಪೊಲೀಸ್ ಸಿಬ್ಬಂದಿ ಪೈಕಿ ನಾಲ್ವರು ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಏಳು ಮಂದಿ ಒಂದು ಡೋಸ್ ಪಡೆದುಕೊಂಡಿದ್ದಾರೆ ಮತ್ತು ಉಳಿದ 20 ಜನರು ಲಸಿಕೆ ತೆಗೆದುಕೊಂಡಿಲ್ಲವೆಂದು ವರದಿ ತಿಳಿಸಿದೆ.
1000 ಪೊಲೀಸರಲ್ಲಿ ಲಸಿಕೆ ಪಡೆಯದವರ, ಒಂದು ಮತ್ತು 2 ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಸಾವಿನ ಪ್ರಮಾಣ 1.17, 0.21 ಮತ್ತು 0.06 ರಷ್ಟಿದೆ. ಒಂದು ಡೋಸ್ ಪಡೆದವರಲ್ಲಿ ಸಾವುಗಳನ್ನು ತಡೆಗಟ್ಟುವಲ್ಲಿ ಲಸಿಕೆಯು ಶೇಕಡಾ 82 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಮತ್ತು ಮತ್ತು ಎರಡನೇ ಡೋಸ್ ಪಡೆದವರಲ್ಲಿ 95 ಪ್ರತಿಶತ ಎಂದು ತಿಳಿಸಿದೆ.
ವೈದ್ಯಕೀಯ ಸಮೂಹದ ಮೇಲೆ ನಡೆಸಿದ ಈ ಅಧ್ಯಯನವು ಇನ್ನಿತರ ಅಂಶಗಳನ್ನು ತಿಳಿಸುತ್ತದೆ. ರಾಜ್ಯದ ಆಸ್ಪತ್ರೆಯಿಂದ 2 ಡೋಸ್ ಲಸಿಕೆಯ ಪರಿಣಾಮಕಾರಿತ್ವವೂ ಆಸ್ಪತ್ರೆಯ ದಾಖಲಾತಿಯನ್ನು ನಿಯಂತ್ರಿಸಿದೆ. ಅಲ್ಲದೇ ಆಮ್ಲಜನಕ ಥೆರಪಿ ಮತ್ತು ಐಸಿಯು ಚಿಕಿತ್ಸೆಯ ಅಗತ್ಯವೂ ಬಿದ್ದಿಲ್ಲ.
ಆದರೂ ಈ ವಿಶ್ಲೇಷಣೆಯೂ ಕೆಲವೊಂದು ಸೀಮಿತತೆಗೆ ಒಳಗಾಗಿದೆ. ವಯಸ್ಸು, ಕೊಮಾರ್ಬಿಡಿಟಿ, ಹಿಂದೆ ಕೋವಿಡ್ 19ಗೆ ತುತ್ತಾಗಿದ್ದು, ಸೇರಿದಂತೆ ಇದೆಲ್ಲ ವಿವರಗಳು ಲಸಿಕೆಯ ಲೆಕ್ಕಚಾರದಲ್ಲಿ ಸ್ವಲ್ಪ ಗೊಂದಲವನ್ನುಂಟು ಮಾಡಿರುವುದನ್ನು ಅಲ್ಲಗಳೆಯುವಂತಿಲ್ಲ.
ಲಸಿಕೆಗಳ ವಿಧಾನಗಳನ್ನು ಲೆಕ್ಕಿಸದೇ, ಮೊದಲು ಲಸಿಕೆ ಹಾಕುವ ಪ್ರಮಾಣವನ್ನು ಹೆಚ್ಚಿಸಬೇಕು. ಆ ಮೂಲಕ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಮರಣ ಪ್ರಮಾಣ ತಗ್ಗಿಸಬೇಕು ಎಂದು ಈ ಅಧ್ಯಯನವು ಒತ್ತಿ ಹೇಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ