Covid-19 test: ಕಳೆದ 24 ಗಂಟೆಯಲ್ಲಿ 2.41 ಲಕ್ಷ ಮಂದಿಗೆ ಕೋವಿಡ್​-19 ಟೆಸ್ಟ್​ - ಐಸಿಎಂಆರ್‌

ಸೋಮವಾರ ಒಂದೇ ದಿನ ಭಾರತದಲ್ಲಿ 22,252 ಜನರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 7 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ಕೊರೋನಾಗೆ 467 ಜನ ಬಲಿಯಾಗಿದ್ದಾರೆ. ಇದರಿಂದ ದೇಶದ ಮೃತರ ಸಂಖ್ಯೆಯೂ 20,160ಕ್ಕೆ ಏರಿಕೆಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಜು.07): ಭಾರತದಲ್ಲಿ ಮಾರಕ ಕೊರೋನಾ ವೈರಸ್​​ ಪಾಸಿಟಿವ್​ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಿರುವಾಗಲೇ ಸೋಮವಾರ ಒಂದೇ ದಿನ ದೇಶಾದ್ಯಂತ 2,41,430 ಮಂದಿಗೆ ಕೋವಿಡ್​​-19 ಪರೀಕ್ಷೆ ಮಾಡಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಹೇಳಿದೆ.

  ದೇಶದಲ್ಲಿ ಇದುವರೆಗೂ ಒಟ್ಟು 1,02,11,092 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿಲಾಗಿದೆ. ಕೇವಲ ಕಳೆದ 24 ಗಂಟೆಯಲ್ಲಿ ಮಾತ್ರ 2,41,430 ಮಂದಿಗೆ ಕೋವಿಡ್​-19 ಟೆಸ್ಟ್​ ಮಾಡಲಾಗಿದೆ. ಈ ಮೂಲದ ಇದುವರೆಗೂ 136 ಕೋಟಿ ಜನರ ಪೈಕಿ 1 ಕೋಟಿ ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ.

  ಸೋಮವಾರ ಒಂದೇ ದಿನ ಭಾರತದಲ್ಲಿ 22,252 ಜನರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 7 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ಕೊರೋನಾಗೆ 467 ಜನ ಬಲಿಯಾಗಿದ್ದಾರೆ. ಇದರಿಂದ ದೇಶದ ಮೃತರ ಸಂಖ್ಯೆಯೂ 20,160ಕ್ಕೆ ಏರಿಕೆಯಾಗಿದೆ.

  ಇನ್ನು, ಒಟ್ಟು 7,19,665 ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 4,39,948 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಸದ್ಯ 2,59,557 ಮಂದಿಗೆ ಕೋವಿಡ್​-19 ಚಿಕಿತ್ಸೆ ನೀಡಲಾಗುತ್ತಿದೆ.

  ಇದನ್ನೂ ಓದಿ: Coronavirus Updates: ದೇಶದಲ್ಲಿ ಹೆಚ್ಚುತ್ತಿದೆ ಕೊರೋನಾ ವೈರಸ್ ಹಾವಳಿ​; 7 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

  ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರ 5368, ತಮಿಳುನಾಡು 3827, ಕರ್ನಾಟಕ 1843 ಕೇಸ್, ತೆಲಂಗಾಣ 1831 ಸೇರಿದಂತೆ ದೆಹಲಿಯಲ್ಲಿ 1379 ಜನರಿಗೆ ವೈರಸ್ ತಗುಲಿದೆ.
  Published by:Ganesh Nachikethu
  First published: