‘ಕೋವಿಡ್​​-19 ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕಡ್ಡಾಯ‘ - ಐಸಿಎಂಆರ್‌

ಇನ್ನು, ಕಂಟೇನ್​ಮೆಂಟ್​ ವಲಯಗಳಲ್ಲಿ ನಿಯೋಜಿತರಾದ ಪೊಲೀಸ್​, ಪ್ಯಾರಾಮಿಲಿಟರಿ ಸಿಬ್ಬಂದಿಗೂ ಎಚ್​ಸಿಕ್ಯೂ ಬಳಕೆ ಮಾಡಲೇಬೇಕು. ಕೋವಿಡ್​-19ಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕಡ್ಡಾಯ ಎಂದು ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಮೇ.23): ಮಾರಕ ಕೊರೋನಾ ವೈರಸ್​​ಗೆ ಇನ್ನೂ ಯಾವುದೇ ಔಷಧಿ ತಯಾರಾಗಿಲ್ಲ. ಹಾಗಾಗಿ ಸದ್ಯ ಕೊವಿಡ್​-19 ಸೋಂಕಿತರಿಗೆ ಸಾಂಕ್ರಾಮಿಕ ರೋಗ ಮಲೇರಿಯಾ ರೋಗಿಗಳಿಗೆ ನೀಡಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್​​​ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್​ನಿಂದ​ ಸೈಡ್​ ಎಫೆಕ್ಟ್​ಗಳು ತುಂಬ ಆಗುತ್ತಿವೆ ಎಂದು ಕೆಲವರು ಹೇಳುತ್ತಿದ್ದರೂ ಬಳಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿತ್ತು. ಈ ಬೆನ್ನಲ್ಲೀಗ ಐಸಿಎಂಆರ್​​ ಮತ್ತೊಂದು ನಿರ್ದೇಶನ ನೀಡಿದೆ.

  ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್​​ನಿಂದ ಕೊವಿಡ್​-19 ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿರುವ ಹೊತ್ತಲೇ ಐಎಂಸಿಆರ್​​ ಕೇಂದ್ರ ಸರ್ಕಾರಕ್ಕೆ ಮತ್ತೊಂದು ನಿರ್ದೇಶನ ನೀಡಿದೆ. ಕೊರೋನಾ ಪೀಡಿತರಿಗೆ ಮಾತ್ರವಲ್ಲ ರೋಗಿಗಳನ್ನು ಆರೈಕೆ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗೂ ರೋಗ ಲಕ್ಷಣಗಳು ಕಾಣದಿದ್ದರೂ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಬೇಕು ಎಂದು ಆದೇಶಿಸಿದೆ.

  ಇನ್ನು, ಕಂಟೇನ್​ಮೆಂಟ್​ ವಲಯಗಳಲ್ಲಿ ನಿಯೋಜಿತರಾದ ಪೊಲೀಸ್​, ಪ್ಯಾರಾಮಿಲಿಟರಿ ಸಿಬ್ಬಂದಿಗೂ ಎಚ್​ಸಿಕ್ಯೂ ಬಳಕೆ ಮಾಡಲೇಬೇಕು. ಕೋವಿಡ್​-19ಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕಡ್ಡಾಯ ಎಂದು ಹೇಳಿದೆ.

  ಈ ಹಿಂದೆಯೇ ಮಲೇರಿಯಾ ರೋಗಿಗಳಿಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧವನ್ನೇ ಕೊರೋನಾ ಸೋಂಕಿತರ ಚಿಕಿತ್ಸೆಗೂ ನೀಡಬಹುದು ಎಂದು ಸಂಶೋಧಕರು ಉಲ್ಲೇಖಿಸಿದ್ದರು. ಈ ಔಷಧವನ್ನು ಅತಿಹೆಚ್ಚು ಉತ್ಪಾದಿಸುವ ದೇಶವಾಗಿರುವ ಭಾರತದಿಂದ ತಮ್ಮ ದೇಶಕ್ಕೆ ಔಷಧವನ್ನು ರಫ್ತು ಮಾಡಬೇಕೆಂದು ಅಮೆರಿಕ ಸೇರಿದಂತೆ 30 ದೇಶಗಳು ಒತ್ತಡ ಹೇರಿದ್ದರು. ಆ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಕೊರೋನಾ ದಾಳಿಗೆ ಅತಿಹೆಚ್ಚು ನಲುಗಿರುವ ದೇಶಗಳಿಗೆ ಮಾತ್ರ ಹೈಡ್ರಾಕ್ಸಿಕ್ಲೋರೋಕ್ವಿನ್ ಸರಬರಾಜು ಮಾಡುವುದಾಗಿ ತಿಳಿಸಿದೆ.

  ಇದನ್ನೂ ಓದಿ: ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

  ಇಡೀ ವಿಶ್ವವನ್ನೇ ಕಂಗಾಲಾಗಿಸಿರುವ ಕೊರೋನಾಗೆ ಇನ್ನೂ ಯಾವುದೇ ಔಷಧ ಪತ್ತೆಯಾಗಿಲ್ಲ. ವಿಶ್ವಾದ್ಯಂತ ಸುಮಾರು ಲಕ್ಷಾಂತರ ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೂ ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಮಲೇರಿಯಾಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನೇ ಕೊರೋನಾ ವೈರಸ್​ ತಡೆಗಟ್ಟಲು ಬಳಸಬಹುದು ಎಂದು ಸಂಶೋಧಕರು ಹೇಳಿದ್ದರು. ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾಗೆ ರಾಮಬಾಣವಾಗಬಲ್ಲದು ಎಂದು ತಿಳಿದಿದ್ದೇ ತಡ ಈ ಔಷಧಿಯನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ಮಾ. 25ರಂದು ನಿಷೇಧ ಹೇರಿತ್ತು.
  First published: