ರ‍್ಯಾಪಿಡ್ ಪರೀಕ್ಷಾ ಕಿಟ್​ನಲ್ಲಿ ಲೋಪದೋಷ; ಮುಂದಿನ 2 ದಿನ ಈ ಉಪಕರಣ​ ಬಳಸದಂತೆ ರಾಜ್ಯಗಳಿಗೆ ಐಸಿಎಂಆರ್ ಸಲಹೆ

ಮಂಗಳವಾರದವರೆಗೆ ಒಟ್ಟು 4,49,810 ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಸೋಮವಾರದೊಳಗೆ 35,852 ಮಾದರಿಗಳನ್ನು ಪರೀಕ್ಷೆ ಮುಗಿಸಲಾಗಿದೆ. ಐಸಿಎಂಆರ್​ನ 201 ಲ್ಯಾಬ್​ಗಳಲ್ಲಿ 29,776 ಮಾದರಿಗಳು ಹಾಗೂ 86 ಖಾಸಗಿ ಪ್ರಯೋಗಾಲಯಗಳಲ್ಲಿ 6,076 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಗಂಗಾಖೇಡ್ಕರ್ ಮಾಹಿತಿ ನೀಡಿದರು.

news18-kannada
Updated:April 21, 2020, 7:03 PM IST
ರ‍್ಯಾಪಿಡ್ ಪರೀಕ್ಷಾ ಕಿಟ್​ನಲ್ಲಿ ಲೋಪದೋಷ; ಮುಂದಿನ 2 ದಿನ ಈ ಉಪಕರಣ​ ಬಳಸದಂತೆ ರಾಜ್ಯಗಳಿಗೆ ಐಸಿಎಂಆರ್ ಸಲಹೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ರ‍್ಯಾಪಿಡ್​ ಪರೀಕ್ಷಾ ಕಿಟ್​ಗಳ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿರುವ ನಡುವೆ ಮುಂದಿನ ಎರಡು ದಿನಗಳ ಕಾಲ ಈ ರ‍್ಯಾಪಿಡ್ ಪರೀಕ್ಷಾ ಕಿಟ್​ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಾಜ್ಯಗಳಿಗೆ ಮಂಗಳವಾರ ಸಲಹೆ ನೀಡಿದೆ. ಐಸಿಎಂಆರ್​ ತಂಡಗಳು ಈ ಉಪಕರಣಗಳ ಮೌಲ್ಯಮಾಪನ ನಡೆಸಿದ ಬಳಿಕ ಈ ಸಲಹೆ ನೀಡಿದೆ.

ದೇಶದಲ್ಲಿ ಕೊರೋನಾ ವೈರಸ್ ಸ್ಥಿತಿಗತಿ ಬಗ್ಗೆ ಪ್ರತಿದಿನ ಸರ್ಕಾರ ಮಾಹಿತಿ ನೀಡುತ್ತಿದೆ. ಐಸಿಎಂಆರ್​ನ ಡಾ. ರಮಣ್ ಆರ್ ಗಂಗಾಖೇಡ್ಕರ್ ಅವರು ದೋಷಪೂರಿತ ರ್ಯಾಪಿಡ್ ಪರೀಕ್ಷಾ ಕಿಟ್​ಗಳ ಬಗ್ಗೆ ಮಾತನಾಡಿದ್ದಾರೆ.

ರ‍್ಯಾಪಿಡ್ ಪರೀಕ್ಷಾ ಕಿಟ್ ಬಗ್ಗೆ ನೆನ್ನೆ ಒಂದು ರಾಜ್ಯದಿಂದ ದೂರು​ ಬಂದಿದೆ. ಹಾಗೂ ಈವರೆಗೂ ಮೂರು ರಾಜ್ಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ರ‍್ಯಾಪಿಡ್ ಪರೀಕ್ಷಾ ಕಿಟ್  ಮತ್ತು ಆರ್​-ಪಿಸಿಆರ್​ ಕಿಟ್​ ಫಲಿತಾಂಶದಲ್ಲಿ ಸಾಕಷ್ಟು ವ್ಯತ್ಯಾಸವಾಗಿರುವುದು ವರದಿಯಾಗಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಈ ಪರೀಕ್ಷಾ ಕಿಟ್​ಗಳನ್ನು ಬಳಸದಂತೆ ರಾಜ್ಯಗಳಿಗೆ ನಾವು ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಕಿಟ್​ಗಳನ್ನು ಪರೀಕ್ಷೆ ನಡೆಸಬೇಕಾಗಿದೆ ಮತ್ತು ನಮ್ಮ ತಂಡಗಳು ಅವುಗಳ ಮೌಲ್ಯಮಾಪನ ನಡೆಸಲಿದ್ದಾರೆ. ಈ ವಿಷಯದಲ್ಲಿ ಇನ್ನು ಎರಡು ದಿನದಲ್ಲಿ ಅಂತಿಮ ಸಲಹೆ ನೀಡಲಾಗುವುದು. ಒಂದು ವೇಳೆ ಪರೀಕ್ಷಾ ಕಿಟ್​ಗಳಲ್ಲಿ ಲೋಪ-ದೋಷ ಕಂಡುಬಂದಲ್ಲಿ ಅವುಗಳನ್ನು ಬದಲಿಸುವಂತೆ ಕಂಪನಿಗಳಿಗೆ ಹೇಳಲಾಗುದು ಎಂದು ತಿಳಿಸಿದರು.

ಮಂಗಳವಾರದವರೆಗೆ ಒಟ್ಟು 4,49,810 ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಸೋಮವಾರದೊಳಗೆ 35,852 ಮಾದರಿಗಳನ್ನು ಪರೀಕ್ಷೆ ಮುಗಿಸಲಾಗಿದೆ. ಐಸಿಎಂಆರ್​ನ 201 ಲ್ಯಾಬ್​ಗಳಲ್ಲಿ 29,776 ಮಾದರಿಗಳು ಹಾಗೂ 86 ಖಾಸಗಿ ಪ್ರಯೋಗಾಲಯಗಳಲ್ಲಿ 6,076 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಗಂಗಾಖೇಡ್ಕರ್ ಮಾಹಿತಿ ನೀಡಿದರು.

ಇದನ್ನು ಓದಿ: ವಿಶ್ವದಾದ್ಯಂತ 1.7 ಲಕ್ಷ ಜನರನ್ನು ಬಲಿ ಪಡೆದ ಕೊರೋನಾ ಸೋಂಕು; ಯುರೋಪ್​ನಲ್ಲಿ ಹೆಚ್ಚಿನ ಪ್ರಮಾಣದ ಸಾವು

ಭಾರತದಲ್ಲಿ ಈವರೆಗೂ 18,985 ಜನರು ಸೋಂಕಿನಿಂದ ಬಳಲುತ್ತಿದ್ದು, ಒಟ್ಟು 603 ಜನರು ಮೃತಪಟ್ಟಿದ್ದಾರೆ. 3260 ಪ್ರಕರಣಗಳು ಗುಣಮುಖವಾಗಿದ್ದು, 15,122​ ಪ್ರಕರಣಗಳು ಚಿಕಿತ್ಸೆಯಲ್ಲಿವೆ. ಕಳೆದ 24 ಗಂಟೆಯಲ್ಲಿ 1329 ಪ್ರಕರಣಗಳು ವರದಿಯಾಗಿದ್ದು, 44 ಜನರು ಅಸುನೀಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ. 
First published: April 21, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading