news18-kannada Updated:March 27, 2020, 4:12 PM IST
ಪ್ರಾತಿನಿಧಿಕ ಚಿತ್ರ.
ನವದೆಹಲಿ: ಇತ್ತೀಚೆಗೆ ವಿದೇಶ ಪ್ರಯಾಣದಿಂದ ಬಂದು ಹೋಂ ಕ್ವಾರಂಟೈನ್ನಲ್ಲಿದ್ದ ಐಎಎಸ್ ಅಧಿಕಾರಿ ನಿಯಮ ಉಲ್ಲಂಘಿಸಿ ಕೇರಳ ತೊರೆದಿದ್ದ ಐಎಎಸ್ ಅಧಿಕಾರಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
2016ನೇ ಬ್ಯಾಚಿನ ಕೇರಳ ಕೇಡರ್ನ ಐಎಎಸ್ ಅಧಿಕಾರಿಯಾಗಿದ ಅನುಪಮ್ ಮಿಶ್ರಾ ಅವರು ಇತ್ತೀಚೆಗೆ ಸಿಂಗಾಪುರಕ್ಕೆ ಹೋಗಿ ಬಂದಿದ್ದರು. ಆ ಬಳಿಕ ಅವರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಆದರೆ, ಅವರು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ರಾಜ್ಯ ತೊರೆದಿದ್ದರು.
ಅನುಪಮ್ ಮಿಶ್ರಾ ಉತ್ತರ ಪ್ರದೇಶದ ಕಾನ್ಪುರದವರಾಗಿದ್ದು, ಸರ್ಕಾರಕ್ಕೆ ತಿಳಿಸದೆ ತಮ್ಮ ಊರಿಗೆ ಪರಾರಿಯಾಗಿದ್ದರು. ಅವರ ಮೊಬೈಲ್ ಟ್ರೇಸ್ ಮಾಡಿದಾಗ ಅವರು ಕಾನ್ಪುರದಲ್ಲಿರುವುದು ಪತ್ತೆಯಾಯಿತು. ನಿಯಮ ಉಲ್ಲಂಘಿಸಿದ ಐಎಎಸ್ ಅಧಿಕಾರಿ ಅನುಪಮ್ ಮಿಶ್ರಾ ವಿರುದ್ಧ ಕೇರಳ ಪೊಲೀಸರು ದೂರು ದಾಖಲಿಸಿದ್ದಾರೆ.
ಕೇಂದ್ರದಿಂದ ರಾಜ್ಯಗಳಿಗೆ ಪತ್ರ
ಜ. 18ರಿಂದೀಚೆಗೆ ವಿದೇಶದಿಂದ ಬಂದ ಎಲ್ಲಾ ಮಾಹಿತಿ ಕಲೆ ಹಾಕಿ. ಎಲ್ಲಿಂದ? ಯಾವಾಗ? ಬಂದರು ಎಂಬ ಮಾಹಿತಿ ಕಲೆ ಹಾಕಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಇದನ್ನು ಓದಿ: ಮೂರು ತಿಂಗಳು ಯಾವುದೇ ಇಎಂಐ ಕಟ್ಟಬೇಕಿಲ್ಲ; ಬ್ಯಾಂಕ್ ವ್ಯವಹಾರದ ಕುರಿತ ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ!
ಸದ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಳಿ ಇರುವ ಮಾಹಿತಿಯಲ್ಲಿ ಸಾಮ್ಯತೆ ಇಲ್ಲದಿರುವುದರಿಂದ ಕೇಂದ್ರದ ಕ್ಯಾಬಿನೆಟ್ ಸೆಕ್ರೆಟರಿಯಾದ ರಾಜೀವ್ ಗೌಬ ಅವರು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.
First published:
March 27, 2020, 4:11 PM IST