• Home
  • »
  • News
  • »
  • coronavirus-latest-news
  • »
  • Sonu Sood: ಸೋನು ಸೂದ್ ಹೆಸರಿನಲ್ಲಿ ಮಟನ್‌ ಶಾಪ್‌ ಓಪನ್‌: ಸಖತ್​ ಹ್ಯೂಮರಸ್​ ಆಗಿ ಪ್ರತಿಕ್ರಿಯಿಸಿದ ಬಾಲಿವುಡ್‌ ನಟ

Sonu Sood: ಸೋನು ಸೂದ್ ಹೆಸರಿನಲ್ಲಿ ಮಟನ್‌ ಶಾಪ್‌ ಓಪನ್‌: ಸಖತ್​ ಹ್ಯೂಮರಸ್​ ಆಗಿ ಪ್ರತಿಕ್ರಿಯಿಸಿದ ಬಾಲಿವುಡ್‌ ನಟ

ನಟ ಸೋನು ಸೂದ್​

ನಟ ಸೋನು ಸೂದ್​

ತೆಲಂಗಾಣದಲ್ಲಿ ಮಟನ್‌ ಶಾಪ್‌ವೊಂದಕ್ಕೆ ಸೋನು ಸೂದ್‌ ಅವರ ಹೆಸರನ್ನು ಮಟನ್‌ ಶಾಪ್‌ವೊಂದಕ್ಕೆ ಇಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ನಟ ಸೋನು ಸೂದ್‌ ಟ್ವೀಟ್‌ ಮೂಲಕ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  • Share this:

ಬಾಲಿವುಡ್ ನಟ ಸೋನು ಸೂದ್  (Sonu Sood) ಕೊರೋನಾದಿಂದಾಗಿ ಎದುರಾಗಿರುವ ಸಂಕಷ್ಟದ ಕಾಲದಲ್ಲಿ ದೇಶದ ಜನತೆಯ ಪಾಲಿನ ಹೀರೋ ಆಗಿದ್ದಾರೆ. ಕಳೆದ ವರ್ಷ ಕೊರೋನಾ ಲಾಕ್‌ಡೌನ್‌  (Lockdown) ಆರಂಭವಾದಾಗಲಿಂದ ಅನೇಕ ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈ ಬಾರಿಯೂ ಕೂಡ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಲೇ ಇದ್ದಾರೆ. ಈ ಹಿನ್ನೆಲೆ ಜನ ಸಾಮಾನ್ಯರು ಸೋನು ಸೂದ್​ ಅವರನ್ನು ನಿಜವಾದ ದೇವರು, ಹೀರೋ ಎಂದೆಲ್ಲ ಕೊಂಡಾಡುತ್ತಿದ್ದಾರೆ.  ಕಳೆದ ಬಾರಿ ಲಾಕ್​ಡೌನ್​ ವೇಳೆ ಸೋನು ಸೂದ್​ ಅವರ ಸಹಾಯದಿಂದ  ತಮ್ಮ ಗೂಡು ಸೇರಿಕೊಂಡಿದ್ದ ಗರ್ಭಿಣಿ ಮಹಿಳೆ ತಮಗೆ ಹುಟ್ಟಿದ ಮಗುವಿಗೆ ಸೂನು ಹೆಸರನ್ನೇ ಇಡುವ ಮೂಲಕ ಸುದ್ದಿಯಾಗಿದ್ದರು. ಇನ್ನೂ ಒಬ್ಬರು ಸೋನು ಸೂದ್​ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದರು. ಈಗ ಇಂತಹದ್ದೇ ಮತ್ತೊಂದು ಘಟನೆ ತೆಲಂಘಾಣದಲ್ಲಿ ನಡೆದಿದೆ. 


ಈಗ ಇದೇ ರೀತಿ, ತೆಲಂಗಾಣದಲ್ಲಿ ಮಟನ್‌ ಶಾಪ್‌ವೊಂದಕ್ಕೆ ಸೋನು ಸೂದ್‌ ಅವರ ಹೆಸರನ್ನು ಮಟನ್‌ ಶಾಪ್‌ವೊಂದಕ್ಕೆ ಇಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ನಟ ಸೋನು ಸೂದ್‌ ಟ್ವೀಟ್‌ ಮೂಲಕ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಮಟನ್ ಅಂಗಡಿಯೊಂದಕ್ಕೆ ಸೋನು ಸೂದ್‌ ಹೆಸರಿಟ್ಟಿದ್ದಾರಂತೆ. ತೆಲುಗಿನ ಸುದ್ದಿ ವಿಡಿಯೋವೊಂದನ್ನು ನೋಡಿದ ಸೋನು ಸೂದ್‌ ಭಾನುವಾರ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: Sparsha Rekha: ನಿರ್ದೇಶಕಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ ಸ್ಪರ್ಶ ರೇಖಾ..!


ಟ್ವಿಟ್ಟರ್‌ನಲ್ಲಿ ಈ ಕುರಿತಾಗಿ ಟ್ವೀಟ್​ ಮಾಡಿರುವ ನಟ, ಸಖತ್ ಹ್ಯೂಮರಸ್​ ಆಗಿ ಹಾಗೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಸಸ್ಯಾಹಾರಿ... ನನ್ನ ಹೆಸರಿನಲ್ಲಿ ಮಟನ್ ಅಂಗಡಿ..? ನಾನು ಅವರಿಗೆ ಯಾವುದಾದರೂ ಸಸ್ಯಾಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡಲು ಸಹಾಯ ಮಾಡಬಹುದೇ..?' ಎಂದು ಭಾನುವಾರ ಅಂದರೆ ಮೇ 30ರಂದು  ಟ್ವೀಟ್‌ ಮಾಡಿದ್ದಾರೆ.


ಸೋನು ಸೂದ್ ಮಾಡಿರುವ ಲೆಟೆಸ್ಟ್ ಟ್ವೀಟ್​ಬಾಲಿವುಡ್‌ ನಟನ ಈ ಟ್ವೀಟ್‌ಗೆ 17 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ಅಲ್ಲದೆ, 1,600 ನೆಟ್ಟಿಗರು ರೀಟ್ವೀಟ್‌ ಮಾಡಿದ್ದರೆ, ಸುಮಾರು ಒಂದು ಸಾವಿರ ಜನ ಸೋನು ಸೂದ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು, ನಟನ ಹಾಸ್ಯಮಯ ಟ್ವೀಟ್‌ಗೆ ಹಲವರು ಹಾಸ್ಯದ ಧಾಟಿಯಲ್ಲೇ ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ಸೋನು ಸೂದ್‌ರನ್ನು ಹೊಗಳಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಕೆಲವರು ಔಷಧಿ ಮುಂತಾದ ಅಗತ್ಯ ಸೇವೆಗಳಿಗೆ ಮನವಿ ಮಾಡಿಯೂ ಟ್ವೀಟ್‌ ಮಾಡಿದ್ದಾರೆ.


ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ, ನಟ ಕೋವಿಡ್ ರೋಗಿಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರ ಅಗತ್ಯ ಸಾಧನಗಳನ್ನೂ ವ್ಯವಸ್ಥೆ ಮಾಡುತ್ತಿದ್ದಾರೆ. ಜೂನ್‌ನಲ್ಲಿ ಆಂಧ್ರಪ್ರದೇಶದಲ್ಲಿ ಒಂದೆರಡು ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದಾಗಿ ಸೋನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು.


ಇದನ್ನೂ ಓದಿ: ಮಾದಕ ನೋಟದಿಂದಲೇ ಮತ್ತು ಬರಿಸುತ್ತಿರುವ ದುಬಾರಿ ನಟಿ ಶ್ರೀಲೀಲಾ


ನನ್ನ ಮೊದಲ ಆಮ್ಲಜನಕ ಸ್ಥಾವರಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಆಂಧ್ರ ಪ್ರದೇಶದ ನೆಲ್ಲೂರಿನ ಆತ್ಮಕೂರಿನ ಒಂದು ಜಿಲ್ಲಾಸ್ಪತ್ರೆಯಲ್ಲಿ ಜೂನ್‌ ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ಇತರ ರಾಜ್ಯಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ಇದನ್ನು ವಿಸ್ತರಿಸುವ ಯೋಜನೆ ಇದೆ. ಇದು ಗ್ರಾಮೀಣ ಭಾರತವನ್ನು ಬೆಂಬಲಿಸುವ ಸಮಯ ಎಂದು ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು.

Published by:Anitha E
First published: