ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣ-ರಾಧೆ ವೇಷ ಧರಿಸಿ ಕಳೆ ಹೆಚ್ಚಿಸಿದ ಮಕ್ಕಳು

ಕೊರೋನಾ ಸಂಕಷ್ಟ ಆದಷ್ಟು ಬೇಗ ತೊಲಗಲಿ. ಮೊದಲಿನಂತೆ ಹಬ್ಬ ಹರಿ ದಿನಗಳನ್ನು ಸಾಮೂಹಿಕವಾಗಿ, ವೈಭವಯುತವಾಗಿ ಆಚರಿಸುವಂತಾಗಿಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ರು‌.

news18-kannada
Updated:August 13, 2020, 9:38 AM IST
ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣ-ರಾಧೆ ವೇಷ ಧರಿಸಿ ಕಳೆ ಹೆಚ್ಚಿಸಿದ ಮಕ್ಕಳು
ಹುಬ್ಬಳ್ಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
  • Share this:
ಹುಬ್ಬಳ್ಳಿ(ಆ.13): ಕೊರೋನಾ ಕರಿ ಛಾಯೆಯ ನಡುವೆಯೂ ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿತ್ತು.‌ ಮನೆಮನೆಗಳಲ್ಲಿ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸರಳವಾಗಿ ಜನ್ಮಾಷ್ಟಮಿ ಆಚರಿಸಲಾಯಿತು. ತಾಯಂದಿರು ತಮ್ಮ ಮಕ್ಕಳಿಗೆ ರಾಧೆ ಮತ್ತು ಗೋಪಿಕೆಯರ ವೇಷ ತೊಡಸಿದ್ದರು. ಮಹಿಳೆಯರು ಯಶೋಧೆಯ ಪಾತ್ರ ಧಾರಿಗಳಾಗಿ ಕಂಗೊಳಿಸಿದ್ರು.

ಶ್ರೀ ಕೃಷ್ಣನನ್ನು ಭಕ್ತಿಯಿಂದ ಪೂಜೆ ಮಾಡಿದ್ರು. ಬಾಲ ಕೃಷ್ಣ ವೇಷಧಾರಿಗಳಿಗೆ ಬೆಣ್ಣೆ ತಿನಿಸಿದ್ರು. ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಸುಪ್ರಿಯಾ ಹೆಬಸೂರ ಹಾಗೂ ಗೆಳತಿಯರು ಯಶೋಧೆ, ರಾಧೆ, ಗೋಪಿಕೆ ಹಾಗೂ ಕೃಷ್ಣನ ಅವತಾರದಲ್ಲಿ ಗಮನ ಸೆಳೆದರು. ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ಆಚರಿಸಿದ್ರು. ಹಾಡುಗಳ ಮೂಲಕ ಶ್ರೀಕೃಷ್ಣನ ನಾಮ ಸ್ಮರಣೆ ಮಾಡಿದ್ರು.

ಕೊರೋನಾ ಸಂಕಷ್ಟ ಆದಷ್ಟು ಬೇಗ ತೊಲಗಲಿ. ಮೊದಲಿನಂತೆ ಹಬ್ಬ ಹರಿ ದಿನಗಳನ್ನು ಸಾಮೂಹಿಕವಾಗಿ, ವೈಭವಯುತವಾಗಿ ಆಚರಿಸುವಂತಾಗಿಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ರು‌. ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಹುಬ್ಬಳ್ಳಿಯ ದೇಶಪಾಂಡೆ ನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ರಾಧಾಕೃಷ್ಣರ ಮೂರ್ತಿಗೆ ವಿಶೇಷ ಅಲಂಕಾರ‌ ಮಾಡಲಾಗಿತ್ತು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬರುವ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇವಸ್ಥಾನಕ್ಕೆ ಪ್ರವೇಶ ನೀಡಲಾಯಿತು. ಮುಖಕ್ಕೆ ಮಾಸ್ಕ್ ಧರಿಸಿದವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿಯೊಬ್ಬರ ಕೈಗೆ ಸ್ಯಾನಿಟೈಜರ್ ಹಾಕಿ ದೇವಸ್ಥಾನದ ಒಳಗೆ ಕಳಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೊರೋನಾ‌ ಕರಿಛಾಯೆ ಆವರಿಸಿದ್ದು ಕಂಡುಬಂತು.

ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಕೊರತೆಯಿತ್ತು. ಜನರು ಮನೆಯಲ್ಲೇ ಶ್ರೀಕೃಷ್ಣನನ್ನು ಆರಾಧಿಸಿದ್ರು. ಭಕ್ತರಿಲ್ಲದೆ ದೇವಸ್ಥಾನಗಳು ಬಣಗುಡುತ್ತಿದ್ದವು. ಪ್ರತಿವರ್ಷ ಸಾವಿರಾರು ಭಕ್ತರು ಶ್ರೀಕೃಷ್ಣ ದೇವಸ್ಥಾನಕ್ಕೆ ತೆರಳಿ ಅಲಂಕಾರ ಕಣ್ತುಂಬಿ ಕೊಳ್ಳುತ್ತಿದ್ದರು. ಭಜನೆ, ಕೀರ್ತನೆಗಳು ನಡೆಯುತ್ತಿದ್ದವು. ಆದರೆ ಸಾಮೂಹಿಕ ಪ್ರಾರ್ಥನೆ, ಭಜನೆಗಳಿಗೆ ಈ ಬಾರಿ ಅವಕಾಶ ಕಲ್ಪಿಸಲಾಗಿರಲಿಲ್ಲ.

ಇದನ್ನೂ ಓದಿ: Shri Krishna Janmashtami 2020: ಬೆಂಗಳೂರಿನ ಇಸ್ಕಾನ್​ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮಮಕ್ಕಳಿಗೆ ರಾಧಾಕೃಷ್ಣ ವೇಷ ಧರಿಸುವ ಸ್ಪರ್ಧೆಗಳು, ಭಕ್ತಿಗೀತೆ, ರಂಗೋಲಿ, ನಾಟ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಮಕ್ಕಳ ಸ್ಪರ್ಧೆಗಳಿಗೆ ಬ್ರೆಕ್ ಹಾಕಲಾಗಿತ್ತು. ಸಾಮಾಜಿಲ ಅಂತರ ಕಾಯ್ದುಕೊಂಡು ಜನ್ಮಾಷ್ಟಮಿ ಆಚರಿಸುವಂತೆ ದೇವಸ್ಥಾನಗಳ ಆಡಳಿತ ಮಂಡಳಿಗಳು ಮನವಿ ಮಾಡಿದ್ದವು. ಹೀಗಾಗಿ ಜನ ಸಮೂಹ ಗುಂಪುಗುಂಪಾಗಿ ಕಾಣಿಸಲಿಲ್ಲ‌. ಅತ್ಯಂತ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯಿತು. ಕೊರೊನಾ ವಿಶ್ವದಿಂದ ತೊಲಗಲಿ ಎನ್ನುವ ಪ್ರಾರ್ಥನೆ ಭಕ್ತ ವಲಯದಿಂದ ಕೇಳಿ ಬಂತು.
Published by: Ganesh Nachikethu
First published: August 13, 2020, 8:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading