Hrithik Roshan: ಅಭಿಮಾನಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಹೃತಿಕ್: ಪಾರ್ಟಿ ಮಾಡುವ ಸಮಯವಲ್ಲ ಎಂದ ನಟ..!

Hrithik Roshan: ಇಡೀ ದೇಶವನ್ನು ಮುಂದಿನ 21 ದಿನಗಳವರೆಗೆ ಸಂಪೂರ್ಣವಾಗಿ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಸೆಲೆಬ್ರಿಟಿಗಳೂ ಅಭಿಮಾನಿಗಳಲ್ಲಿ ಸುರಕ್ಷಿತವಾಗಿ ಮನೆಯಲ್ಲೇ ಇರುವಂತೆ ಮನವಿ ಮಾಡುತ್ತಿದ್ದಾರೆ. ನಟ ಹೃತಿಕ್​ ರೋಷನ್​ ಸಹ ಅಭಿಮಾನಿಗಳಿಗೆ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ.

 ಹೃತಿಕ್​ ರೋಷನ್

ಹೃತಿಕ್​ ರೋಷನ್

  • Share this:
ಮಹಾಮಾರಿ ಕೊರೋನಾ ವೈರಸ್​ ವಿಶ್ವದಲ್ಲೇ ಕರಾಳ ರೂಪವನ್ನು ಪ್ರದರ್ಶಿಸುತ್ತಿದೆ. ಹೀಗಿರುವಾಗ ಭಾರತದಲ್ಲೂ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕು ಹರಡದಂತೆ ಎಚ್ಚರವಹಿಸುವ ಸಲುವಾಗಿಯೇ 21 ದಿನಗಳ ವರೆಗೆ ಲಾಕ್​ಡೌನ್​ ಅನ್ನು ವಿಸ್ತರಿಸಲಾಗಿದೆ.

ಇಡೀ ದೇಶವನ್ನು ಮುಂದಿನ 21 ದಿನಗಳವರೆಗೆ ಸಂಪೂರ್ಣವಾಗಿ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಸೆಲೆಬ್ರಿಟಿಗಳೂ ಅಭಿಮಾನಿಗಳಲ್ಲಿ ಸುರಕ್ಷಿತವಾಗಿ ಮನೆಯಲ್ಲೇ ಇರುವಂತೆ ಮನವಿ ಮಾಡುತ್ತಿದ್ದಾರೆ. ನಟ ಹೃತಿಕ್​ ರೋಷನ್​ ಸಹ ಅಭಿಮಾನಿಗಳಿಗೆ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ.



ಕೊರೋನಾ ಮಹಾಮಾರಿಯಿಂದ ಪಾರಾಗಲು ಮನೆಯಲ್ಲಿರುವುದು ಒಂದೇ ಉಪಾಯ. ಇದು ಸ್ನೇಹಿತರನ್ನು ಭೇಟಿ ಮಾಡುವ ಅಥವಾ ಪಾರ್ಟಿ ಮಾಡುವ ಸಮಯವಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಂಡು ಕೊಂಚ ಜವಾಬ್ದಾರಿಯಿಂದ ವರ್ತಿಸಿ ಎಂದಿದ್ದಾರೆ ಹೃತಿಕ್​.

ಇದನ್ನೂ ಓದಿ: RRR Motion Poster: ರಾಜಮೌಳಿ ಕೊಟ್ರು ಸಿಹಿ ಸುದ್ದಿ: ನಾಳೆ ಮೋಷನ್​ ಪೋಸ್ಟರ್​-ಟೈಟಲ್​ ಲೊಗೊ ರಿಲೀಸ್

ಸದ್ಯ ಕೊರೋನಾ ಕರಾಳ ಛಾಯೆ ಎಲ್ಲೆಡೆ ಶರವೇಗದಲ್ಲಿ ಹಬ್ಬುತ್ತಿದೆ. ಹೀಗಿರುವಾಗ ನಾಗರಿಕರು ಆದಷ್ಟು ಮನೆಯಲ್ಲಿ ಇರುವ ಮೂಲಕ ಸುರಕ್ಷತೆಯಿಂದಿದ್ದು, ರೋಗ ಹರಡದಂತೆ ಮಾಡಲು ಸಹಕರಿಸಬೇಕಾಗಿ ಸರ್ಕಾರ ಪರಿಪರಿಯಾಗಿ ಹೇಳುತ್ತಿದೆ.

Pranitha Subash: ಸೋಶಿಯಲ್ ಡಿಸ್ಟೆನ್ಸಿಂಗ್​ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಕನ್ನಡತಿ ಪ್ರಣೀತಾ..!


 

First published: