Corona ಪಿಡುಗು ಕೊನೆಯಾಗುವುದು ಯಾವಾಗ..?`ಎಂಡ್‌ಗೇಮ್‌' ಬಗ್ಗೆ ಸಂಕೇತ ನೀಡುತ್ತಿದೆಯೇ ಓಮೈಕ್ರಾನ್..?

ಭಾರತದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ಕೆಲ ಸಮಯದ ಹಿಂದೆ ಸುಮಾರು 6 ತಿಂಗಳುಗಳ ಕಾಲ ದೇಶದಲ್ಲಿ ನಿತ್ಯ ಕೋವಿಡ್ ಪ್ರಕರಣಗಳ ಸಂಖ್ಯೆ 10,000ಕ್ಕಿಂತ ಕಡಿಮೆಯೇ ಆಗಿತ್ತು.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

 • Share this:
  ಕಳೆದ 2 ವರ್ಷಗಳಿಂದ ವಿಶ್ವ ಈ ಸಾಂಕ್ರಾಮಿಕ ಮಹಾಮಾರಿಯಿಂದ(Epidemic) ನಲುಗಿ ಹೋಗಿದೆ. ಮೊದಲಿಗೆ ಕೋವಿಡ್-19 (Covid-19) ಆಗಿ ಲಗ್ಗೆ ಇಟ್ಟ ವೈರಾಣು ತನ್ನ ಕಪಿ ಮುಷ್ಟಿಯಲ್ಲಿ ಜಗತ್ತನ್ನೇ ಹಿಡಿದಿಟ್ಟಿತು. ತದನಂತರ ಜಗತ್ತು ಚೇತರಿಸಿಕೊಳ್ಳುವುದೇನೋ ಅನ್ನುವಾಗ ಮತ್ತೆ ಕೋವಿಡ್ ವೈರಾಣು ಡೆಲ್ಟಾ (delta) ಆಗಿ ಪರಿವರ್ತಿತಗೊಂಡು ಮತ್ತೆ ಆತಂಕದ ಛಾಯೆ ಸೃಷ್ಟಿಸಿತ್ತು. ಈಗ ಮತ್ತೆ ಈ ವೈರಾಣು ಓಮೈಕ್ರಾನ್ ಆಗಿ ಪರಿವರ್ತನೆಯಾಗಿ ವಿಶ್ವವನ್ನೇ ತಲ್ಲಣಗೊಳಿಸಿರುವುದು ಸುಳ್ಳಲ್ಲ. ಫ್ರಾನ್ಸ್, ( France) ಅಮೆರಿಕ, ಮುಂತಾದ ದೇಶಗಳಲ್ಲಿ ಓಮೈಕ್ರಾನ್ ಸೋಂಕಿತರ (Omicron infections) ಸಂಖ್ಯೆ ಹೆಚ್ಚುತ್ತಲೇ ಇದೆ.

  ವೈರಾಣುಗಳ ಜೊತೆ ಜೀವನ
  ಇತ್ತೀಚೆಗೆ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ದೆಹಲಿ, ಮಹಾರಾಷ್ಟ್ರ, ಕೇರಳ, ಪ. ಬಂಗಾಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಓಮೈಕ್ರಾನ್ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಆದರೆ, ಯಾವುದೇ ಸಾಂಕ್ರಾಮಿಕ ಪಿಡುಗಾಗಲಿ ಕೊನೆಗಾಣಲೇಬೇಕು. ಆದರೆ ಅದು ಸ್ವಿಚನ್ನು ಆನ್/ಆಫ್ ಮಾಡುವಷ್ಟು ಸುಲಭವಲ್ಲ. ಹಾಗಾಗಿ ನಾವು ತೊಲಗದೆ ಇನ್ನೂ ಇರುವ ಈ ವೈರಾಣುಗಳ ಜೊತೆ ಜೀವಿಸಲು ಕಲಿಯಲೇಬೇಕಾದ ಅನಿವಾರ್ಯತೆಯಿದೆ.

  ಸದ್ಯ, ಓಮೈಕ್ರಾನ್ ಕೋವಿಡ್ ರೂಪಾಂತರಿಗಳಲ್ಲೇ ಹೆಚ್ಚು ವೇಗವಾಗಿ ಹರಡುವ ವೈರಾಣುವಾಗಿದೆಯಾದರೂ, ಮನುಷ್ಯ ಮೊದಲಿನ ಹಾಗೆ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಹೆಚ್ಚಿನ ಮಟ್ಟಿನ ಜನರು ಈಗಾಗಲೇ ಲಸಿಕೆ ಪಡೆದಿದ್ದು ಸುರಕ್ಷತೆಯ ಮತ್ತೊಂದು ಕವಚ ಹೊಂದಿದಂತಾಗಿದೆ. ಮರಣದ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ಪಡೆದವರಿಗೆ ಈ ವೈರಾಣು ಹರಡುವುದಿಲ್ಲ ಅಂತ ಯಾವ ಸಾಕ್ಷ್ಯವೂ ಇಲ್ಲ. ಆದರೂ ಅವರಲ್ಲಿ ಇದರ ಪ್ರಭಾವ ಕಡಿಮೆಯಾಗಿರುವುದನ್ನು ಸಾಕಷ್ಟು ಕಡೆ ಗಮನಿಸಿರಬಹುದು.

  ಇದನ್ನೂ ಓದಿ: Flurona: ಕೋವಿಡ್ ಆಂತಕದ ಮಧ್ಯೆ ಫ್ಲೋರೋನಾ ಭೀತಿ, ಏನಿದರ ಲಕ್ಷಣ?

  ಕೋವಿಡ್ ಅನ್ನು ಅಳಿಸಲು ಸಾಧ್ಯವಿಲ್ಲ
  ನಾವಾಗಿಯೇ ಖುದ್ದು ಇದಕ್ಕೊಂದು ಕೊನೆಗಾಣಿಸುವವರೆಗೆ ಪರಿಸ್ಥಿತಿ ಮುಂದೆಯೂ ಇದೇ ರೀತಿಯಾಗಿರುವುದಾಗಿ ಹೇಳುವ ಯಾಲೆ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸೋಂಕು ಕಾಯಿಲೆಗಳ ತಜ್ಞರಾಗಿರುವ ಡಾ. ಅಲ್ಬರ್ಟ್ ಕೋ ನುಡಿಯುತ್ತಾರೆ, "ಕೋವಿಡ್ ಖಂಡಿತವಾಗಿಯೂ ನಮ್ಮೊಂದಿಗಿರುತ್ತದೆ, ನಾವು ಶಾಶ್ವತವಾಗಿ ಕೋವಿಡ್ ಅನ್ನು ಅಳಿಸಲು ಸಾಧ್ಯವಿಲ್ಲ, ಆದರೆ ಅದರ ಜೊತೆ ಎಚ್ಚರಿಕೆಯಿಂದ ಬದುಕುತ್ತ ನಮ್ಮ ಗುರಿಗಳನ್ನು ಹಾಕಿಕೊಳ್ಳಬಹುದು" ಎಂದು.

  ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸುತ್ತಿದೆ. ಇದು ಅಧಿಕೃತವಾಗಿ ಸಾಂಕ್ರಾಮಿಕ ಸಮಯ ಮುಕ್ತಾಯವಾಗಿದೆ ಎಂದು ಅಧಿಕೃತವಾಗಿ ಹೇಳಲು ಈಗಲೇ ಸಾಧ್ಯವಿಲ್ಲ. ಪ್ರತಿ ದೇಶಗಳಲ್ಲಿ ಸಾವು-ನೋವುಗಳ ಸಂಖ್ಯೆ ನಿಯಂತ್ರಣದಲ್ಲಿ ಬರಬೇಕು. ಸೋಂಕಿತರ ಸಂಖ್ಯೆ ನಿಯಂತ್ರಿತವಾಗಬೇಕು. ಒಟ್ಟಾರೆಯಾಗಿ ಈ ಪಿಡುಗು ಯಾವಾಗ ಕೊನೆಯಾಗುವುದೆಂದು ನಿಶ್ಚಿತವಾಗಿ ಹೇಳುವ ಮಾನದಂಡ ಈಗಲೂ ಸ್ಪಷ್ಟವಾಗಿಲ್ಲ.

  ಮುಂದುವರೆದ ರಾಷ್ಟ್ರ ನಿರಾಳತೆ
  ಒಂದು ವೇಳೆ ಇದು ನಿಯಂತ್ರಿತವಾದರೂ ಸಹ, ಕಡಿಮೆ ಆದಾಯದ ದೇಶಗಳು ಅನುಭವಿಸುವುದು ನಿಲ್ಲುವುದಿಲ್ಲ. ಏಕೆಂದರೆ ಆ ದೇಶಗಳಲ್ಲಿ ಇನ್ನೂ ಲಸಿಕೆಗಳ, ಉತ್ತಮ ಸೌಲಭಗಳುಳ್ಳ ಆಸ್ಪತ್ರೆಗಳ ಕೊರತೆಯಿದೆ. ಆದರೆ, ಇನ್ನೊಂದೆಡೆ ಕೇವಲ ಮುಂದುವರೆದ ರಾಷ್ಟ್ರಗಳಲ್ಲಿ ಮಾತ್ರ ನಿರಾಳತೆಯ ಫಲಿತಾಂಶ ಕಾಣಬಹುದು. ಈ ದೇಶಗಳು ಸ್ವೀಕೃತವಾದ ಸ್ಥಿತ ಪರಿಸ್ಥಿತಿಯತ್ತ ಮರಳುತ್ತಾರೆ ಹಾಗೂ ವೈಜ್ಞಾನಿಕ ಸಮುದಾಯವು ಈ ಪರಿಸ್ಥಿತಿಯನ್ನು "ಎಂಡೆಮಿಕ್" ಎಂದು ಕರೆದಿದ್ದಾರೆ.

  "ಸದ್ಯದ ಪರಿಸ್ಥಿತಿ ನೋಡಿದರೆ ಓಮೈಕ್ರಾನ್ ಪ್ರಕರಣಗಳು ಏರುತ್ತಿದ್ದು ನಾವು ಇನ್ನು ಎಂಡೆಮಿಕ್ ಪರಿಸ್ಥಿತಿಯತ್ತ ಬಂದಿಲ್ಲ. ಆದರೆ ಇದೂ ಸಹ ನಾವು ಈಗಾಗಲೇ ನೋಡಿದಂತೆ, SARS COV- 2 ರೀತಿಯ ಹಾಗೆ ಮುಂದೆ ಒಂದು ಸಮಯದಲ್ಲಿ ಎಂಡೆಮಿಕ್ ಸ್ಥಿತಿ ತಲುಪುತ್ತದೆ" ಎಂದು ಹಾರ್ವರ್ಡ್ ಟಿ.ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಭಾಗದ ಡಾ. ಸ್ಟಿಫನ್ ಕಿಸ್ಲರ್ ಹೇಳುತ್ತಾರೆ.

  ವೈದ್ಯರು ನಿಟ್ಟುಸಿರು
  ಕೋವಿಡ್-19 ಈಗಾಗಲೇ ಕಳೆದ 2 ವರ್ಷಗಳಲ್ಲಿ ಅಮೆರಿಕ ಒಂದರಲ್ಲೇ 8,00,000 ಜನರನ್ನು ಬಲಿ ಪಡೆದಿದೆ. ಸಾಮಾನ್ಯವಾಗಿ ಫ್ಲೂ ಕಾಯಿಲೆ ಏನಿಲ್ಲವೆಂದರೂ ವರ್ಷದಲ್ಲಿ 12,000 ದಿಂದ 52,000 ಜನರನ್ನು ಬಲಿಪಡೆಯುತ್ತದೆ. ಇದು ಕೇವಲ ಅಮೆರಿಕವಷ್ಟೇ ಅಲ್ಲ ಜಗತ್ತಿನ ಕೆಲವು ದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರ ಬಲಿ ಪಡೆದಿದೆ ಕೋವಿಡ್.

  ಆದರೆ, ಈಗಿನ ಪರಿಸ್ಥಿತಿ 2019ರಂತಿಲ್ಲ. ಮರಣದ ಪ್ರಮಾಣಗಳು ಅತ್ಯಂತ ಕಡಿಮೆಯಿದ್ದು ಚೇತರಿಸಿಕೊಳ್ಳುವವರ ಪ್ರಮಾಣ ಅತ್ಯಧಿಕವಾಗಿರುವುದು ಸಾಕಷ್ಟು ವಿಜ್ಞಾನಿಗಳು, ವೈದ್ಯರು ನಿಟ್ಟುಸಿರು ಬಿಡುವಂತಾಗಿದೆ. ಆದಾಗ್ಯೂ ಇದನ್ನು ಕಡೆಗಣಿಸುವಂತಿಲ್ಲ. ಇದರ ವಿರುದ್ಧ ನಮ್ಮದೇ ಆದ ಯಾವುದಾದರೂ ಪರಿಣಾಮಕಾರಿ ರಣತಂತ್ರ ಅಭಿವೃದ್ಧಿಪಡಿಸಿ ಬದುಕಬೇಕಾಗಿದೆ ಎಂಬ ಅಭಿಪ್ರಾಯ ಹಲವು ಪರಿಣಿತರಲ್ಲಿದೆ.

  ಅಮೆರಿಕದ ಸೋಂಕು ತಜ್ಞರಾದ ಡಾ. ಆ್ಯಂಥೋನಿ ಫೌಸಿ ಹೇಳುವ ಪ್ರಕಾರ, ಈ ವೈರಾಣುವನ್ನು ಒಂದು ವಿಧದಲ್ಲಿ ನಿಭಾಯಿಸುವ ಬಗೆಯ ಕುರಿತು ಅಧ್ಯಯನ ನಡೆಸಲಾಗುತ್ತಿದ್ದು ಈ ಮೂಲಕ ಇದು ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಜೀವನದ ಮೇಲೆ ಯಾವ ಪರಿಣಾಮವನ್ನೂ ಬೀರದಂತೆ ಗಮನಿಸಲಾಗುವುದು ಎಂದಿದ್ದಾರೆ.

  ವೇಗವಾಗಿ ಹರಡುವ ಸೋಂಕು
  ಭಾರತದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ಕೆಲ ಸಮಯದ ಹಿಂದೆ ಸುಮಾರು 6 ತಿಂಗಳುಗಳ ಕಾಲ ದೇಶದಲ್ಲಿ ನಿತ್ಯ ಕೋವಿಡ್ ಪ್ರಕರಣಗಳ ಸಂಖ್ಯೆ 10,000ಕ್ಕಿಂತ ಕಡಿಮೆಯೇ ಆಗಿತ್ತು. ಆದರೆ ಡಿಸೆಂಬರ್ ಮೊದಲ ವಾರದಿಂದಲೇ ಕೋವಿಡ್ ಪ್ರಕರಣಗಳ ಜೊತೆಗೆ ಓಮೈಕ್ರಾನ್ ಪ್ರಕರಣಗಳು ನಿಧಾನವಾಗಿ ಏರುತ್ತ ಬಂದಿದ್ದು ಈಗ ಮತ್ತೆ ಸೋಂಕಿತರ ಸಂಖ್ಯೆ ಆತಂಕ ಪಡಬಹುದಾದ ಸಂಖ್ಯೆಯತ್ತ ವೇಗವಾಗಿ ಹೋಗುತ್ತಿದೆ.

  ಇದನ್ನೂ ಓದಿ: Covid Crisis: ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳ: ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಣೆ ಸಾಧ್ಯತೆ

  ಆದರೆ, ಇವೆಲ್ಲದರ ಮಧ್ಯೆ ಇನ್ನೊಂದು ನಿರಾತಂಕಪಡುಬಹುದಾದ ಸುದ್ದಿಯೆಂದರೆ, ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಲಸಿಕಾಕರಣ ನಡೆದಿದ್ದು ಜನರಲ್ಲಿ ಮೊದಲಿಗೆ ಹೋಲಿಸಿದರೆ ಈಗ ಸೋಂಕಿನ ವಿರುದ್ಧ ಹೋರಾಡಲು ಹೆಚ್ಚು ಇಮ್ಯೂನಿಟಿಯಿದೆ. ಸೋಂಕು ತಾಕಿದರೂ ಅದು ಮೊದಲಿನ ರೀತಿ ದೇಹದ ಮೇಲೆ ಪರಿಣಾಮಗಳನ್ನುಂಟು ಮಾಡುವುದಿಲ್ಲ. ಆಸ್ಪತ್ರೆಗೆ ದಾಖಲಾದರೂ ಅವು ಸಾವಾಗುವುದು ಬಹುತೇಕ ಕಡಿಮೆಯಾಗುತ್ತದೆ ಎಂದು ಪರಿಣಿತ ವೈದ್ಯರ ಅಭಿಪ್ರಾಯವಾಗಿದೆ.

  ಹಲವು ಪರಿಣಿತರ ಪ್ರಕಾರ, ಮುಂದೆ ಕೋವಿಡ್ ನಮಗೆ ಸಾಮಾನ್ಯವಾಗಿ ಬರುವ ಜ್ವರ, ಕೆಮ್ಮುಗಳಂತಹ ಸಾಮಾನ್ಯ ಕಾಯಿಲೆಯಾಗಿ ಉಳಿದು ಬಿಡಬಹುದು. ಯಾರಿಗೆ ಇದು ಬಂದರೂ ಸಹ 2 - 3 ದಿನಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಸಾಮಾನ್ಯ ಜೀವನಕ್ಕೆ ಮರಳುವಂತಾಗಬಹುದು. ಆಗ ಈ ಪಿಡುಗು ನಿಂತಿದೆ ಎಂದು ಹೇಳಬಹುದಾಗಿದೆ.
  Published by:vanithasanjevani vanithasanjevani
  First published: