Covid Test: ಮಕ್ಕಳಲ್ಲಿ ಕೋವಿಡ್ ಸೋಂಕು; ಪರೀಕ್ಷಿಸುವ ವಿಧಾನ ಯಾವುದು?

ಮಕ್ಕಳನ್ನು ಪರೀಕ್ಷೆಗೆ ಒಳಪಡಿಸುವುದು ವೈದ್ಯಕೀಯ ರಂಗಕ್ಕೆ ಕೊಂಚ ಸವಾಲಿನದ್ದಾಗಿದ್ದು, ಕೋವಿಡ್ ಟೆಸ್ಟಿಂಗ್ ಅನ್ನು ಮಕ್ಕಳ ಮೇಲೆ ಮಾಡುವುದು ಪ್ರಯಾಸದ್ದಾಗಿದೆ

File photo

File photo

 • Share this:

  ಎರಡನೇ ಅಲೆಯಿಂದ ನಿಧಾನವಾಗಿ ಚೇತರಿಕೆಯತ್ತ ದಾಪುಗಾಲು ಹಾಕುತ್ತಿರುವ ಭಾರತಕ್ಕೆ ಈಗ ಕೋವಿಡ್‌ನ ಮೂರನೇ ಅಲೆಯನ್ನು ಎದುರಿಸುವ ಸವಾಲು ಬಂದೊದಗಿದೆ. ಮಕ್ಕಳ ಮೇಲೆ ಈ ಅಲೆಯ ಪರಿಣಾಮ ನಿಶ್ಚಿತವಾಗಿದ್ದು ಬೇಕಾದ ಬಂದೋಬಸ್ತನ್ನು ಮಾಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಈಗಾಗಲೇ ಕೇಂದ್ರಕ್ಕೆ ಎಚ್ಚರಿಕೆಯನ್ನು ನೀಡಿದೆ. ಮಕ್ಕಳನ್ನು ಪರೀಕ್ಷೆಗೆ ಒಳಪಡಿಸುವುದು ವೈದ್ಯಕೀಯ ರಂಗಕ್ಕೆ ಕೊಂಚ ಸವಾಲಿನದ್ದಾಗಿದ್ದು, ಕೋವಿಡ್ ಟೆಸ್ಟಿಂಗ್ ಅನ್ನು ಮಕ್ಕಳ ಮೇಲೆ ಮಾಡುವುದು ಪ್ರಯಾಸದ್ದಾಗಿದೆ ಎಂದು ಕ್ಲೌಡ್‌ನೈನ್ ಆಸ್ಪತ್ರೆಯ ಶಿಶುವೈದ್ಯರಾಗಿರುವ ಶಶಿ ಭೂಷಣ್ ಅಭಿಪ್ರಾಯವಾಗಿದೆ. ಕೋವಿಡ್ ಉನ್ನತ ಮಟ್ಟದ ತಜ್ಞರ ಸದಸ್ಯರಲ್ಲೊಬ್ಬರಾಗಿರುವ ಶಶಿ ಭೂಷಣ್ ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾದ ವಿವಿಧ ಪರೀಕ್ಷಾ ವಿಧಾನಗಳನ್ನು ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.


  ಮಕ್ಕಳನ್ನು ಪರೀಕ್ಷಿಸಲು ವಿಭಿನ್ನ ವಿಧಾನ ಏಕಿದೆ?


  ವೈದ್ಯರು ಮತ್ತು ಆಸ್ಪತ್ರೆಯೆಂದರೆ ಮಕ್ಕಳಿಗೆ ಸಾಮಾನ್ಯವಾಗಿ ಭಯವಿರುತ್ತದೆ. ಅವರ ಗಂಟಲು ಮತ್ತು ಮೂಗಿಗೆ ಹತ್ತಿಯ ಕಡ್ಡಿಯನ್ನು ತೂರಿಸಿ ಪರಿಶೀಲನೆ ನಡೆಸುವುದು ಅವರಿಗೆ ಹಿಂಸಾದಾಯಕವಾಗಬಹುದು ಮತ್ತು ಇನ್ನಷ್ಟು ಭಯವನ್ನುಂಟು ಮಾಡಬಹುದು. ಹಾಗಾಗಿ ಅವರಿಗೆ ಬೇರೆಯದೇ ವಿಧಾನವನ್ನು ಅನುಸರಿಸುವ ಅನಿವಾರ್ಯತೆ ಇದೆ ಎಂದು ಶಶಿ ಹೇಳಿದ್ದಾರೆ.


  ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿರುವ ಕೋವಿಡ್ ಪರಿಶೀಲನೆ ವಿಧಾನಗಳೇನು?


  ಮೌಖಿಕ RT-PCR, ಅಥವಾ ಲಾಲಾರಸದ RT-PCR ಮತ್ತು ಬಾಯಿಮುಕ್ಕಳಿಸುವ RT-PCR ಮಕ್ಕಳ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಲು ಅನುಸರಿಸುವ ವಿಧಾನಗಳಾಗಿವೆ. ಮೂಗಿನ ಸ್ವ್ಯಾಬ್ ಸಂಗ್ರಹ ಮತ್ತು ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಇತರ ಪರೀಕ್ಷಾ ರೂಪಗಳಾಗಿವೆ.


  ಮೂಗಿನ ಸ್ವಾಬ್ ಹಾಗೂ ಗಂಟಲ ಕುಳಿಯ ಮೇಲ್ಭಾಗಕ್ಕೆ ಇರುವ ವ್ಯತ್ಯಾಸಗಳೇನು?


  ಗಂಟಲ ಕುಳಿಯ ಮೇಲ್ಭಾಗದ ಸ್ವಾಬ್ ಅನ್ನು ಮಕ್ಕಳಿಂದ ಸಂಗ್ರಹಿಸಲಾಗುತ್ತದೆ. ಉದ್ದನೆಯ ಮತ್ತು ತೆಳುವಾದ ಉಪಕರಣವನ್ನು ಮೂಗಿನ ಒಳಕ್ಕೆ ಹಾಕಿ ಅದನ್ನು ಹೊರತೆಗೆಯಲಾಗುತ್ತದೆ. ಇದು ಬರಿ ಸೆಕೆಂಡ್‌ನಲ್ಲಿ ನಡೆಯುತ್ತದೆ. ಮಕ್ಕಳಿಗೆ ಇದನ್ನು ಶಿಫಾರಸು ಮಾಡಲಾಗಿಲ್ಲ. ಮಕ್ಕಳಿಗೆ ಮಾಡುವ ಪರೀಕ್ಷೆಯಲ್ಲಿ ಬರಿಯ ಮೂಗಿನ ಹೊಳ್ಳೆಯ ಬದಿಗೆ ಉಪಕರಣವನ್ನು ಒರೆಸಿ ಪರೀಕ್ಷೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ಉಪಕರಣವನ್ನು ಮೂಗಿನ ಹೊಳ್ಳೆಯೊಳಕ್ಕೆ ತೂರಿಸುವುದಿಲ್ಲ. ಇದನ್ನು ಮೂಗಿನ ಇಲ್ಲವೇ ನಾಸಲ್ ಸ್ವ್ಯಾಬ್ ಎಂದು ಕರೆಯುತ್ತಾರೆ.


  ಬಾಯಿಮುಕ್ಕಳಿಸುವ RT-PCR (ಗಾರ್ಗಲ್ RT-PCR)


  ಮಕ್ಕಳಿಗೆ ನಿರ್ದಿಷ್ಟ ದ್ರಾವಣವನ್ನು ನೀಡಲಾಗುತ್ತದೆ ಮತ್ತು ಮಕ್ಕಳು ಇದನ್ನು ಬಾಯಿಗೆ ಹಾಕಿ ಮುಕ್ಕಳಿಸಿ ಉಗಿಯಬೇಕು. 7 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದನ್ನು ಶಿಫಾರಸು ಮಾಡಲಾಗಿದೆ.


  ಪರೀಕ್ಷೆಗಳನ್ನು ಎಲ್ಲೆಲ್ಲಿ ನಡೆಸಲಾಗಿದೆ?


  ಲಾಲಾರಸದ RT-PCR ಸಂಗ್ರಹಿಸುವ ವಿಧಾನವನ್ನು ಅಮೆರಿಕ ಮತ್ತು ಫ್ರಾನ್ಸ್‌ನಲ್ಲಿ ಅಳವಡಿಸಲಾಗಿದೆ. ಗಾರ್ಗಲ್ RT-PCR ಅನ್ನು ಇತ್ತೀಚೆಗೆ ಪೂನಾದಲ್ಲಿ ನಡೆಸಲಾಗಿದೆ.


  ಈ ಪರೀಕ್ಷೆಗಳನ್ನು ನಡೆಸಲು ವೈದ್ಯಕೀಯ ಸಿಬ್ಬಂದಿಗೆ ತರಬೇತಿ ಅಗತ್ಯವಿದೆಯೇ?


  ಮಕ್ಕಳ ಮೇಲೆ ನಡೆಸುವ ಕೋವಿಡ್ ಪರೀಕ್ಷೆಗಳನ್ನು ಮಕ್ಕಳ ವೈದ್ಯಕೀಯ ಸಿಬ್ಬಂದಿಯಿಂದ ನಡೆಸಲಾಗುತ್ತದೆ. ಮಕ್ಕಳ ವೈದ್ಯಕೀಯ ಸಿಬ್ಬಂದಿಗಳು ಕಡಿಮೆ ಇದ್ದಾಗ ಇತರ ವೈದ್ಯಕೀಯ ಸಿಬ್ಬಂದಿಗಳಿಗೆ ತರಬೇತಿ ನೀಡಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  First published: