HOME » NEWS » Coronavirus-latest-news » HOW TO PREVENT THIRD WAVE OF CORONA DEVISHETTY COMMITTEE REPORT IS SUBMITTED TO THE STATE GOVERNMENT MAK

Corona 3rd Wave| ಕೊರೊನಾ ಮೂರನೇ ಅಲೆ ತಡೆಯೋದು ಹೇಗೆ..?; ಇಲ್ಲಿದೆ ಡಾ. ದೇವಿಶೆಟ್ಟಿ ಸಮಿತಿ ಸಲ್ಲಿಸಲಿರುವ ವರದಿಯ ಹೈಲೆಟ್ಸ್​!

ತಜ್ಞರು ನೀಡುವ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಂದು ತಜ್ಞರ ಸಮಿತಿ ಸದಸ್ಯರು ಮತ್ತು ಹಿರಿಯ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯ ಬಳಿಕ ಮುಂದಿನ ಕ್ರಮದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

news18-kannada
Updated:June 22, 2021, 11:52 AM IST
Corona 3rd Wave| ಕೊರೊನಾ ಮೂರನೇ ಅಲೆ ತಡೆಯೋದು ಹೇಗೆ..?; ಇಲ್ಲಿದೆ ಡಾ. ದೇವಿಶೆಟ್ಟಿ ಸಮಿತಿ ಸಲ್ಲಿಸಲಿರುವ ವರದಿಯ ಹೈಲೆಟ್ಸ್​!
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಜೂನ್ 22); ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಈಗಾಗಲೇ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಸಾವಿರಾರು ಜನ ಈ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಕ್ಕಳು ಅನಾಥವಾಗಿವೆ. ಪ್ರಸ್ತುತ ಕೊರೋನಾ ಎರಡನೇ ಅಲೆ ತಣ್ಣಗಾಗುತ್ತಿದ್ದು, ಲಾಕ್​ಡೌನ್​ ಅನ್ನು ಸಹ ಹಿಂಪಡೆಯಲಾಗಿದೆ. ಆದರೆ, ಇನ್ನೂ 6 ರಿಂದ 8 ವಾರದಲ್ಲಿ ದೇಶಕ್ಕೆ 3ನೇ ಕೊರೋನಾ ಅಲೆ ಅಪ್ಪಳಿಸಲಿದೆ ಎಂದು ಏಮ್ಸ್​ ಮುಖ್ಯಸ್ಥ ರಣದೀಪ್​ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮೂರನೇ ಕೊರೋನಾ ಅಲೆಯನ್ನು ತಡೆಯುವುದು ಹೇಗೆ? ಎಂದು ಶಿಫಾರಸು ನೀಡುವ ಸಲುವಾಗಿ ರಾಜ್ಯ ಸರ್ಕಾರ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಒಂದು ತಜ್ಞರ ತಂಡವನ್ನು ರಚನೆ ಮಾಡಿತ್ತು. ಇದೀಗ ಆ ತಂಡ ಇಂದು ಮಧ್ಯಾಹ್ನ ಸಂಪೂರ್ಣ ವರದಿ ನೀಡಲಿದೆ ಎನ್ನಲಾಗುತ್ತಿದೆ. 

ತಜ್ಞರು ನೀಡುವ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಂದು ತಜ್ಞರ ಸಮಿತಿ ಸದಸ್ಯರು ಮತ್ತು ಹಿರಿಯ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯ ಬಳಿಕ ಮುಂದಿನ ಕ್ರಮದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರಕ್ಕೆ ಸಮಿತಿ ನೀಡಲಿರುವ ಶಿಫಾರಸುಗಳು ಏನೇನು..?

1) ಮಕ್ಕಳು ಸೂಪರ್ ಸ್ಪ್ರೆಡರ್ಸ್ ಅಲ್ಲ, ಮಕ್ಕಳು ಕೋವಿಡ್ ಕ್ಯಾರಿಯರ್ಸ್ ಅಲ್ಲ.

2) ಮಕ್ಕಳಿಗೆ ಸೋಂಕು ಬಂದರೆ ಮನೆಯವರಿಂದಲೇ ಬರಬಹುದಾದ ಸಾಧ್ಯತೆಯೇ ಹೆಚ್ಚು.

3) ಸದ್ಯ ಮಕ್ಕಳಿಗೆ ಸೋಂಕು ತಗುಲಿದರೂ ಅನಾಹುತ ಸೃಷ್ಟಿ ಮಾಡಿರೋದು ಕಡಿಮೆ.

4) ಮಕ್ಕಳಲ್ಲಿ ಆಗ್ತಿರುವ ಸಾವಿನ ಪ್ರಮಾಣ ಕೂಡ ಕಡಿಮೆ ಇದೆ.5) ಆದರೂ ಮುಂಜಾಗ್ರತೆ ದೃಷ್ಟಿಯಿಂದ ಒಂದಷ್ಟು ತಯಾರಿಗಳನ್ನ ಮಾಡಿಕೊಳ್ಳಬೇಕು.

6) ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ಮುನ್ನವೇ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡು ಮುಂದುವರಿಯಬೇಕು.

7) ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಬೇಕು.

8) ಹೋಬಳಿ ಮಟ್ಟದಲ್ಲೇ ಆಸ್ಪತ್ರೆಗಳನ್ನ ರೆಡಿ ಇಟ್ಟುಕೊಳ್ಳಬೇಕು.

9) ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ‌ ನೋಡಿಕೊಳ್ಳಲು ಪೋಷಕರು ಜೊತೆಯಲ್ಲಿ ಇರಬೇಕು.

10) ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರ ಕೊರತೆ ಇದೆ.

11) ರಾಜ್ಯದಲ್ಲಿ ನೋಂದಣಿ‌ ಮಾಡಿಕೊಂಡಿರುವ 3000 ಮಕ್ಕಳ ವೈದ್ಯರು ಮಾತ್ರ ಇದ್ದಾರೆ.

12) ರಾಜ್ಯದಲ್ಲಿ 0-18 ವರ್ಷದೊಳಗಿನ 2.38% ಜನಸಂಖ್ಯೆ ‌ಇದೆ.

-13) ಇದರಲ್ಲಿ ಶೇ. 1 ರಷ್ಟು ಮಕ್ಕಳಿಗೆ ಸೋಂಕು ತಗುಲಬಹುದು.

14) ಸೋಂಕಿನ ಹರಡುವಿಕೆ ತೀವ್ರ ಸ್ವರೂಪದ ಚಿತ್ರಣ ಇದ್ದರೆ 3 ಲಕ್ಷ ಕೇಸ್ ಆಗಬಹುದು.

15) ಸಾಧಾರಣ ರೂಪದ ಸೋಂಕಿನ ಹರಡುವಿಕೆ ಇದ್ದರೆ 1.50 ಲಕ್ಷ ಕೇಸ್ ಆಗಬಹುದು.

16) ಸೋಂಕಿನ ಕನಿಷ್ಠ ಹರಡುವಿಕೆ ಇದ್ದರೆ 50 ಸಾವಿರದಿಂದ 1 ಲಕ್ಷ ಕೇಸ್ ಆಗಬಹುದು.

17) ರಾಜ್ಯದಲ್ಲಿ ಸದ್ಯದ ಅನುಪಾತ ನೋಡಿದ್ರೆ 6000 ಮಕ್ಕಳಿಗೆ ಒಬ್ಬ ಮಕ್ಕಳ ವೈದ್ಯರಿದ್ದಾರೆ.

18) 1000 ಮಕ್ಕಳಿಗೆ ಒಬ್ಬರು ಮಕ್ಕಳ ವೈದ್ಯರು ಇರುವಂತೆ ನೋಡಿಕೊಳ್ಳಬೇಕು.

19) ಹೀಗಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ ಆರಂಭಿಸಬೇಕಿದೆ.

20) 7 - 15 ದಿನಗಳ‌ ಕ್ರಾಶ್ ಕೋರ್ಸ್ ಆರಂಭಿಸಿ ಇತರ ವೈದ್ಯರನ್ನ ಚಿಕಿತ್ಸೆ ನೀಡಲು ತಯಾರು ಮಾಡಬೇಕಿದೆ.

21) ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಬೆಡ್ ಗಳನ್ನ ICU ಮಾಡಬೇಕಿದೆ.

21)  5000 ಮಕ್ಕಳ ICU ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

22) ಸೆಂಟಿನಲ್ ಸರ್ವೇ ಆರಂಭಿಸಲು ಆದೇಶಿಸುವಂತೆ ಸೂಚನೆ ಕೊಡಬೇಕು.

23) ಅಂದರೆ ಜಿಲ್ಲೆಗಳಲ್ಲಿರುವ ಒಂದು ಖಾಸಗಿ, ಒಂದು ಸರ್ಕಾರಿ ಆಸ್ಪತ್ರೆಗೆ ಬರುವ ಮಕ್ಕಳಲ್ಲಿ ಎಷ್ಟು ಮಕ್ಕಳಿಗೆ ಸೋಂಕು ತಗುಲುತ್ತಿದೆ ನೋಡಬೇಕು.

24) ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲು ಮನೆ ಮನೆಗೆ ಕೆನೆ ಭರಿತ ಹಾಲು ನೀಡಬೇಕು.

25) ಮಕ್ಕಳಿಗೆ ಸೋಂಕು ತಗುಲುವುದು ಮನೆಯ ಸದಸ್ಯರಿಂದಲೇ.

26) ಹೀಗಾಗಿ ಪ್ರಾಥಮಿಕ ನಿಯಂತ್ರಣವಾಗಿ ಹಿರಿಯರಿಗೆ ಹೆಚ್ಚೆಚ್ಚು ವ್ಯಾಕ್ಸಿನ್ ಹಾಕಿಸಬೇಕು
Published by: MAshok Kumar
First published: June 22, 2021, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories