ಎರಡನೇ ಹಂತದ ಲಾಕ್​ಡೌನ್ ರೂಪುರೇಷೆ ತಯಾರಾಗಿದ್ದು ಹೇಗೆ ಗೊತ್ತಾ?

ಕೇಂದ್ರ ಸರ್ಕಾರ ಆರೋಗ್ಯ, ಆರ್ಥಿಕ, ಆಹಾರ, ಗೃಹ ಇಲಾಖೆಗಳ ಕಾರ್ಯಪಡೆಗಳನ್ನು‌ ರಚಿಸಿ ಮುಂಬರುವ ಲಾಕ್​ಡೌನ್ ಅನ್ನು ಹೇಗೆ ನಿಭಾಯಿಸಬೇಕೆಂದು‌ ಸಲಹೆ ಪಡೆದುಕೊಳ್ಳಲಾಯಿತು. ಇದಲ್ಲದೆ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಹಣಕಾಸು ನಿಧಿ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ ಮತ್ತಿತರ ದೇಶೀಯ ಸಂಘ ಸಂಸ್ಥೆಗಳೊಂದಿಗೂ ಸಂವಾದ ನಡೆಸಲಾಯಿತು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವದೆಹಲಿ: ಜಗತ್ತನ್ನೇ ನಡುಗಿಸುತ್ತಿರುವ ಕಂಡುಕೇಳರಿಯದ ಕೊರೋನಾ ಕಷ್ಟವನ್ನು ಕೊನೆಗಾಣಿಸಲೆಂದು ದೇಶವಾಸಿಗಳೆಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುವ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಎರಡನೇ ಹಂತದ ಲಾಕ್​ಡೌನ್ ಇನ್ನಷ್ಟು ಬಿಗಿಕ್ರಮಗಳನ್ನು ಒಳಗೊಂಡಿದೆ. ಹಲವು ಕಠಿಣ ನಿಯಮಗಳನ್ನು ಒಳಗೊಂಡಿರುವ ಎರಡನೇ ಹಂತದ ಲಾಕ್​ಡೌನ್ ಮಾದರಿ ರೂಪುಗೊಂಡ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದ ಲಾಕ್​ಡೌನ್ ಜಾರಿಗೊಳಿಸಿದರೂ ಅದರಿಂದ ಪರಿಣಾಮಕಾರಿ ಪ್ರಯೋಜನ ಆಗಿರಲಿಲ್ಲ. 'ಹೇಗೆ? ಏಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಮ್ಮ ಮುಂದಿರುವ ಅಂಕಿ-ಅಂಶಗಳೇ ಉತ್ತರವಾಗಲಿವೆ. 21 ದಿನಗಳ ಲಾಕ್​ಡೌನ್ ಮಾಡಿದ್ದರೂ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಗಗನಮುಖಿಯೇ ಆಗಿತ್ತು. ಇದರಿಂದಾಗಿ ಎರಡನೇ ಹಂತದ ಲಾಕ್​ಡೌನ್ ಮಾಡುವುದು ಮತ್ತು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದು ಅನಿವಾರ್ಯವಾಗಿತ್ತು.

ಎರಡನೇ ಹಂತದ ಲಾಕ್​ಡೌನ್ ಸುದೀರ್ಘ ಸಮಾಲೋಚನೆಯಿಂದ ಹೊಳೆದ ಯೋಜನೆ. ಮೊದಲ ಹಂತದ ಲಾಕ್‌ಡೌನ್ ಜಾರಿಗೊಳಿಸಿದಾಗಲೇ ಎರಡನೇ ಹಂತದ ಲಾಕ್​ಡೌನ್ ರೂಪುರೇಷೆಗಳು ಹೇಗಿರಬೇಕೆಂಬ ತಯಾರಿ ನಡೆಸಲಾಗಿತ್ತು. ಈಗ ಸಮಾಜದ ವಿವಿಧ ವರ್ಗಗಳೊಂದಿಗೆ ಸಮಾಲೋಚನೆ ಮಾಡಿ ಮಾಹಿತಿ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರ ಆರೋಗ್ಯ, ಆರ್ಥಿಕ, ಆಹಾರ, ಗೃಹ ಇಲಾಖೆಗಳ ಕಾರ್ಯಪಡೆಗಳನ್ನು‌ ರಚಿಸಿ ಮುಂಬರುವ ಲಾಕ್​ಡೌನ್ ಅನ್ನು ಹೇಗೆ ನಿಭಾಯಿಸಬೇಕೆಂದು‌ ಸಲಹೆ ಪಡೆದುಕೊಳ್ಳಲಾಯಿತು. ಇದಲ್ಲದೆ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಹಣಕಾಸು ನಿಧಿ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ ಮತ್ತಿತರ ದೇಶೀಯ ಸಂಘ ಸಂಸ್ಥೆಗಳೊಂದಿಗೂ ಸಂವಾದ ನಡೆಸಲಾಯಿತು. ಇದಲ್ಲದೆ ಕೇಂದ್ರ ಸರ್ಕಾರದ ಮಟ್ಟದಲ್ಲೇ ಸಚಿವ ಸಂಪುಟ ತಂಡ, ಕ್ಯಾಬಿನೆಟ್ ಸೆಕ್ರೆಟರಿ ಅಜಯ್ ಬಳ್ಳಾ ನೇತೃತ್ವದ ತಂಡಗಳನ್ನು ರಚಿಸಿ ಪರಿಸ್ಥಿತಿ ನಿಭಾಯಿಸುವ ತಯಾರಿ ನಡೆಸಲಾಯಿತು. ಹೀಗೆ ಒಟ್ಟು 11 ಸಮಿತಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು.

ಇವೆಲ್ಲವುಗಳ ಬಳಿಕ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ, ಪ್ರತಿಪಕ್ಷಗಳ ನಾಯಕರ ಜೊತೆ ಕೂಡ ಸಮಾಲೋಚನೆ ನಡೆಸಲಾಯಿತು.‌ ಈ‌ ಸಭೆಗಳಲ್ಲಿ ಲಾಕ್​ಡೌನ್ ನಡುವೆಯೂ ನಿಯಂತ್ರಣಕ್ಕೆ ಬಾರದ ಕೊರೋನಾವನ್ನು ಮುಂದಿನ‌ ಹಂತದಲ್ಲಾದರೂ ಹೇಗೆ ಹತೋಟಿಗೆ ತರಬೇಕೆಂದು ಸುದೀರ್ಘ ಚರ್ಚೆ ನಡೆಸಲಾಯಿತು. ಹೀಗೆ ಸುದೀರ್ಘವಾದ ಸಮಾಲೋಚನೆ, ವಿವಿಧ ಮೂಲಗಳ ಸಲಹೆ ಶಿಫಾರಸುಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಎರಡನೇ ಹಂತದಲ್ಲಿ ಅತಿ ಬಿಗಿಯಾದ ಲಾಕ್​ಡೌನ್ ಜಾರಿಗೊಳಿಸಲು ನಿರ್ಧರಿಸಲಾಯಿತು. ಬಳಿಕ ಹೊಸ ಲಾಕ್​ಡೌನ್ ಮಾರ್ಗಸೂಚಿ ರೂಪಿಸಲಾಯಿತು. ಈ ಯೋಜನೆ ತಯಾರಿಸಲು ಸುಮಾರು 10 ದಿನ ಬೇಕಾಯಿತು ಎಂದು ಹೇಳಲಾಗುತ್ತಿದೆ‌.

ಇದನ್ನು ಓದಿ: ಕೊರೋನಾ ಕೊನೆಗಾಣಿಸಲು 2022ರವರೆಗೂ ಆಗಾಗ ಲಾಕ್​ಡೌನ್ ಮಾಡುತ್ತಲೇ ಇರಬೇಕು!

ಮುಖ್ಯಮಂತ್ರಿಗಳ ಸಭೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಪೂರ್ಣ ಪ್ರಮಾಣದ ಲಾಕ್​ಡೌನ್ ಬೇಡ ಎಂದು ಸಲಹೆ ನೀಡಿದ್ದರು. ಆರ್ಥಿಕ ಕ್ಷೇತ್ರದ ತಜ್ಞರು ಸದ್ಯದ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ಲಾಕ್​ಡೌನ್ ತೊಂದರೆ ಮುಂದೆ ದೇಶದ‌ ಎಕಾನಮಿಯೇ‌ ಏರುಪೇರಾಗಲಿದೆ. ಇದು‌ ಈಗಾಗಲೇ ‌ಪೆಟ್ಟುತಿಂದಿರುವ ದೇಶದ ಆರ್ಥಿಕತೆಗೆ ಭರಿಸಲಾರದ ಹೊರೆಯಾಗಲಿದೆ ಎಂಬ ಸಲಹೆಗಳನ್ನೂ ನೀಡಿದ್ದರು. ಈ ರೀತಿಯ ವ್ಯತಿರಿಕ್ತ ಸಲಹೆಗಳು ಬಂದ ಹಿನ್ನೆಲೆಯಲ್ಲಿ ಉತ್ಪಾದನೆಗೆ ಧಕ್ಕೆ ಆಗಬಾರದೆಂದು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ವಿನಾಯಿತಿ ನೀಡಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.
First published: