ನಿಮ್ಮ Covid-19 ಲಸಿಕೆ ಪ್ರಮಾಣ ಪತ್ರ ಅಸಲಿಯೋ, ನಕಲಿಯೋ ತಿಳಿಯುವುದು ಹೇಗೆ?

How to verify a vaccination certificate: ನಿಮ್ಮ ಪ್ರಮಾಣಪತ್ರವು ಅಧಿಕೃತವಾಗಿದ್ದರೆ, ಪರದೆಯು 'Certificate Successfully Verified' ಎಂದು ದೃಢೀಕರಣ ನೀಡುತ್ತದೆ. ಪ್ರಮಾಣಪತ್ರ ನಕಲಿಯಾಗಿದ್ದರೆ, ಸಂದೇಶ ಬಾಕ್ಸ್‍ನಲ್ಲಿ  Certificate Invalid’ ಎಂದು ತೋರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ಸತತ ಒಂದೂವರೆ ವರ್ಷ ಎರಡು ಅಲೆಗಳ ರೂಪದಲ್ಲಿ ಪ್ರಪಂಚದ ಜನರನ್ನು ನಿದ್ದೆಗೆಡಿಸಿತ್ತು. ಬದುಕನ್ನು ಹೈರಾಣಗೊಳಿಸಿತು. ಆದರೆ ಇದೀಗ ಪ್ರಪಂಚವು ಲಸಿಕೆಗಳ ಲಭ್ಯತೆಯೊಂದಿಗೆ ನಿಧಾನವಾಗಿ ಸುಧಾರಿತ ವೇಗವನ್ನು ಪಡೆಯುತ್ತಿದೆ. ಭಾರತದಲ್ಲಿ ಲಸಿಕೆ ಹಾಕುವಿಕೆಯು ಒಂದು ದಿನದಲ್ಲಿ ದೇಶವು ಸರಿಸುಮಾರು 1 ಕೋಟಿ ಡೋಸ್‍ಗಳನ್ನು ನೀಡುವ ಮಟ್ಟಿಗೆ ವಿಸ್ತರಿಸಿದೆ. ಕೇಂದ್ರ ಸರ್ಕಾರವು ಕೋವಿನ್ (CoWIN) ಮತ್ತು ಆರೋಗ್ಯ ಸೇತು ವೇದಿಕೆಗಳನ್ನು ಅಭಿವೃದ್ಧಿಪಡಿಸಿದ್ದು, ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಲಸಿಕೆ ಸ್ಲಾಟ್‍ಗಳನ್ನು ಕಾಯ್ದಿರಿಸಲು ಮತ್ತು ಪ್ರಮಾಣಪತ್ರಗಳಿಗಾಗಿ ಡೌನ್‍ಲೋಡ್ ಮಾಡಲು ಎರಡೂ ವೇದಿಕೆಗಳು ಸಮಾನವಾಗಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

  ಹಣಕ್ಕಾಗಿ ನಕಲಿ ಪ್ರಮಾಣಪತ್ರ ಮಾರಾಟ

  ಆದಾಗ್ಯೂ, ವ್ಯಾಕ್ಸಿನೇಷನ್ ಡ್ರೈವ್ ವೇಗವನ್ನು ಪಡೆದ ನಂತರ, ಭಾರತ ಸೇರಿದಂತೆ 29 ದೇಶಗಳಲ್ಲಿ ನಕಲಿ ವ್ಯಾಕ್ಸಿನೇಷನ್ ವರದಿಗಳು ದಾಖಲಾಗುತ್ತಿವೆ. ಚೆಕ್‍ಪಾಯಿಂಟ್ ಸಂಶೋಧನೆಯ ಪ್ರಕಾರ, ಪ್ರತಿ ಡಾಕ್ಯುಮೆಂಟ್‍ಗೆ ಸರಿಸುಮಾರು 6,000 ರೂ ದರದಲ್ಲಿ ಪ್ರಮಾಣಪತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ನಕಲಿ ಪ್ರಮಾಣ ಪತ್ರದ ಅವ್ಯವಹಾರದ ವಿರುದ್ಧ ಹೋರಾಡಲು, ಸರ್ಕಾರಗಳು ಈಗ ನಾಗರಿಕರಿಗೆ ಸಹಾಯ ಮಾಡಲು ಪೋರ್ಟಲ್‍ಗಳನ್ನು ಅಭಿವೃದ್ಧಿಪಡಿಸುತ್ತಿವೆ ಮತ್ತು ಸೇವಾ ಪೂರೈಕೆದಾರರು ಪ್ರಮಾಣಪತ್ರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅನುಕೂಲ ಮಾಡಿಕೊಡುತ್ತಿದೆ.

  ಭಾರತದಲ್ಲಿ, ಸ್ಮಾರ್ಟಿಫಿಕೇಟ್​ಗಳನ್ನು ಹೊಂದಿರುವ ಬಳಕೆದಾರರು ಪ್ರಮಾಣಪತ್ರಗಳ ಮಾನ್ಯತೆಯನ್ನು ಪರಿಶೀಲಿಸಬಹುದು.

  ಹಂತ 1: CoWIN (cowin.gov.in) ನ ಅಧಿಕೃತ ವೆಬ್‍ಸೈಟ್‍ಗೆ ಹೋಗಿ ಮತ್ತು ಮೇಲಿನ ಬಲಭಾಗದಲ್ಲಿರುವ ‘ಪ್ಲಾಟ್‍ಫಾರ್ಮ್’ ಆಯ್ಕೆಯನ್ನು ಪತ್ತೆ ಮಾಡಿ. ಇಲ್ಲಿ Verify certificates’ ಎಂಬುದನ್ನು ಆಯ್ಕೆ ಮಾಡಿ ಅಥವಾ ಬಳಕೆದಾರರು ನೇರವಾಗಿ cowin.gov.in ಗೆ ಭೇಟಿ ನೀಡಬಹುದು.

  ಹಂತ 2: 'ಸ್ಕ್ಯಾನ್ ಕ್ಯೂಆರ್.' ಎಂದು ಹೇಳುವ ಹಸಿರು ಬಟನ್ ಅನ್ನು ನೀವು ಕಾಣಬಹುದು. ಪ್ಲಾಟ್‍ಫಾರ್ಮ್ ಕಾರ್ಯನಿರ್ವಹಿಸಲು ಕ್ಯಾಮೆರಾ ಅನುಮತಿಯ ಅಗತ್ಯವಿದೆ ಎಂಬುದನ್ನು ಬಳಕೆದಾರರು ಗಮನಿಸಬೇಕು.

  ಹಂತ 3: ಹಸಿರು ಬಟನ್ ನಿಮ್ಮ ಕ್ಯಾಮೆರಾವನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿಮ್ಮ ಪ್ರಮಾಣಪತ್ರದ ಕೆಳಗಿನ ಬಲ ಮೂಲೆಯಲ್ಲಿ ನೀಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮಗೆ ಅನುಮತಿಸುತ್ತದೆ.

  ಹಂತ 4: ನಿಮ್ಮ ಪ್ರಮಾಣಪತ್ರವು ಅಧಿಕೃತವಾಗಿದ್ದರೆ, ಪರದೆಯು 'Certificate Successfully Verified' ಎಂದು ದೃಢೀಕರಣ ನೀಡುತ್ತದೆ. ಪರದೆ ವೈಯಕ್ತಿಕ ವಿವರಗಳಾದ ಹೆಸರು, ವಯಸ್ಸು, ಲಿಂಗ, ಪ್ರಮಾಣಪತ್ರ ಐಡಿ, ಲಸಿಕೆ ಹೆಸರು ಇತ್ಯಾದಿಗಳನ್ನು ಪ್ರದರ್ಶಿಸುತ್ತದೆ. ಪ್ರಮಾಣಪತ್ರ ನಕಲಿಯಾಗಿದ್ದರೆ, ಸಂದೇಶ ಬಾಕ್ಸ್‍ನಲ್ಲಿ  Certificate Invalid’ ಎಂದು ತೋರಿಸುತ್ತದೆ.

  ಇದನ್ನೂ ಓದಿ: Pfizer| ಫೈಜರ್​ನ ಆ್ಯಂಟಿ ಕೋವಿಡ್ ಪಿಲ್ ಕ್ಲಿನಿಕಲ್ ಪ್ರಯೋಗಕ್ಕೆ 2000ಕ್ಕೂ ಹೆಚ್ಚು ವಯಸ್ಕರ ಬಳಕೆ!

  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 85.42 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್‍ಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೆಪ್ಟೆಂಬರ್ 29 ರ ಬುಧವಾರ ಹೇಳಿದೆ. 4.57 ಕೋಟಿಗೂ ಹೆಚ್ಚು ಲಸಿಕೆಗಳು ಉಳಿದಿದ್ದು ಮತ್ತು ಬಳಕೆಯಾಗದ ಕೋವಿಡ್ -19 ಲಸಿಕೆ ಪ್ರಮಾಣಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿ ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: