Omicron: ಎಚ್ಚರ.. ಎಚ್ಚರ.. ನಿಮ್ಮ ಕರುಳಿನ ಮೇಲೆ ಈ ಪರಿಣಾಮ ಬೀರುತ್ತೆ ಓಮಿಕ್ರಾನ್​ ಸೋಂಕು!

Omicron symptoms: ಓಮಿಕ್ರಾನ್ ಸೋಂಕು ಮೇಲ್ಮೈ ಶ್ವಾಸಕೋಶ ಮಾತ್ರವಲ್ಲದೆ ಉದರದ ಮೇಲೂ ಪರಿಣಾಮ ಉಂಟು ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಈ ಹೊಸ ತಳಿಯ ಸೋಂಕಿಗೆ ಒಳಗಾದವರಲ್ಲಿ ಉದರ ಸಂಬಂಧಿ ರೋಗಲಕ್ಷಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೋವಿಡ್‌(Covid) ರೂಪಾಂತರ ವೈರಸ್‌ಗಳು ಜನಸಾಮಾನ್ಯರನ್ನು(People) ಆತಂಕದ ಜೊತೆಗೆ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಕೋವಿಡ್‌ ಸೋಂಕಿತರಿಗಿದ್ದ ಲಕ್ಷಣಗಳು(Symptoms) ಡೆಲ್ಟಾ(Delta) ಅಥವಾ ಓಮಿಕ್ರಾನ್‌(Omicron) ಸೋಂಕಿತರಲ್ಲಿ ಭಿನ್ನವಾಗಿತ್ತು. ಇದರಿಂದಾಗಿ ಜನಸಾಮಾನ್ಯರು ಗೊಂದಲಕ್ಕೆ ಒಳಗಾಗಿದ್ದಾರೆ. ಮೊದಲಿಗೆ ಶೀತ(Cold), ಕೆಮ್ಮು(Cough), ಬೇಧಿ, ಉಸಿರಾಟದ(Breathing) ತೊಂದರೆ ಇವೇ ಮೊದಲಾದವುಗಳನ್ನು ಕೋವಿಡ್‌ ಸೋಂಕಿನ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಈಗ ಈ ಮೊದಲಿಗಿಂತಲೂ ಭಿನ್ನವಾದ ಲಕ್ಷಣಗಳು ಸೋಂಕಿತರಲ್ಲಿ ಕಾಣಸಿಕೊಳ್ಳುತ್ತಿದೆ ಎಂಬುದು ಸುಳ್ಳಲ್ಲ.


ನೀವು ವಾಂತಿ, ವಾಕರಿಕೆ ಹಾಗೂ ಉದರ ಬೇನೆಯಿಂದ ನರಳುತ್ತಿದ್ದೀರಾ? ಹಾಗಾದರೆ ಅದು ಓಮಿಕ್ರಾನ್‌ ಸೋಂಕಾಗಿರಬಹುದು. ಉಸಿರಾಟದ ತೊಂದರೆ ಅಥವಾ ಜ್ವರ ಇಲ್ಲದೆಯೂ ಕರುಳು ಸಂಬಂಧಿ ದೂರುಗಳಿರುವವರು ಕೂಡಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಜ್ಞರು ಸೂಚಿಸಿದ್ದಾರೆ.


ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡ್ಸಿದ್ರಾ? ವರದಿ ನೋಡೋದು ಈಗ ಬಹಳ ಸುಲಭ, ಹೀಗೆ ಮಾಡಿ ಸಾಕು

ಓಮಿಕ್ರಾನ್‌ ಸೋಂಕಿನಿಂದ ನಿಮ್ಮ ಕರುಳಿನ ಮೇಲೆ  ಪರಿಣಾಮ

ಓಮಿಕ್ರಾನ್ ಸೋಂಕು ಮೇಲ್ಮೈ ಶ್ವಾಸಕೋಶ ಮಾತ್ರವಲ್ಲದೆ ಉದರದ ಮೇಲೂ ಪರಿಣಾಮ ಉಂಟು ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಈ ಹೊಸ ತಳಿಯ ಸೋಂಕಿಗೆ ಒಳಗಾದವರಲ್ಲಿ ಉದರ ಸಂಬಂಧಿ ರೋಗಲಕ್ಷಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಲಸಿಕೆ ಪಡೆದವರು ಕೂಡಾ ಈ ಹೊಸ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ.


ಓಮಿಕ್ರಾನ್ ಸೋಂಕಿನ ಹೊಸ ರೋಗಲಕ್ಷಣಗಳು 

ಓಮಿಕ್ರಾನ್ ಸೋಂಕಿನ ಕೆಲವು ಹೊಸ ರೋಗಲಕ್ಷಣಗಳು ವಾಕರಿಕೆ, ಉದರ ಬೇನೆ, ವಾಂತಿ, ಹಸಿವಿನ ನಷ್ಟ ಹಾಗೂ ನಿರ್ಜಲೀಕರಣವನ್ನು ಒಳಗೊಂಡಿವೆ.


"ಜನರು ಆರಂಭದಲ್ಲಿ ಯಾವುದೇ ಉಸಿರಾಟ ತೊಂದರೆಯ ದೂರುಗಳಿಲ್ಲದೆಯೂ ಉದರ ಸಂಬಂಧಿ ರೋಗಲಕ್ಷಣಗಳನ್ನು ಹೊಂದಿರುವ ಸಾಧ್ಯತೆ ಇದೆ. ಈ ದೂರುಗಳ ಪೈಕಿ ಬೆನ್ನು ನೋವು, ಉದರ ಬೇನೆ, ವಾಕರಿಕೆ, ವಾಂತಿ, ಹಸಿವಿನ ನಷ್ಟ ಹಾಗೂ ನಿರ್ಜಲೀಕರಣ ಸೇರಿವೆ. ಈ ರೋಗಲಕ್ಷಣಗಳು ಓಮಿಕ್ರಾನ್‌ನಿಂದ ಕರುಳಿನ ಲೋಳೆಸರ ಸೋಂಕಿತಗೊಂಡು ಉರಿಯೂತ ಬರುವ ಕಾರಣಕ್ಕೆ ಕಾಣಿಸಿಕೊಳ್ಳುತ್ತವೆ" ಎಂದು ಗುರುಗ್ರಾಮದಲ್ಲಿರುವ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯಲ್ಲಿ ಶ್ವಾಸಕೋಶ ವಿಭಾಗದ ನಿರ್ದೇಶಕರಾಗಿರುವ ಡಾ. ಮನೋಜ್ ಗೋಯಲ್ ಅಭಿಪ್ರಾಯ ಪಡುತ್ತಾರೆ.


ಎರಡು ಡೋಸ್ ಲಸಿಕೆ ಪಡೆದಿರುವವರೂ ಕೂಡಾ ಉದರ ಸಂಬಂಧಿ ದೂರುಗಳೊಂದಿಗೆ ವೈದ್ಯರ ಬಳಿ ಬರುತ್ತಿದ್ದು, ಈ ರೋಗಲಕ್ಷಣಗಳು ಪ್ರತಿಕೂಲವಲ್ಲ ಹಾಗೂ ಯಾವುದೇ ಕಳವಳಕ್ಕೆ ಕಾರಣವಿಲ್ಲ ಎನ್ನುತ್ತಾರೆ ತಜ್ಞರು.


"ಸಾಮಾನ್ಯ ಫ್ಲೂ ರೋಗಲಕ್ಷಣಗಳಾದ ಉದರ ಬೇನೆ, ವಾಕರಿಕೆ ಮತ್ತು ಹಸಿವಿನ ನಷ್ಟ ಕಾಣಿಸಿಕೊಂಡಾಗ ಅವನ್ನು ಉಪೇಕ್ಷಿಸುವ ಬದಲು ಪ್ರತ್ಯೇಕ ವಾಸಕ್ಕೆ ತೆರಳಿ. ಸುರಕ್ಷಿತ ಎಂದು ಹೇಳಲಾಗುವ ಆಯುರ್ವೇದ ಔಷಧಗಳು ಸೇರಿದಂತೆ ಯಾವುದೇ ಔಷಧಗಳನ್ನು ನಿಮ್ಮ ವೈದ್ಯರ ಸಕಹೆ ಪಡೆಯದೆ ಸ್ವಯಂ ಚಿಕಿತ್ಸೆಗೆ ಬಳಸಬೇಡಿ. ಈ ಸಂದರ್ಭದಲ್ಲಿ ಯಥೇಚ್ಛವಾಗಿ ನೀರು ಸೇವಿಸಿ, ನಟ್ಸ್‌ಗಳನ್ನು ಒಳಗೊಂಡಂತೆ ಸಣ್ಣ ಹಾಗೂ ಪರಿಪೂರ್ಣ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಿರಿ. ಮಸಾಲೆಯುಕ್ತ ಪದಾರ್ಥಗಳು ಹಾಗೂ ಮದ್ಯ ಸೇವನೆಯನ್ನು ನಿರ್ಬಂಧಿಸಿ. ರೋಗ ಲಕ್ಷಣಗಳು ಸೌಮ್ಯವಾಗಿದ್ದರೆ ಕಳವಳಕ್ಕೀಡಾಗುವ ಅಗತ್ಯವಿಲ್ಲ" ಎಂದು ಡಾ. ಗೋಯಲ್ ಹೇಳಿದ್ದಾರೆ.


"ಯಾರಿಗಾದರೂ ಉಸಿರಾಟ ತೊಂದರೆಯ ದೂರುಗಳಿಲ್ಲದೆಯೂ ಉದರ ಸಂಬಂಧಿ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕೆಂದರೆ, ಈ ರೋಗಲಕ್ಷಣಗಳು ಓಮಿಕ್ರಾನ್ ಸೋಂಕಿನಿಂದ ಉಂಟಾಗಿರುವ ಸಾಧ್ಯತೆ ಇರುತ್ತದೆ" ಎಂದೂ ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಓಮಿಕ್ರಾನ್​ ಪತ್ತೆ ಹಚ್ಚುವ ಟೆಸ್ಟಿಂಗ್​ ಏಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ? ಇಲ್ಲಿದೆ ಕಾರಣ

ಉದರ ಸಂಬಂಧಿ ರೋಗಲಕ್ಷಣಗಳು ಕಂಡು ಬಂದಾಗ ಅಂತಹ ರೋಗಿಗಳು ಅನುಸರಿಸಬೇಕಾದ ವಿಧಾನಗಳು:


* ರೋಗಿಗಳು ತಾಜಾ ಆಗಿ ಸಿದ್ಧಪಡಿಸಿರುವ ಆಹಾರವನ್ನು ಸೇವಿಸಬೇಕು ಹಾಗೂ ತಮ್ಮ ಕೈಗಳ ಶುಭ್ರತೆಯನ್ನು ಕಾಪಾಡಿಕೊಳ್ಳಬೇಕು.
* ಇತರರೊಂದಿಗೆ ಆಹಾರ ಹಂಚಿಕೊಳ್ಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ.
* ಎಲ್ಲ ಕಚ್ಚಾ ಹಣ್ಣುಗಳನ್ನು ಸೇವಿಸುವ ಮುನ್ನ ಚೆನ್ನಾಗಿ ತೊಳೆದಿರಬೇಕು.
* ಹೊರಗಿನ ಆಹಾರ ಸೇವನೆ ತಡೆಯಿರಿ ಹಾಗೂ ನೀವು 2 ಬಾರಿ ಲಸಿಕೆ ಪಡೆದಿದ್ದರೂ ಕೋವಿಡ್ ಸುರಕ್ಷಾ ಶಿಷ್ಟಾಚಾರಗಳನ್ನು ಪಾಲಿಸಿ.


Published by:ranjumbkgowda1 ranjumbkgowda1
First published: