Corona: ಒಬ್ಬ ವ್ಯಕ್ತಿ ಎಷ್ಟು ಬಾರಿ ಕೊರೊನಾ ಮರು ಸೋಂಕಿಗೆ ಒಳಗಾಗಬಹುದು? ಇಲ್ಲಿದೆ ಡೀಟೈಲ್ಸ್!

Covid 19: ಎಲ್ಲ ವೈರಸ್‍ಗಳಂತೆಯೆ SARS COV-2 ಕೂಡಾ ರೂಪಾಂತರಿ ವೈರಸ್. ರೂಪಾಂತರವೆಂದರೆ, ತಮ್ಮ ಅನುವಂಶಿಕತೆಯನ್ನು ಬದಲಿಸಿಕೊಳ್ಳುವುದು. ಇದು ಮುಖ್ಯವಾಗಿ ವೈರಸ್‍ನ ಜೀವಕೋಶದಲ್ಲಿ ನಡೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಲವಾರು ವ್ಯಕ್ತಿಗಳು ಕೊರೊನಾ (Coronavirus) ಮರು ಸೋಂಕಿಗೆ ಒಳಗಾಗುತ್ತಿರುವುದು ವರದಿಯಾಗುತ್ತಿರುವುದರಿಂದ ಇದು ಸಹಜವಾಗಿಯೇ ವೈದ್ಯಕೀಯ ಹಾಗೂ ಆರೋಗ್ಯ ಪ್ರಾಧಿಕಾರಗಳ (Health Authorities) ಕಳವಳಕ್ಕೆ ಕಾರಣವಾಗಿದ್ದು, ಇದೀಗ ಮುನ್ನೆಚ್ಚರಿಕಾ (Guidelines) ಕ್ರಮಗಳಿಗೆ ಮತ್ತೊಮ್ಮೆ ಒತ್ತು ನೀಡಲು ಆದ್ಯತೆ ನೀಡತೊಡಗಿವೆ. ಇದರ ಭಾಗವಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಕೋವಿಡ್-19 ಸೋಂಕಿಗೆ ಕಾರಣವಾಗುವ ಓಮೈಕ್ರಾನ್‌ ರೂಪಾಂತರಿ (Omicron Mutant) ವೈರಸ್ ಸೇರಿದಂತೆ ವಿವಿಧ ಬಗೆಯ ರೂಪಾಂತರಿ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲು ಯಾವೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಸೋಂಕಿನ ಕುರಿತ ಅಧ್ಯಯನ

ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಏಕೆ ಮರು ಸೋಂಕು ತಗುಲುತ್ತಿದೆ ಹಾಗೂ ಮತ್ತೆ 2 ಡೋಸ್ ಲಸಿಕೆ ಪಡೆದಿರುವವರೂ ಯಾಕೆ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದನ್ನು ತಡೆಗಟ್ಟಲು ಏನು ಮಾಡಬೇಕಿದೆ ಎಂದು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.

ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ (ಸಿಡಿಸಿ) ಪ್ರಕಾರ, ಮರು ಸೋಂಕು ಎಂದರೆ ಯಾವುದೇ ವ್ಯಕ್ತಿ ವ್ಯಕ್ತಿ ಆ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಮತ್ತೆ ಅದೇ ಸೋಂಕಿಗೆ ಒಳಗಾಗುವುದಾಗಿರುತ್ತದೆ. ತಜ್ಞರ ಪ್ರಕಾರ, ಈಗಾಗಲೇ ತಿಳಿದು ಬಂದಿರುವ ಈ ಬಗೆಯ ವೈರಸ್‍ಗಳಿಂದ ಮರು ಸೋಂಕಿಗೆ ಒಳಗಾಗುವುದು ನಿರೀಕ್ಷಿತ. ಈ ಕುರಿತು ನಡೆಯುತ್ತಿರುವ ಕೋವಿಡ್-19 ಸೋಂಕಿನ ಕುರಿತ ಅಧ್ಯಯನಗಳು ನಮಗಿದು ಅರ್ಥವಾಗಲು ಸಹಾಯ ಮಾಡುತ್ತವೆ:

* ಮರು ಸೋಂಕು ಎಷ್ಟರ ಮಟ್ಟಿಗೆ ಆಗಬಹುದು?

* ಎಂದೆಂದು ಮರು ಸೋಂಕು ಮರುಕಳಿಸುತ್ತದೆ?

* ಮೊದಲ ಸೋಂಕಿಗೊಳಗಾದ ಎಷ್ಟು ಅವಧಿಯ ನಂತರ ಮರು ಸೋಂಕು ಉಂಟಾಗುವ ಸಾಧ್ಯತೆ ಇದೆ?

* ಮರು ಸೋಂಕು ಪ್ರಕರಣಗಳು ಎಷ್ಟು ಗಂಭೀರವಾಗಿರುತ್ತವೆ?

* ವ್ಯಕ್ತಿಯೊಬ್ಬನ ರೋಗ ನಿರೋಧಕ ಶಕ್ತಿಯನ್ನು ಪರಿಗಣಿಸಿದಾಗ ಮರು ಸೋಂಕಿನ ಅರ್ಥವೇನು?

* ವ್ಯಕ್ತಿಯೊಬ್ಬ ಮರು ಸೋಂಕಿಗೆ ಒಳಗಾದ ನಂತರ ಆತ ಕೋವಿಡ್-19 ಹರಡಲು ಸಮರ್ಥನಾಗಿರುತ್ತಾನೆಯೆ?

ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!

ರೂಪಾಂತರಿ ವೈರಸ್‍

ಏಮ್ಸ್ ಅಧ್ಯಯನಗಳ ಪ್ರಕಾರ, ಡೆಲ್ಟಾ ರೂಪಾಂತರಿ ವೈರಸ್‍ನೊಂದಿಗೆ ಶುರುವಾಗಿದ್ದ ಎರಡನೇ ಅಲೆಯಲ್ಲಿ ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಲಾಗಿರುವ ಕೋವ್ಯಾಕ್ಸಿನ್ ಲಸಿಕೆ ಪಡೆದಿರುವ ಭಾರತೀಯ ಆರೋಗ್ಯಸೇವಾ ಕಾರ್ಯಕರ್ತರು ಮರು ಸೋಂಕಿಗೆ ಒಳಗಾಗದಂಥ ಶೇ. 86ರಷ್ಟು ಸಾಮರ್ಥ್ಯವನ್ನು ಈ ಲಸಿಕೆ ಪ್ರದರ್ಶಿಸಿದೆ. ಈ ಅಧ್ಯಯನ ವರದಿಯನ್ನು ಜಾಮಾ ನೆಟ್‌ವರ್ಕ್‌ ಓಪನ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಮತ್ತೊಂದು ರಾಷ್ಟ್ರೀಯ ಕೇಂದ್ರವಾಗಿರುವ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರವು ಈ ಮೊದಲೇ ಕೋವಿಡ್-19 ಸೋಂಕಿಗೆ ಒಳಗಾಗಿರುವ ರೋಗಿಗಳಲ್ಲಿ ಮರು ಸೋಂಕು ಹಾಗೂ ರೋಗ ಲಕ್ಷಣಗಳಿರುವ ರೋಗಕ್ಕೆ ತುತ್ತಾಗುವುದರಿಂದ ಹೆಚ್ಚು ಸುರಕ್ಷಿತರಾಗಿರುತ್ತಾರೆ.

ಈ ಸುರಕ್ಷತೆಯು ದಿನಗಳೆದಂತೆ ವೃದ್ಧಿಸುತ್ತಲೇ ಹೋಗುತ್ತದೆ. ವೈರಸ್‍ನ ದುರ್ಬಲತೆ ಅಥವಾ ರೋಗನಿರೋಧಕ ವ್ಯವಸ್ಥೆಯ ಪ್ರತಿರೋಧ ಕ್ರಿಯೆ ನಡೆಯುತ್ತಲೇ ಇರುವುದರಿಂದ ಈ ರೋಗ ನಿರೋಧಕ ಶಕ್ತಿ 90 ದಿನಗಳ ನಂತರವೂ ಮುಂದುವರಿಯಬಹುದು ಹಾಗೂ ನಿಜವಾದ ಮರು ಸೋಂಕಿಗೆ ಅವಕಾಶ ನೀಡುವುದಿಲ್ಲ.

ರೋಗ ನಿರೋಧಕ ಶಕ್ತಿ

ಲಸಿಕೆ ಪೂರೈಕೆ ನಿಯಂತ್ರಿತಗೊಂಡಿರುವುದರಿಂದ ಈಗಾಗಲೇ ಕೋವಿಡ್-19 ಸೋಂಕಿಗೆ ಒಳಗಾಗಿರುವ ಹಿನ್ನೆಲೆ ಹೊಂದಿರುವ ರೋಗಿಗಳು ಮುಂಚಿತವಾಗಿಯೇ ಲಸಿಕೆ ಪಡೆಯುವುದನ್ನು ನಿಧಾನಗೊಳಿಸಿರುತ್ತಾರೆ. ಇದರಿಂದ ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ರೂಪಾಂತರಿ ವೈರಸ್‍ಗಳು ಲಸಿಕೆಗೆ ಪ್ರವೇಶ ಪಡೆಯುವುದರಿಂದ ಅವುಗಳ ಹರಡುವಿಕೆ ನಿಧಾನಗೊಳ್ಳುತ್ತದೆ ಎಂದು ನವೆಂಬರ್ 2021ರಲ್ಲಿ ನಡೆದಿರುವ ಅಧ್ಯಯನದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Vitamin D ಸಪ್ಲಿಮೆಂಟ್ಸ್‌ ತೆಗೆದುಕೊಳ್ತಿದ್ರೆ ಹುಷಾರಾಗಿರಿ... ಯಾಕೆ ಅಂತಾ ಈ ಸ್ಟೋರಿ ಓದಿ..!

ಈ ಕುರಿತು ಪ್ರತಿಕ್ರಿಯಿಸಿರುವ ಗುರ್ಗಾಂವ್‍ನ ಪಾರಸ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಮಾಲೋಚಕ ಡಾ. ಅರುಣೇಶ್ ಕುಮಾರ್, “ಎಲ್ಲ ವೈರಸ್‍ಗಳಂತೆಯೆ SARS COV-2 ಕೂಡಾ ರೂಪಾಂತರಿ ವೈರಸ್. ರೂಪಾಂತರವೆಂದರೆ, ತಮ್ಮ ಅನುವಂಶಿಕತೆಯನ್ನು ಬದಲಿಸಿಕೊಳ್ಳುವುದು. ಇದು ಮುಖ್ಯವಾಗಿ ವೈರಸ್‍ನ ಜೀವಕೋಶದಲ್ಲಿ ನಡೆಯುತ್ತದೆ.

ಅದು ಯಾವಾಗ ತನ್ನ ಜೀವಕೋಶವನ್ನೇ ರೂಪಾಂತರಿಸಿಕೊಳ್ಳುತ್ತದೆ ಆಗ ಹೊಸ ವೈರಸ್‍ನಂತೆಯೇ ವರ್ತಿಸತೊಡಗುತ್ತದೆ. ಹೀಗಾಗಿಯೇ ಈ ಮುಂಚೆಯೇ ಸೋಂಕಿಗೆ ಒಳಗಾಗಿರುವ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ಅವನ್ನು ಹಳೆಯ ಕೋವಿಡ್-19 ವೈರಸ್ ಎಂದು ಗುರುತಿಸುವಲ್ಲಿ ವಿಫಲವಾಗುತ್ತವೆ” ಎನ್ನುತ್ತಾರೆ.
Published by:vanithasanjevani vanithasanjevani
First published: