ಕೊವಿಡ್ ಲಸಿಕೆ ಹೇಗೆ ಕೆಲಸ ಮಾಡುತ್ತೆ? ಬೆಂಗಳೂರಿನ IISC ಸಂಶೋಧಕರಿಂದ ಗಣಿತದ ಮಾಡೆಲ್ ಅಭಿವೃದ್ಧಿ!

ಕೋವಿಡ್-19 ವಿರುದ್ಧ ನೀಡಲಾಗುವ ಲಸಿಕೆಯಿಂದ ಉತ್ಪತ್ತಿಯಾದ ಸುಮಾರು 80 ವಿವಿಧ ಬಗೆಯ ತಟಸ್ಥಗೊಳಿಸುವ ಆಂಟಿಬಾಡಿಗಳ ವಿಶ್ಲೇಷಣೆ ನಡೆಸಿದ್ದಾರೆ.

IISc ಬೆಂಗಳೂರು

IISc ಬೆಂಗಳೂರು

  • Share this:
ಈಗಾಗಲೇ ಕೊರೋನಾ ಮೂರನೇ ಅಲೆಯ (Covid 3rd Wave) ತೀವ್ರತೆ ಬಹುತೇಕ ನಿಂತೇ ಹೋಗಿದೆ. ಆದಾಗ್ಯೂ ಎರಡನೇ ಅಲೆಯ ನಂತರ ಮೂರನೇ ಅಲೆಯ ಸುಳಿವು ದೊರೆತಾಗ ಎಲ್ಲೆಡೆಯೂ ಆತಂಕದ ಛಾಯೆ ಮನೆ ಮಾಡಿತ್ತು, ಕಾರಣ ಮೂರನೇ ಅಲೆಯ ತೀವ್ರತೆ ಹಾಗೂ ಅದು ಮನುಕುಲಕ್ಕೆ ಮಾಡಬಹುದಾದ ಭೀಕರ ಪ್ರಹಾರ. ಕೋವಿಡ್-19 ವಿರುದ್ಧ ನೀಡಲಾದ ಲಸಿಕೆಯಲ್ಲಿರುವ ಆಂಟಿಬಾಡಿಗಳು (ಪ್ರತಿರೋಧಕ ತತ್ವಗಳು) ಯಾವ ರೀತಿ ರಕ್ಷಣೆ ನೀಡುತ್ತವೆ ಎಂಬುದನ್ನು ತಿಳಿಸುವ ಅಧ್ಯಯನವೊಂದು ಹೊರಬಿದ್ದಿದೆ. ಭಾರತದ ಬೆಂಗಳೂರು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC Bengaluru) ಹಾಗೂ ಆಸ್ಟ್ರೇಲಿಯಾ ಮೂಲದ ಕ್ವೀನ್ಸ್ ಲ್ಯಾಂಡ್ ಬ್ರೈನ್ ಇನ್ಸ್ಟಿಟ್ಯೂಟ್ ಸಮಗ್ರವಾಗಿ ಅಧ್ಯಯನ ಮಾಡಿ ಗಣಿತದ ಮಾದರಿಯೊಂದನ್ನು  ಅಭಿವೃದ್ಧಿಪಡಿಸಿವೆ.

ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕೆ (Covid Vaccine) ತೆಗೆದುಕೊಳ್ಳುವಿಕೆ ತೀವ್ರವಾದ ಗತಿ ಪಡೆದು ಬಹಳಷ್ಟು ಜನರು ಲಸಿಕೆ ಪಡೆದರು. ತದನಂತರ ಅಪ್ಪಳಿಸಿದ ಮೂರನೇ ಅಲೆ ಈ ಹಿಂದೆ ಅಂದುಕೊಂಡಂತೆ ಯಾವುದೇ ರೀತಿಯ ಪರಿಣಾಮ ಉಂಟು ಮಾಡಲೆ ಇಲ್ಲ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.

ಕುತೂಹಲ ಪ್ರಶ್ನೆ ಬೆನ್ನತ್ತಿ ಹೊರಟಾಗ..
ಈ ಎಲ್ಲ ಬೆಳವಣಿಗೆಗೆ ಅಂದರೆ ಮೂರನೇ ಅಲೆಯು ಘಾತಕವಾಗದಿರಲು ಮುಖ್ಯ ಕಾರಣ ಲಸಿಕೆ ನೀಡಿದ ಸುರಕ್ಷತೆ ಎಂದೇ ಎಲ್ಲೆಡೆ ವಿವರಿಸಲಾಗಿದೆ. ಈಗಾಗಲೇ ರುಜುವಾತಾಗಿರುವಂತೆ ಕೆಲವು ಲಸಿಕೆಗಳು ಉಚ್ಛ ಮಟ್ಟದ ಸುರಕ್ಷತೆಯನ್ನು ಒದಗಿಸುತ್ತವೆ. ಏನಿಲ್ಲವೆಂದರೂ ಅವು ಸೋಂಕಿನ ಶೇ. 95ರಷ್ಟು ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತವೆ ಎನ್ನಲಾಗಿದೆ. ಇದು ಕ್ಲಿನಿಕಲ್ ಟ್ರಯಲ್ ಗಳಲ್ಲಿ ಕಂಡುಬಂದಿತ್ತು. ಆದರೆ, ಇಲ್ಲಿ ಇದರ ರಕ್ಷಣೆಯ ವ್ಯಾಪ್ತಿಯನ್ನು ಯಾವುದು ಅಥವಾ ಯಾವ ಅಂಶ ನಿರ್ಧರಿಸುತ್ತದೆ ಎಂಬ ಕುತೂಹಲಕರ ಪ್ರಶ್ನೆ ಮನದಲ್ಲಿ ಮೂಡದೆ ಇರಲಾರದು.

ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಬೆಂಗಳೂರು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಹಾಗೂ ಆಸ್ಟ್ರೇಲಿಯಾ ಮೂಲದ ಕ್ವೀನ್ಸ್ ಲ್ಯಾಂಡ್ ಬ್ರೈನ್ ಇನ್ಸ್ಟಿಟ್ಯೂಟ್ ಸಮಗ್ರವಾಗಿ ಅಧ್ಯಯನ ಮಾಡಿ ಗಣಿತದ ಮಾದರಿಯೊಂದನ್ನು (ಮಾಡೆಲ್) ಅಭಿವೃದ್ಧಿಪಡಿಸಿದ್ದು ಅದರ ಮೂಲಕ ಕೋವಿಡ್-19 ವಿರುದ್ಧ ನೀಡಲಾದ ಲಸಿಕೆಯಲ್ಲಿರುವ ಆಂಟಿಬಾಡಿಗಳು (ಪ್ರತಿರೋಧಕ ತತ್ವಗಳು) ಯಾವ ರೀತಿ ರಕ್ಷಣೆ ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಪ್ರಯತ್ನಿಸಲಾಗಿದೆ. ಈ ಅಧ್ಯಯನವಾನ್ನು 'ನೇಚರ್ ಕಂಪ್ಯೂಟೇಶನಲ್ ಸೈನ್ಸ್' ನಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನದಲ್ಲಿ ಕಂಡುಬಂದಿದ್ದೇನು?
ಅಧ್ಯಯನದ ಪ್ರಕಾರ, ಮೊದಲಿಗೆ ಸಂಶೋಧಕರು ಕೋವಿಡ್-19 ವಿರುದ್ಧ ನೀಡಲಾಗುವ ಲಸಿಕೆಯಿಂದ ಉತ್ಪತ್ತಿಯಾದ ಸುಮಾರು 80 ವಿವಿಧ ಬಗೆಯ ತಟಸ್ಥಗೊಳಿಸುವ ಆಂಟಿಬಾಡಿಗಳ ವಿಶ್ಲೇಷಣೆ ನಡೆಸಿದ್ದಾರೆ. ಈ ಆಂಟಿಬಾಡಿಗಳು ಸಾಮಾನ್ಯವಾಗಿ ವೈರಾಣುಗಳು ಬರದಂತೆ ತಡೆಗಟ್ಟುತ್ತವೆ ಮತ್ತು ತಿಂಗಳುಗಳ ಕಾಲ ಉಪಸ್ಥಿತವಿರುತ್ತದೆ ಎಂದು ಹೇಳಲಾಗಿದೆ.

ತದನಂತರ ಸಂಶೋಧನಾ ತಂಡವು ವರ್ಚ್ಯೂವಲ್ ಆಗಿ ವಿವಿಧ ಬಗೆಯ ಆಂಟಿಬಾಡಿಗಳನ್ನು ಹೊಂದಿರುವ 3,500 ಜನರಲ್ಲಿ ಸೋಂಕಿನ ಲಕ್ಷಣಗಳಿರುವಂತೆ ಮಾಡಿ ಅಧ್ಯಯನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಷ್ಟು ಜನರಲ್ಲಿ ಯಾವ ಯಾವ ಆಂಟಿಬಾಡಿಗಳಿರುವ ವಿವಿಧ ಜನರು ಲಸಿಕೆ ಪಡೆದಾಗ ಸೋಂಕಿನೊಂದಿಗೆ ಹೋರಾಡುವಲ್ಲಿ ಹೇಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಲೆಕ್ಕಾಚಾರ ಮಾಡುವ ಮೂಲಕ ಗಣಿತದ ಮಾಡೆಲ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಪ್ರತಿಯೊಂದೂ ದೇಹದಲ್ಲಿ ವೈರಾಣು ಬೆಳವಣಿಗೆ ವಿಭಿನ್ನ
"ಲಸಿಕೆಯ ಪರಿಣಾಮಕಾರಿತ್ವವನ್ನು ಊಹಿಸಲು ಕಷ್ಟಕರವಾಗಿದ್ದು ಇದಕ್ಕೆ ಕಾರಣವೆಂದರೆ ಇದು ಒಳಗೊಂಡಿರುವ ಪ್ರಕ್ರಿಯೆಗಳು ಸಂಕೀರ್ಣವಾಗಿವೆ ಮತ್ತು ಅನೇಕ ಅಂತರ್ಸಂಪರ್ಕಿತ ಹಂತಗಳಲ್ಲಿ ಇವು ಕಾರ್ಯನಿರ್ವಹಿಸುತ್ತವೆ. ಲಸಿಕೆಗಳು ಹಲವಾರು ವಿಭಿನ್ನ ಪ್ರತಿಕಾಯಗಳನ್ನು ಪ್ರಚೋದಿಸುತ್ತವೆ, ಪ್ರತಿಯೊಂದೂ ದೇಹದಲ್ಲಿ ವೈರಾಣು ಬೆಳವಣಿಗೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ.

ಇದರ ಪರಿಣಾಮದಿಂದಾಗಿ, ಸೋಂಕಿನ ಡೈನಾಮಿಕ್ಸ್ ಮತ್ತು ಅದಕ್ಕೆ ಸಂಬಂಧಿತ ರೋಗಲಕ್ಷಣಗಳ ತೀವ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ವಿಭಿನ್ನ ವ್ಯಕ್ತಿಗಳು ವಿಭಿನ್ನ ಪ್ರತಿಕಾಯಗಳ ಸಂಗ್ರಹಗಳನ್ನು ವಿಭಿನ್ನ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ, ” ಈ ಅಧ್ಯಯನದ ಹಿರಿಯ ಲೇಖಕ ಹಾಗೂ ಐಐಎಸ್ಸಿ ಸಂಸ್ಥೆಯ ರಾಸಾಯನಿಕ ಇಂಜಿನಿರಿಂಗ್ ವಿಭಾಗದ ಪ್ರೊಫೆಸರ್ ಆಗಿರುವ ನರೇಂದ್ರ ದೀಕ್ಷಿತ್ ಹೇಳುತ್ತಾರೆ.

ಇದನ್ನೂ ಓದಿ: Covid 19: ಕೊರೊನಾ ವಿರುದ್ಧ ಹೋರಾಡಲು ಹೊಸ ಆಂಟಿವೈರಲ್, IISc ಬೆಂಗಳೂರು ವಿಜ್ಞಾನಿಗಳಿಂದ ಸಂಶೋಧನೆ

ಈ ಅಧ್ಯಯನದ ಮೊದಲ ಲೇಖಕರು ಹಾಗೂ ಕ್ವೀನ್ ಬ್ರೈನ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಸಂಶೋಧನಾ ಅಭ್ಯರ್ಥಿಯೂ ಆಗಿರುವ ಪ್ರಾಣೇಶ್ ಪದ್ಮನಾಭನ್ ಅವರು ಹೇಳುತಾರೆ,

"ಪ್ರತಿಕಾಯ ಪ್ರತಿಕ್ರಿಯೆಗಳ ಈ ವೈವಿಧ್ಯತೆಯನ್ನು ಗ್ರಹಿಸುವುದು ಮತ್ತು ಪ್ರಮಾಣೀಕರಿಸುವುದು ಒಂದು ಸವಾಲಿನಂತಿತ್ತು" ಎಂದು.

ಈ ಗಣಿತದ ಮಾದರಿಯಿಂದ ಪ್ರಯೋಜನವಿದೆಯೇ?
ತಂಡವು ಅಭಿವೃದ್ಧಿಪಡಿಸಿದ ಮಾದರಿಯು ವ್ಯಕ್ತಿಯ ಹೊಂದಿರುವ ಪ್ರತಿಕಾಯದ 'ಪ್ರೊಫೈಲ್' ಆಧಾರದ ಮೇಲೆ ವ್ಯಾಕ್ಸಿನೇಷನ್ ನಂತರ ಪಡೆಯುವ ರಕ್ಷಣೆಯ ಮಟ್ಟವನ್ನು ಊಹಿಸಲು ಸಾಧ್ಯವಾಗಿದ್ದು ಈ ಫಲಿತಾಂಶವು ಎಲ್ಲಾ ಪ್ರಮುಖ ಅನುಮೋದಿತ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳಲ್ಲಿ ವರದಿ ಮಾಡಲಾದ ಪರಿಣಾಮಕಾರಿತ್ವಕ್ಕೆ ನಿಕಟವಾಗಿ ಹೊಂದಿರುವುದು ಕಂಡುಬಂದಿದೆ.

ಆಂಟಿಬಾಡಿ ನ್ಯೂಟ್ರಾಲೈಸೇಶನ್ ಟೈಟ್ರೆ ಎಂದು ಕರೆಯಲ್ಪಡುವ ಸುಲಭವಾಗಿ ಅಳೆಯಬಹುದಾದ ಮೆಟ್ರಿಕ್‌ಗೆ ಲಸಿಕೆ ಪರಿಣಾಮಕಾರಿತ್ವ ಪ್ರಕ್ರಿಯೆಗೆ ಇದನ್ನು ಲಿಂಕ್ ಮಾಡಬಹುದಾದ ಸಾಧಾಸಾಧ್ಯತೆಯನ್ನು ಸಂಶೋಧಕರು ಗಮನಿಸಿದ್ದು ಈ ಮೂಲಕ ಭವಿಷ್ಯದಲ್ಲಿನ ಲಸಿಕೆಗಳಿಗೆ ವಿಸ್ತಾರವಾದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸುವ ಮೊದಲು ಅವುಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಈ ಮಾದರಿಗಳು ಸಹಾಯ ಮಾಡಲಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Good News: ಈ ಆಹಾರ ತಿಂದ್ರೆ ನಿಮ್ಮ ಆಯಸ್ಸು ಮಿನಿಮಮ್ 10 ವರ್ಷ ಹೆಚ್ಚಾಗುತ್ತಂತೆ!

ಆದಾಗ್ಯೂ, ಮೂಲತಃ SARS-CoV-2 ಸ್ಟ್ರೈನ್‌ನಲ್ಲಿ ಕೆಲಸ ಮಾಡಲು ವಿನ್ಯಾಸಗೊಳಿಸಲಾದ ಪ್ರಸ್ತುತ ಲಸಿಕೆಗಳನ್ನು ಮಾತ್ರವೇ ಬಳಸಿ ಅದರ ಫಲಿತಾಂಶ ಆಧರಿಸಿ ಅಧ್ಯಯನವನ್ನು ಮಾಡಲಾಗಿದೆ ಎಂದು ಹೇಳಿರುವ ಪ್ರೊ. ಹೀಗೆ ನುಡಿಯುತ್ತಾರೆ "ನಮ್ಮ ಔಪಚಾರಿಕತೆಯನ್ನು ಒಮಿಕ್ರಾನ್ ಸೇರಿದಂತೆ ಹೊಸ ರೂಪಾಂತರಗಳಿಗೆ ಇನ್ನೂ ಅನ್ವಯಿಸಲಾಗಿಲ್ಲ, ಅಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯ ಇತರ ಅಂಶಗಳಿದ್ದು ಇದನ್ನು ಪರಿಹರಿಸಲು ಅಧ್ಯಯನಗಳು ನಡೆಯುತ್ತಿವೆ, ”ಎಂದು.
Published by:guruganesh bhat
First published: