Coronavirus Effect: ವಿಶ್ವದಲ್ಲಿ ಹೆಚ್ಚಾಗುತ್ತಿದೆ ಡೇಟಿಂಗ್ ಆ್ಯಪ್ ಬಳಕೆದಾರರ ಸಂಖ್ಯೆ

Dating Apps: ಕ್ಯಾರೆಂಟೈನ್‌ ಮತ್ತು ಸಾಮಾಜಿಕ ಅಂತರ ರೋಮ್ಯಾಂಟಿಕ್ ಆಗಿ ಕಾಣುವುದಿಲ್ಲ. ಆದರೆ ಕೆಲವು ಮಾಹಿತಿಗಳ ಪ್ರಕಾರ ಕೆಲವು ಜನರು ಮೊದಲಿಗಿಂತ ಹೆಚ್ಚು ಡೇಟಿಂಗ್ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ವೈರಸ್ ಕಳೆದು 1  ವರ್ಷಗಳಿಂದ ವಿಶ್ವವನ್ನೇ ಬದಲಾಯಿಸಿದೆ. ಜನರ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು ಸುಳ್ಳಲ್ಲ. ಹಾಗೆಯೆ ಈ ವೈರಸ್ ಡೇಟಿಂಗ್ ಜಗತ್ತನ್ನು ಸಹ ತಲೆಕೆಳಗಾಗಿ ಮಾಡಿದೆ. ಮಾಸ್ಕ್ ಮತ್ತು ವರ್ಚುವಲ್ ಜಗತ್ತಾಗಿ ಮಾರ್ಪಾಡಾಗಿದೆ. ಯಾವುದೇ ದೈಹಿಕ ಸ್ಪರ್ಶ, ಅಪ್ಪುಗೆಗೆ ಕೂಡ ಮೊದಲು ಸಂಭಾಷಣೆಯ ಅಗತ್ಯವಾಗಿದೆ. ಕೊರೊನಾ ಎಲ್ಲವನ್ನು ಬದಲಾಯಿಸಿದೆ. ಇದು ಬಹಳ ಕಷ್ಟದ ಕೆಲಸವಾಗಿತ್ತು, ಆದರೆ ಆ ಕೊರೊನಾ ಸಮಯದಲ್ಲಿ ಹಲವು ನಿಯಮಗಳು ಪ್ರೀತಿಯನ್ನು ಹುಡುಕುವ ಹೊಸ ಚೌಕಟ್ಟನ್ನು ಒದಗಿಸಿವೆ.

ಕ್ಯಾರೆಂಟೈನ್‌ ಮತ್ತು ಸಾಮಾಜಿಕ ಅಂತರ ರೋಮ್ಯಾಂಟಿಕ್ ಆಗಿ ಕಾಣುವುದಿಲ್ಲ. ಆದರೆ ಕೆಲವು ಮಾಹಿತಿಗಳ ಪ್ರಕಾರ ಕೆಲವು ಜನರು ಮೊದಲಿಗಿಂತ ಹೆಚ್ಚು ಡೇಟಿಂಗ್ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಟಿಂಡರ್ ಕಳೆದ ವರ್ಷ ಅತಿ ಹೆಚ್ಚು ಸ್ವೈಪಿಂಗ್ ಅನ್ನು ಒಂದೇ ದಿನ ದಾಖಲಿಸಿದ್ದು, ಬಂಬಲ್ ಆ್ಯಪ್ 100 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿದೆ. ಹಿಂಜ್ ನಂತಹ ಕೆಲವು ಆಪ್‌ಗಳು ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸಲು ಜನರಿಗೆ ಸಹಾಯ ಮಾಡಲು ಅಪ್ಲಿಕೇಶನ್‌ನಲ್ಲಿನ ವಿಡಿಯೋ ಚಾಟಿಂಗ್‌ನಂತಹ ಅವಕಾಶಗಳನ್ನು ನೀಡುತ್ತಿದೆ.

ಜೈವಿಕ ಮಾನವಶಾಸ್ತ್ರಜ್ಞೆ ಮತ್ತು ಮ್ಯಾಚ್ ಡಾಟ್ ಕಾಮ್‌ನ ಮುಖ್ಯ ವಿಜ್ಞಾನ ಸಲಹೆಗಾರ್ತಿಯಾಗಿರುವ ಡಾ. ಹೆಲೆನ್ ಫಿಶರ್, 40 ವರ್ಷಗಳಿಂದ ಪ್ರೀತಿ ಮತ್ತು ಸಂಬಂಧಗಳನ್ನು ಅಧ್ಯಯನ ಮಾಡಿದ್ದಾರೆ ಅವರ ಪ್ರಕಾರ ಈ ಕೊರೊನಾ ವೈರಸ್ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗ್ರಾಹಕರ ಊಟ ಕದಿಯುತ್ತಿರುವ ಡೆಲಿವರು ಬಾಯ್ ..! ವಿಡಿಯೋ ಕಂಡು ನೆಟ್ಟಿಗರು ಶಾಕ್..

ಈ ಕೊರೊನಾ ಸಮಯದಲ್ಲಿ ಜನರು ಒಬ್ಬರಿಗೊಬ್ಬರು ಹೆಚ್ಚು ಮಾತನಾಡಲು ಸಾಧ್ಯವಾಗಿದೆ. ಎಲ್ಲಾ ಡೇಟಿಂಗ್ ಸೈಟ್‌ಗಳಲ್ಲಿ, ಹೆಚ್ಚು ಅರ್ಥಪೂರ್ಣ ಸಂಭಾಷಣೆಗಳು ನಡೆದಿವೆ. ಅಲ್ಲದೇ ಒಬ್ಬರನೊಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳಲು ಸಮಯ ಲಭಿಸಿದೆ. ಅಲ್ಲದೇ ಅನ್ಯೂನ್ಯತೆ, ಹಣದ ವಿಚಾರ ಮತ್ತು ಲೈಂಗಿಕತೆಯ ಬಗ್ಗೆ ಆತಂಕ ಕಡಿಮೆಯಾಗಿದೆ.

ಕೊರೊನಾ ಸಮಯದಲ್ಲಿ ನೀವು ಹೇಗೆ ಸಂಪರ್ಕವನ್ನು ಮಾಡಲು ಪ್ರಯತ್ನಿಸುತ್ತಿದ್ದರೂ ಸಹ ಡೇಟಿಂಗ್ ಮಾತ್ರ ಉತ್ತಮಗೊಳ್ಳುತ್ತಿದೆ ಎಂದು ಫಿಶರ್ ಹೇಳಿದ್ದಾರೆ.

ರೋಮ್ಯಾಂಟಿಕ್ ಪ್ರೀತಿಯು ಅತ್ಯಂತ ಶಕ್ತಿಯುತವಾದ ಮಾನವ ಮೆದುಳಿನ ವ್ಯವಸ್ಥೆಯಾಗಿದೆ. ಇದು ಲಕ್ಷಾಂತರ ವರ್ಷಗಳ ಹಿಂದೆ ವಿಕಸನಗೊಂಡಿತು. ಆದರೆ ಈಗ ಬಹುಪಾಲು ಜನರು ಮನೆಯಲ್ಲೇ ಸಿಲುಕಿಕೊಂಡಿದ್ದಾರೆ. ಅವರಿಗೆ ಸಧ್ಯದ ಉತ್ತಮ ಮಾರ್ಗ ಈ ವೀಡಿಯೋ ಚಾಟಿಂಗ್. ನೀವು ಯಾರನ್ನಾದರೂ ವೀಡಿಯೊ ಚಾಟಿಂಗ್ ಮೂಲಕ ತಿಳಿದುಕೊಳ್ಳಬಹುದು. ಅವರು ನಗುವನ್ನು ನೀವು ನೋಡಬಹುದು. ನೀವು ಅವರ ಹಿನ್ನೆಲೆಯನ್ನು ತಿಳಿದುಕೊಳ್ಳಬಹುದು. ನೀವು ಅವರೊಂದಿಗೆ ಹೆಚ್ಚು ಕಾಲ ಮಾತನಾಡಬಹುದು. ಈ ಕಾರಣದಿಂದ ನೀವು ನಿಮ್ಮವರ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ, ಇದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: