ಚಿಕ್ಕೋಡಿ: ಎರಡು ತಿಂಗಳ ಬಾಡಿಗೆ ನೀಡದಿದ್ದಕ್ಕೆ ಬಾಡಿಗೆದಾರನ ಮೇಲೆ ಗುಂಡು ಹಾರಿಸಿದ ಮನೆ ಮಾಲೀಕ

ಹೌದು, ಮನೆ ಮಾಲೀಕ ನೂರ್​​ ಮಹಮ್ಮದ್​ ಎಂಬಾತ ತನ್ನ ಡಬಲ್​ ಬ್ಯಾರಲ್​​​ ಬಂದೂಕಿನಿಂದ ಗುಂಡು ಹಾರಿಸಿದಾತ. ಎರಡು ತಿಂಗಳು ಬಾಡಿಗೆ ಕಟ್ಟದಿದ್ದಕ್ಕೆ ಬಾಡಿಗೆದಾರ ದೀಕ್ಷಿತ್​​ ಮತ್ತವರ ಕುಟುಂಬದ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಹಾಕಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಜೂ.14): ಕೊರೋನಾ ಲಾಕ್​ಡೌನ್​​ ಸಂದರ್ಭದಲ್ಲಿ ಎರಡು ತಿಂಗಳ ಬಾಡಿಗೆ ನೀಡದಿದ್ದಕ್ಕೆ ಬಾಡಿಗೆದಾರರ ಮೇಲೆ ಮಾಲೀಕನೋರ್ವ ಗುಂಡು ಹಾರಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ಹೌದು, ಮನೆ ಮಾಲೀಕ ನೂರ್​​ ಮಹಮ್ಮದ್​ ಎಂಬಾತ ತನ್ನ ಡಬಲ್​ ಬ್ಯಾರಲ್​​​ ಬಂದೂಕಿನಿಂದ ಗುಂಡು ಹಾರಿಸಿದಾತ.  ಎರಡು ತಿಂಗಳು ಬಾಡಿಗೆ ಕಟ್ಟದಿದ್ದಕ್ಕೆ ಬಾಡಿಗೆದಾರ ದೀಕ್ಷಿತ್​​ ಮತ್ತವರ ಕುಟುಂಬದ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಹಾಕಿದ್ದಾನೆ.

ಕಳೆದ 7 ತಿಂಗಳಿನಿಂದ ದೀಕ್ಷಿತ್ ಕುಟುಂಬ​ ನೂರ್​ ಮಹಮ್ಮದ್​​ ಮನೆಯಲ್ಲಿ ಬಾಡಿಗೆಗೆ ಇದ್ದರು.  ಲಾಕ್​ಡೌನ್​​ ಕಾರಣದಿಂದ ದುಡ್ಡಿಲ್ಲದೇ ಬಾಡಿಗೆ ಕಟ್ಟದಿದ್ದಕ್ಕೆ ದೀಕ್ಷಿತ್​​ ಮನೆಗೆ ನೀರು ಮತ್ತು ವಿದ್ಯುತ್​​ ಎರಡು ಕಟ್​​ ಮಾಡಿದ್ದರು ನೂರ್​​.

ಇದನ್ನೂ ಓದಿ: ‘ಕೋವಿಡ್​​-19 ನಿಯಂತ್ರಣದಲ್ಲಿ ಕರ್ನಾಟಕದ ಸಾಧನೆ ಶ್ಲಾಘನೀಯ‘ - ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ

ಇಂದು ಬಾಡಿಗೆ ಕೊಡಬೇಕು, ಇಲ್ಲದೇ ಹೋದಲ್ಲಿ ಮನೆ ಖಾಲಿ ಮಾಡಬೇಕು ಎಂದು ದೀಕ್ಷಿತ್​ ಕುಟುಂಬ ಮೇಲೆ ನೂರ್​​​ ಮಹಮ್ಮದ್​ ಗಲಾಟೆ ಮಾಡಿದ್ದಾರೆ. ಗಲಾಟೆ ಇಬ್ಬರ ನಡುವೆ ತೀವ್ರ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ನೂರ್​​ ಗುಂಡು ಹಾರಿಸಿ ದರ್ಪ ತೋರಿದ್ಧಾನೆ.

ಇನ್ನು, ಜೀವಕ್ಕೆ ಹೆದರಿ ದೀಕ್ಷಿತ್​​​​ ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಈ ದೂರಿನ ಆಧಾರದ ಮೇರೆಗೆ ಪೊಲೀಸರು ಮಾಲೀಕ ನೂರ್​ ಮಹಮ್ಮದ್​ನನ್ನು ಬಂಧಿಸಿದ್ಧಾರೆ.
First published: