ಐಟಿ ಕಂಪನಿಗಳ ವರ್ಕ್​ ಫ್ರಂ ಹೋಮ್​ ಎಫೆಕ್ಟ್​​: ಆರ್ಡರ್​​ ಇಲ್ಲದೇ ಕಂಗಾಲಾದ ಕೇಟರ್ಸ್​

ಐಟಿ ಕಂಪನಿ‌ ಆರಂಭವಾಗುವುದನ್ನೇ ಕಾಯುತ್ತಿರುವ ಕೇಟರ್ಸ್,​​ ಮೂರು ತಿಂಗಳಿನಿಂದ ಆರ್ಡರ್ ಇಲ್ಲದೆ  ಸಂಕಷ್ಟಕರ ಜೀವನ ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಇಲ್ಲವೇ ಡಿಸೆಂಬರ್​​ನಲ್ಲಿ ಐಟಿ ಕಂಪನಿಗಳು ತೆರೆಯಲಿವೆ. ಇದರಿಂದ ಇನ್ನು ಆರು ತಿಂಗಳು ಕೇಟರಿಂಗ್ ಆರ್ಡರ್ ಸಿಗೋದು ಡೌಟ್. ಅಲ್ಲಿಯವರೆಗೆ ಐಟಿ ಕಂಪನಿ ಕೇಟರಿಂಗ್ ನಂಬಿದವರಿಗೆ ಸಂಕಷ್ಟ ಮುಂದುವರಿಯಲಿದೆ.

news18-kannada
Updated:June 30, 2020, 8:40 AM IST
ಐಟಿ ಕಂಪನಿಗಳ ವರ್ಕ್​ ಫ್ರಂ ಹೋಮ್​ ಎಫೆಕ್ಟ್​​: ಆರ್ಡರ್​​ ಇಲ್ಲದೇ ಕಂಗಾಲಾದ ಕೇಟರ್ಸ್​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ.30): ಕೊರೋನಾ ಸೋಂಕು ಹೆಚ್ಚಳದಿಂದಾಗಿ ಲಾಕ್ ಡೌನ್ ಇಡೀ ಜನ ಜೀವನವನ್ನೇ ಬದಲಿಸಬಿಟ್ಟಿದೆ. ಐಟಿ ಕಂಪನಿಗಳು ವರ್ಕ್ ಫ್ರಂ ಹೋಂನ್ನೇ ನೆಚ್ಚಿಕೊಂಡಿವೆ. ಇದರ ನೇರ ಪರಿಣಾಮ ಬೀರಿರುವುದು ಬೆಂಗಳೂರಿನಲ್ಲಿ ಹೋಟೆಲ್ ಕೇಟರ್ಸ್ ಗಳಿಗೆ! ಕಳೆದೆರಡು ತಿಂಗಳ ಲಾಕ್ ಡೌನ್‌ ನಿಂದ ಸಂಕಷ್ಟದಲ್ಲಿರುವ ಕೇಟರ್ಸ್ ಇದೀಗ ಬರುವ ಡಿಸೆಂಬರ್ ವರೆಗೂ ಐಟಿ ಕಂಪನಿ‌ ಕಚೇರಿಯೋದು ಡೌಟು ಇರುವುದರಿಂದ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗಿದೆ.

ದಿನೇ ದಿನೇ ಕೊರೋನಾ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇದರ ಸಂಖ್ಯೆ ಒಂದು ದಿನಕ್ಕೆ ಸಾವಿರದ ಗಡಿ ಸಮೀಪಿಸುತ್ತಿದೆ. ಈ ಮೂಲಕ ಸಮುದಾಯಕ್ಕೆ ಸೋಂಕು ಹಬ್ಬಿದೆಯಾ ಎಂಬ ಆತಂಕ ಹೆಚ್ಚು ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಐಟಿ ಕಂಪನಿಗಳ ಕಾರ್ಯಚಟುವಟಿಕೆಯನ್ನೇ ನಂಬಿದ್ದ ಹೋಟೆಲ್ ಕೇಟರ್ಸ್ ಇದೀಗ ಕಂಗಾಲಾಗಿದ್ದಾರೆ.

ಕಳೆದೆರಡು ತಿಂಗಳು ಲಾಕ್ ಡೌನ್ ನಿಂದ ಐಟಿ ಕಂಪನಿ ಮಾತ್ರವಲ್ಲ, ಇಡೀ ಎಲ್ಲ ಉದ್ಯಮಗಳು ಮಕಾಡೆ ಮಲಗಿದ್ದವು. ಲಾಕ್ ಡೌನ್ ಸಡಲಿಕೆ ಬಳಿಕ ಒಂದಷ್ಟು ಜನಜೀವನ ಸಹಜ ಸ್ಥಿತಿಗೆ ಬರಲು ಆರಂಭಿಸಿತು. ಆದರೆ ಐಟಿ ಕಂಪನಿಗಳು ಮಾತ್ರ ಯಾವುದೇ ಚಾನ್ಸ್ ತೆಗೆದುಕೊಳ್ಳದೇ ತಮ್ಮ‌ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆಯನ್ನೇ ಮುಂದುವರೆಸಿದೆ. ಇದರ ಪರಿಣಾಮ ಐಟಿ ಕಂಪನಿಗಳು ತೆರೆಯುವುದನ್ನೇ ನಂಬಿದ್ದ ಕೇಟರ್ಸ್ ಗೆ ಬಹಳ ದೊಡ್ಡ ಅಘಾತವಾಗಿದೆ.

ಇತ್ತೀಚೆಗೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವುದು ಅದರಲ್ಲೂ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಮಾತು ಕೇಳಿಬರುತ್ತಿರುವುದು ಕೇಟರ್ಸ್ ಇನ್ನಷ್ಟು ಕಂಗಾಲಾಗಿದ್ದಾರೆ. ಅಂದಹಾಗೆ ಬೆಂಗಳೂರಿನಲ್ಲಿಯೇ ಹನ್ನೆರಡು ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಇದರಲ್ಲಿ 45 ಪ್ರಮುಖ ಐಟಿ ಕಂಪನಿಗಳಿವೆ. ಇಂತಹ ಪ್ರತಿ ಕಂಪನಿಯಲ್ಲಿ ತಲಾ 5-10 ಸಾವಿರ ಐಟಿ ಉದ್ಯೋಗಿಗಳಿದ್ದಾರೆ. ಐಟಿ ಕಂಪನಿಗಳಿಗೆ ಪ್ರತಿದಿನ ಒಂದುವರೆ ಲಕ್ಷ ಊಟದ ಬೇಡಿಕೆ ಕೇಟರ್ಸ್ ಗೆ ಬರುತ್ತಿತ್ತು. ಇದನ್ನೇ ನಂಬಿ ಮೂರು ಸಾವಿರಕ್ಕೂ ಹೆಚ್ಚು ಕೇಟರ್ಸ್ ಗಳು, ಇವರ ಅಡಿಯಲ್ಲಿ  ಒಂದೂವರೆ ಲಕ್ಷಕ್ಕೂ ಹೆಚ್ಚು ಸಿಬ್ಬಂದಿ‌ ಕೆಲಸ ಮಾಡುತ್ತಿದ್ದರು.

ಆದರೀಗ ಐಟಿ ಕಂಪನಿಗಳಿಲ್ಲದೆ, ಕೇಟರಿಂಗ್ ಆರ್ಡರ್ ಇಲ್ಲದೆ ಸಂಕಷ್ಟದಲ್ಲಿದೆ.‌ ಮೇಲಾಗಿ ಕೊರೋನಾದಿಂದ ಮದುವೆ, ಶುಭ ಕಾರ್ಯಗಳ ಆರ್ಡರ್ ಸಹ ಸಿಗದೆ ಕೇಟರ್ಸ್ ಸಂಕಷ್ಟದಲ್ಲಿದ್ದಾರೆ. ಒಂದೂವರೆ ಲಕ್ಷ ಕಾರ್ಮಿಕರಿಗೆ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಐಟಿ ಕಂಪನಿ‌ ಆರಂಭವಾಗುವುದನ್ನೇ ಕಾಯುತ್ತಿರುವ ಕೇಟರ್ಸ್,​​ ಮೂರು ತಿಂಗಳಿನಿಂದ ಆರ್ಡರ್ ಇಲ್ಲದೆ  ಸಂಕಷ್ಟಕರ ಜೀವನ ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಇಲ್ಲವೇ ಡಿಸೆಂಬರ್​​ನಲ್ಲಿ ಐಟಿ ಕಂಪನಿಗಳು ತೆರೆಯಲಿವೆ. ಇದರಿಂದ ಇನ್ನು ಆರು ತಿಂಗಳು ಕೇಟರಿಂಗ್ ಆರ್ಡರ್ ಸಿಗೋದು ಡೌಟ್. ಅಲ್ಲಿಯವರೆಗೆ ಐಟಿ ಕಂಪನಿ ಕೇಟರಿಂಗ್ ನಂಬಿದವರಿಗೆ ಸಂಕಷ್ಟ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಐಟಿ ಕಂಪನಿಗಳಿಗೆ ಊಟ ನೀಡುವ ಪ್ರತ್ಯೇಕ ಕೇಟರ್ಸ್ ಗಳು ಇದ್ದಾರೆ. ಅನೇಕ ಹೋಟೆಲ್​ಗಳು ಇವೆ. ಆದರೆ ಇವರಿಗೆ ಇದೀಗ‌ ಕೆಲಸವಿಲ್ಲ. ಐಟಿ ಕಂಪನಿಗಳ ಉದ್ಯೋಗಿಗಳು ಮನೆಯಲ್ಲಿಯೇ ಕೆಲಸ ಮಾಡುತ್ತಿರುವುದರಿಂದ ಊಟದ ಬೇಡಿಕೆ ಬರುತ್ತಿಲ್ಲ. ಐಟಿ ಕಂಪನಿಗಳಲ್ಲಿದ್ದ ಕ್ಯಾಂಟೀನ್, ಹೋಟೆಲ್‌ ಬಂದ್ ಆಗಿವೆ. ಇದನ್ನೇ‌ ನಂಬಿದ್ದ ಕೇಟರ್ಸ್ ಹಾಗೂ ಒಂದು ಲಕ್ಷ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ ಸಿ ರಾವ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕಳೆದೆಂಟು ವರುಷದಿಂದ ಕೇಟರಿಂಗ್‌ನಡೆಸುತ್ತಿದ್ದೇವೆ. ನಮ್ಮ ಅಡಿಯಲ್ಲಿ ಕೊರೋನಾ ಮುಂಚೆ ಇನ್ನೂರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರು. ದಿನನಿತ್ಯ ಎರಡು ಸಾವಿರ ಐಟಿ ಉದ್ಯೋಗಿಗಳಿಗೆ ಊಟ ಕೊಡುತ್ತಿದ್ದೆವು. ಆದರೀಗ ಐಟಿ ಕಂಪನಿ ಮುಚ್ಚಿರುವುದರಿಂದ ನಮಗೆ ಆರ್ಡರ್ ಸಿಗುತ್ತಿಲ್ಲ. ಸಣ್ಣಪುಟ್ಟ ಕಚೇರಿ ಊಟಗಳ ಆರ್ಡರ್ ಮಾತ್ರ ಬರುತ್ತಿವೆ. ಸಿಬ್ಬಂದಿಯೂ ಅರ್ಧಕ್ಕರ್ದ ಕಡಿಮೆಯಾಗಿದ್ದಾರೆ ಎಂದು ಹಳ್ಳಿಮನೆ‌ ಕೇಟರ್ಸ್ ರಾಘವೇಂದ್ರ ಹೇಳುತ್ತಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading